More

    ಎಲ್ಲರೂ ಆರೋಗ್ಯದ ಕಾಳಜಿ ವಹಿಸಿ

    ಕೆಂಭಾವಿ: ಭಾರತೀಯ ಸಂಪ್ರದಾಯದಲ್ಲಿ ವೈದ್ಯರನ್ನು ದೇವರಿಗೆ ಹೋಲಿಕೆ ಮಾಡಿದ್ದು, ಆಪತ್ಕಾಲದಲ್ಲಿ ಮನುಷ್ಯನ ಜೀವವನ್ನು ಕಾಪಾಡಿದವನೆ ನಿಜವಾದ ವೈದ್ಯನಾಗಿ ದೇವರಾಗಿ ಬಿಂಬಿತವಾಗುತ್ತಾರೆ ಎಂದು ಪುರಸಭೆ ಸದಸ್ಯ ಶ್ರೀಧರ ದೇಶಪಾಂಡೆ ಹೇಳಿದರು.

    ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಶಾಲೆಯಲ್ಲಿ ಕಲ್ಯಾಣ ನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ನುಡಿಸಿರಿ ಟ್ರಸ್ಟ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅನಾರೋಗ್ಯ ಪೀಡಿತ ರೋಗಿಯ ಮನಸ್ಸನ್ನು ಸಮಾಧಾನಗೊಳಿಸಿ ಅವರನ್ನು ಆರೋಗ್ಯವಂತರನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ವೈದ್ಯರ ಮೇಲಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವೈದ್ಯರ ಸಲಹೆ ಪಡೆಯಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆದು ಸೂಕ್ತ ಔಷಧಿ ತೆಗೆದುಕೊಳ್ಳುವಂತೆ ಹೇಳಿದರು.

    ಸಪ್ತಗಿರಿ ಆಸ್ಪತ್ರೆಯ ಡಾ.ಸಂತೋಷ ಮಾತನಾಡಿ, ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಕಲ್ಲು ಸೇರಿ ಇನ್ನಿತರೆ ಕಾಯಿಲೆಗಳಿಗೆ ನಮ್ಮ ಆಸ್ಪತ್ರೆಯಿಂದ ಉಚಿತ ತಪಾಸಣೆ ಮಾಡಲಾಗುವುದು ಎಂದರು.

    ನುಡಿಸಿರಿ ಟ್ರಸ್ಟ್ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ಶರಣಬಸ್ಸು ಡಿಗ್ಗಾವಿ, ಪುರಸಭೆ ಸದಸ್ಯರಾದ ರವಿ ಸೊನ್ನದ, ಆರೀಫ್ ಖಾಜಿ, ಮಾಜಿ ಸದಸ್ಯರಾದ ಮುದಿಗೌಡ ಮಾಲಿಪಾಟೀಲ್, ರಾಘವೇಂದ್ರ ದೇಶಪಾಂಡೆ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕಣರ್ಿ, ಮುಖಂಡ ಬಸವರಾಜ ಚಿಂಚೋಳಿ, ಶಿವನಗೌಡ ಕರಡಕಲ್ ಇದ್ದರು.

    ನಿಂಗಣ್ಣ ವಡಗೇರಿ ನಿರೂಪಣೆ ಮಾಡಿದರು. ಬಸವರಾಜ ಸಿನ್ನೂರ ಸ್ವಾಗತಿಸಿದರು. ಶ್ರೀಶೈಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts