More

    ಐವರು ಕಳ್ಳರ ಬಂಧನ

    ಯಲಬುರ್ಗಾ(ಕೊಪ್ಪಳ): ಸರ್ಕಾರಿ ಕಾಮಗಾರಿಗೆ ಬಳಸಿದ್ದ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಗುರುವಾರ ಪೊಲೀಸರು ಬಂಧಿಸಿದ್ದು, ನಗದು ಸೇರಿ ಒಟ್ಟು 6.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.


    ವಜ್ರಬಂಡಿಯ ದೇವಪ್ಪ ಭಜಂತ್ರಿ, ಕೊಪ್ಪಳದ ಕವಲೂರು ಓಣಿಯ ಯಮನೂರಪ್ಪ ಭಜಂತ್ರಿ, ಶಿವರಾಜ ಭಜಂತ್ರಿ, ತಾಯಪ್ಪ ಭಜಂತ್ರಿ, ಬಸವರಾಜ ಕೊರವರ ಬಂಧಿತರು.


    ಸಮೀಪದ ಕುದರಿಮೋತಿ ಸೀಮಾದ ಮಹ್ಮದ್‌ಸಾಬ್ ಜಮೀನಲ್ಲಿ ನಡೆಯುತ್ತಿದ್ದ ಕೊಪ್ಪಳ ಏತ ನೀರಾವರಿ ಯೋಜನೆಯ 3ನೇ ಹಂತದ ಪ್ಯಾಕೇಜ್ ಕಾಮಗಾರಿಗಾಗಿ ಸಂಗ್ರಹಿಸಿದ್ದ ಕಂಟ್ರೋಲ್‌ವಾಲ್ ಪೈಪ್‌ಗಳು ಹಾಗೂ ಇತರ ವಸ್ತುಗಳನ್ನು ಕಳ್ಳತನವಾಗಿದ್ದವು. 2015-16ರಲ್ಲಿ ಮಂಗಳೂರು ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಬ್ಯಾರೇಜ್ ಕಂ. ಬ್ರಡ್ಜ್‌ಗೆ ಅಳವಡಿಸಿದ್ದ 5 ಟನ್ 76 ಕೆ.ಜಿ. ತೂಕದ 60 ಕಬ್ಬಿಣದ ಎಲಿಮೆಂಟ್ಸ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ತಾಲೂಕಿನ ಬೇವೂರು ಠಾಣೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


    ಬಂಧಿತರಿದಂ 3.50 ಲಕ್ಷ ರೂ. ನಗದು, ಮೂರು ಲಕ್ಷ ರೂ. ಬೆಲೆ ಬಾಳುವ ಅಶೋಕ ಲೈಲ್ಯಾಂಡ್ ವಾಹನ, ಮೂರು ಮೊಬೈಲ್ ಫೋನ್ ಸೇರಿ 6.50 ಲಕ್ಷ ರೂ. ಕಿಮ್ಮತ್ತನ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಜಿಲ್ಲಾ ಅಧೀಕ್ಷಕರು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.


    ಖವೈಎಸ್‌ಪಿ ಶರಣಪ್ಪ ಸುಬೇದಾರ, ಸಿಪಿಐ ಮೌನೇಶ್ವರ ಪಾಟೀಲ್, ಪಿಎಸ್‌ಐ ಪ್ರಶಾಂತ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts