More

    ಎಲ್ಲರೂ ಭಾವೈಕ್ಯದಿಂದ ಹಬ್ಬ ಆಚರಿಸಬೇಕು

    ಚನ್ನಮ್ಮ ಕಿತ್ತೂರು: ಹಿಂದು-ಮುಸ್ಲಿಂ ಭಾವೈಕ್ಯದಿಂದ ಹಬ್ಬ ಆಚರಿಸಬೇಕು ಎಂದು ಸಿಪಿಐ ಮಹಾಂತೇಶ ಹೊಸಪೇಟ ಹೇಳಿದರು.

    ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಗಣೇಶ ಹಾಗೂ ಇಸ್ತಮಾ, ಈದ್ ಮಿಲಾದ್ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಸಾರ್ವಜನಿಕರು ಸಹಕಾರದಿಂದ ಹಬ್ಬ ಆಚರಿಸಬೇಕು ಎಂದರು.

    ಪಿಎಸ್‌ಐ ಪ್ರವೀಣ ಗಂಗೊಳ್ಳಿ ಮಾತನಾಡಿ, ಸಾರ್ವಜನಿಕರು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಭಯ ಭಕ್ತಿಯಿಂದ ಕಾಯುವ ಜತೆಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹಬ್ಬ ಆಚರಿಸಬೇಕು. ಸಾರ್ವಜನಿಕ ಗಣೇಶ ವಿಸರ್ಜನೆಯನ್ನು ಒಂದೇ ಮಾರ್ಗವಾಗಿ ತುಂಬುಗೇರಿ ಕೆರೆಗೆ ವಿಸರ್ಜನೆ ಮಾಡಬೇಕು ಎಂದರು.
    ಪಪಂ ಮುಖ್ಯಾಧಿಕಾರಿ ಎಂ.ಡಿ.ಹಿರೇಮಠ ಮಾತನಾಡಿ, ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಹಸಿರು ಪಟಾಕಿ ಹಾರಿಸುವ ಮೂಲಕ ಪರಿಸರವನ್ನು ಕಾಪಾಡಬೇಕೆಂದು ತಿಳಿಸಿದರು.

    ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಬದ್ಧ ಎಂದು ಸಾರ್ವಜನಿಕರು ಭರವಸೆ ನೀಡಿದರು. ಗ್ರೇಡ್-2 ತಹಸೀಲ್ದಾರ್ ಆರ್.ಎಸ್.ನೇಸರ್ಗಿ, ತಾಪಂ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ, ದಿನೇಶ ವಳಸಂಗ, ಎಂ.ಎ್.ಜಪಾತಿ, ಶಿವಾನಂದ ಹಿರೇಮಠ, ಅಶ್ರ್ ಸುತಗಟ್ಟಿ, ಮಂಜುನಾಥ ತೊಟ್ಟಲಮನಿ, ಮುಸ್ತಾಕ್ ಸುತಗಟ್ಟಿ, ಕುತುಬುದ್ದಿನ್ ಮುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts