More

    ಒನ್ ವೇ ಬೇಡ, ಮೇಲ್ಸೇತುವೆ ಬೇಕು

    ಕುಮಟಾ: ಸರ್ವೀಸ್ ರಸ್ತೆ ಕಾಮಗಾರಿ ಮುಗಿಯುವವರೆಗೂ ದಿವಗಿಯಲ್ಲಿ ಒನ್ ವೇ (ಏಕಮುಖ ಸಂಚಾರ) ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರಿಗೆ ದಿವಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

    ಶನಿವಾರ ಇಲ್ಲಿ ಜಿಲ್ಲಾಧಿಕಾರಿ ಭೇಟಿ ಮಾಡಿದ ಗ್ರಾಮಸ್ಥರು, ದಿವಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಚತುಷ್ಪಥ ನಿರ್ಮಾಣ ಕಾಮಗಾರಿಯ ಲೋಪದೋಷಗಳು ಹಾಗೂ ಅಪಾಯಕಾರಿ ಅಂಶಗಳನ್ನು ವಿವರಿಸಿದರು. ದಿವಗಿಯಲ್ಲಿ ಮೇಲ್ಸೇತುವೆ, ಸರ್ವೀಸ್ ರಸ್ತೆ ನಿರ್ವಣವಾಗಬೇಕು ಹಾಗೂ ಶಿರಸಿ ಮಾರ್ಗದ ತಿರುವಿನಲ್ಲಿ ಅಪಾಯ ತಗ್ಗಿಸುವ ಕೆಲಸವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ಮನವಿಸ್ವೀಕರಿಸಿದ ಜಿಲ್ಲಾಧಿಕಾರಿ, ‘ಇಲ್ಲಿನ ಚತುಷ್ಪಥ ಕುರಿತ ಸಮಸ್ಯೆಯ ಬಗ್ಗೆ ಸರಿಯಾಗಿ ಅಭ್ಯಸಿಸುತ್ತೇನೆ. ಈ ಬಗ್ಗೆ ನಾವೆಲ್ಲರೂ ಕುಳಿತು ಮಾತನಾಡೋಣ. ಇದಕ್ಕಾಗಿ ರ್ಚಚಿಸಲು ಜ. 9ರಂದು ಜಿಲ್ಲಾಧಿಕಾರಿ ಕಚೇರಿಗೆ ಬನ್ನಿ’ ಎಂದು ಹೇಳಿದರು.

    ಈ ವೇಳೆ ಜಿಪಂ ಸದಸ್ಯ ಗಜಾನನ ಪೈ, ಗ್ರಾಪಂ ಅಧ್ಯಕ್ಷ ಕೃಷ್ಣ ಗೌಡ, ಸದಸ್ಯರಾದ ಹೇಮಂತಕುಮಾರ ಗಾಂವ್ಕರ, ಶಂಕರ ಆರ್. ಅಂಬಿಗ, ವಿನಾಯಕ ಯು. ದೇಶಭಂಡಾರಿ ತಾಪಂ ಮಾಜಿ ಅಧ್ಯಕ್ಷ ಜಿ.ಜಿ. ಹೆಗಡೆ, ಮೈಕಲ್ ರೊಡ್ರಿಗೀಸ್, ಶಂಕರ ನಾಯ್ಕ, ಶ್ರೀಧರ ಬಗ್ಗೋಣ ಇನ್ನಿತರರು ಇದ್ದರು.

    ದಿವಗಿಯಲ್ಲಿ ಚತುಷ್ಪಥ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಸರ್ವೀಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ವಣಕ್ಕಾಗಿ ರಾ. ಹೆ. ಇಲಾಖೆಗೆ ಮನವಿ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಸಂಸದ ಅನಂತ ಕುಮಾರ ಹೆಗಡೆ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೂ ಸಮಸ್ಯೆಯನ್ನು ಹೇಳಿ ಮನವಿ ಅರ್ಪಿಸಲಾಗಿತ್ತು. ಆದರೆ, ಏನೂ ಪ್ರಯೋಜನವಾಗಿಲ್ಲ. ಆರ್. ಕೆ. ಅಂಬಿಗ, ಮಾಜಿ ಸದಸ್ಯ ದಿವಗಿ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts