More

    ಕಂಟಕವಾಗಿದ್ದ ಪೋಲಿಯೋದಿಂದ ಮುಕ್ತಿ

    ನಂಜನಗೂಡು: ಸುದೀರ್ಘ ವರ್ಷಗಳ ಕಾಲ ದೇಶಕ್ಕೆ ಕಂಟಕವಾಗಿ ಕಾಡಲಾರಂಭಿಸಿದ್ದ ಪೋಲಿಯೋ ಕಾಯಿಲೆಗೆ ನಿಯಮಿತವಾಗಿ ಲಸಿಕೆ ಹಾಕುವ ಮೂಲಕ ಕ್ರಮೇಣ ಹತೋಟಿಗೆ ಬಂದ ಪರಿಣಾಮ ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡಲು ಸಾಧ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠರಾಜೇ ಅರಸ್ ಹೇಳಿದರು.
    ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
    ಹುಟ್ಟುವ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಂಗವೈಕಲ್ಯ, ನ್ಯೂನ್ಯತೆಯು ಮಕ್ಕಳ ಆತ್ಮವಿಶ್ವಾಸವನ್ನೇ ಕಸಿದುಕೊಳ್ಳುತ್ತಿತ್ತು. ಇದರ ನಿಯಂತ್ರಣಕ್ಕೆ ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಚಿತವಾಗಿ ಲಸಿಕೆ ಹಾಕುವ ಮೂಲಕ ಹತೋಟಿಗೆ ತರಲಾಗಿದೆ. ಇದರಿಂದಾಗಿ ಪ್ರಸ್ತುತ ಭಾರತದಲ್ಲಿ ಪೋಲಿಯೋ ನಿರ್ಮೂಲನೆಯಾಗಿದೆ ಎಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಡಿ.ಕಲಾವತಿ ಮಾತನಾಡಿ, ತಾಲೂಕಿನ 25 ಸಾವಿರ ಮಕ್ಕಳಿಗೆ ಲಸಿಕೆ ಹಾಕಲು ಗುರಿ ಹೊಂದಲಾಗಿದೆ. ಇದಕ್ಕಾಗಿ 224 ಬೂತ್‌ಗಳನ್ನು ತೆರೆಯಲಾಗಿದ್ದು 856 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಿರುವ ಪ್ರಮುಖ ವೃತ್ತಗಳಲ್ಲಿ ಕೌಂಟರ್ ತೆರೆಯಲಾಗಿದೆ. ಮೂರು ದಿನಗಳ ಕಾಲ ಲಸಿಕೆ ಹಾಕುವ ನಿಟ್ಟಿನಲ್ಲಿ ಸಿಬ್ಬಂದಿ ಮನೆ ಮನೆಗೆ ತೆರಳಿ ಸರ್ವೇ ನಡೆಸಲಿದ್ದಾರೆ. ಒಂದು ವೇಳೆ ಲಸಿಕೆಯಿಂದ ಹೊರಗುಳಿದ ಮಕ್ಕಳಿದ್ದಲ್ಲಿ ಲಸಿಕೆ ಕೊಡಿಸುವುದಾಗಿ ತಿಳಿಸಿದರು.
    ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್, ರೋಟರಿ ಅಧ್ಯಕ್ಷ ಪುಟ್ಟರಾಜು, ರೋಟರಿಯನ್‌ಗಳಾದ ಶ್ರೀನಿವಾಸರೆಡ್ಡಿ, ಡಾ.ಧರ್ಮರಾಜ್, ಉಮೇಶ್, ಸುರೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts