More

    ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡ್ತಿದ್ದವ ಅಂದರ್​

    ಯಡ್ರಾಮಿ: ತಾಲೂಕಿನಲ್ಲಿ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ತಲೆಮರೆಸಿಕೊಳ್ಳುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಡ್ರಾಮಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಾಗರಹಳ್ಳಿ ಗ್ರಾಮದ ಹಣಮಂತ ಭಜಂತ್ರಿ ಬಂಧಿತ ಆರೋಪಿ. ಮಾರ್ಚನಲ್ಲಿ ಹರನಾಳ(ಬಿ) ಗ್ರಾಮದಲ್ಲಿ ಒಬ್ಬಳು ಹಾಗೂ ಮೇ 11ರಂದು ಕುಕನೂರಿನಲ್ಲಿ ಒಬ್ಬಳ ಮರ್ಡರ್ ಮಾಡಿ ಶವವನ್ನು ಹೂತಿಟ್ಟಿದ್ದ. ಈ ಎರಡು ಪ್ರಕರಣಗಳು ಜನರಲ್ಲಿ ಭಯ ಮೂಡಿಸಿದ್ದವು. ಅಲ್ಲದೆ ಮಹಿಳೆಯರು ಹೊಲ ಮತ್ತು ಹೊರಗಡೆ ಒಂಟಿಯಾಗಿ ತಿರುಗಾಡಲು ಭಯಪಡುವಂತಹ ಸ್ಥಿತಿ ನಿಮರ್ಾಣವಾಗಿತ್ತು.

    ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸ್ ಇಲಾಖೆಯು ಎಸ್ಪಿ ಇಶಾ ಪಂತ್, ಡಿವೈಎಸ್ಪಿ ಉಮೇಶ ಚಿಕ್ಕಮಠ, ಸಿಪಿಐ ಭೀಮನಗೌಡ ಬಿರಾದಾರ ಮಾರ್ಗದರ್ಶನದಲ್ಲಿ ಯಡ್ರಾಮಿ ಪಿಎಸ್ಐ ಸಿದ್ದೇಶ್ವರ ಗರಡೆ, ನೆಲೋಗಿ ಪಿಎಸ್ಐ ಅಮೋಜಿ ಕಾಂಬಳೆ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿತ್ತು. ಆರೋಪಿ ಬಗ್ಗೆ ಒಂದಿಷ್ಟು ಮಾಹಿತಿ ಪಡೆದ ತಂಡ ಶಹಾಪುರದಲ್ಲಿ ತಲೆಮರೆಸಿಕೊಂಡಿದ್ದ ಹಣಮಂತ ಭಜಂತ್ರಿಯನ್ನು ಶುಕ್ರವಾರ ರಾತ್ರಿ ಬಂಧಿಸಿದೆ. ಇದರೊಂದಿಗೆ ಪ್ರಕರಣ ದಾಖಲಾದ 24 ಗಂಟೆಯಲ್ಲೇ ಆರೋಪಿ ಅರೆಸ್ಟ್ ಆಗಿದ್ದಾನೆ.

    ಎಎಸ್ಐ ಸುರೇಶಕುಮಾರ, ಸಿಬ್ಬಂದಿ ರವಿ ಬಸರಗಿ, ಅಣ್ಣಪ್ಪ ರಾಠೋಡ್, ಉಮೇಶ ಕಡಕಲ್, ಶಂಕ್ರಣ್ಣ ವಣಿಕ್ಯಾಳ ಇತರರು ತಂಡದಲ್ಲಿದ್ದರು.

    ಅತ್ಯಾಚಾರ ನಂತರ ಕೊಲೆ ಮಾಡ್ತಿದ್ದ !: ಡಬಲ್ ಮರ್ಡರ್ ಆರೋಪಿ ಹಣಮಂತ ಭಜಂತ್ರಿ ಮೂಲತಃ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದವ. ಪತ್ನಿ ಮತ್ತು ಮಕ್ಕಳು ತೆಲಂಗಾಣದಲ್ಲಿ ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಒಬ್ಬನೇ ವಾಸಿಸುತ್ತಿದ್ದು, ಊರೂರು ಅಲೆದು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. 2007ರಲ್ಲಿ ನಾಗರಹಳ್ಳಿಯಲ್ಲೇ ಒಬ್ಬಳ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಅಪರಾಧಿ ಎಂದು ರುಜುವಾಗಿ 15 ವರ್ಷ ಜೈಲು ಶಿಕ್ಷೆಯೂ ಅನುಭವಿಸಿದ್ದ. ಕೋವಿಡ್ ಟೈಮ್ನಲ್ಲಿ ಜೈಲಿನಿಂದ ಹೊರಬಂದಿದ್ದ. ಬಳಿಕ 2023ರ ಮಾರ್ಚನಲ್ಲಿ ಹರಕಂಚಿಯಲ್ಲಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿ ಮಾಡಿ ಕೊಲೆಗೈದಿದ್ದ. ಅಲ್ಲದೆ ಆಭರಣಗಳನ್ನು ದೋಚಿ ಪರಾರಿಯಾಗಿದ್ದ. ಇದಲ್ಲದೆ ಮೇ 11ರಂದು ಬೋರ್ ಪಾಯಿಂಟ್ ಹೇಳುವ ನೆಪದಲ್ಲಿ ಕುಕನೂರದಲ್ಲಿ ಒಬ್ಬಳ ಮೇಲೆ ರೇಪ್ ಮಾಡಿ, ಕೊಲೆಗೈದು ಒಡವೆಗಳನ್ನು ದೋಚಿ ಪರಾರಿಯಾಗಿದ್ದ.

    ಸುಳಿವು ನೀಡಿದ ಮೊಬೈಲ್: ಮಹಿಳೆಯರ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ಯಾವುದೇ ಸುಳಿವು ಬಿಡದೆ ಪರಾರಿಯಾಗುತ್ತಿದ್ದ ಹಣಮಂತ ಭಜಂತ್ರಿ ಅರೆಸ್ಟ್ ಆಗಿರುವುದೇ ರೋಚಕ. ಹರನಾಳ(ಬಿ) ಗ್ರಾಮದಲ್ಲಿ ಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ, ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಕುಕನೂರಿನಲ್ಲಿ ಒಬ್ಬಳ ಕೊಲೆ ಮಾಡಬೇಕಾದರೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾನೆ. ಹೊಲದಲ್ಲಿ ಬೋರ್ ಹಾಕಲು ಪಾಯಿಂಟ್ ಹೇಳುವುದಾಗಿ ಆಕೆ ಜತೆ ಹೊಲದತ್ತ ಹೋಗುವುದನ್ನು ಜನರು ನೋಡಿದ್ದಾರೆ. ಅಲ್ಲದೆ ಮೊಬೈಲ್ ಲೋಕೇಶನ್ ಆಧರಿಸಿ ಶಹಾಪುರದಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿಕೊಂಡ ಬಳಿಕ ತಂಡದೊಂದಿಗೆ ತೆರಳಿ ಅರೆಸ್ಟ್ ಮಾಡಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts