More

    ಎರಡೇ ಪ್ಯಾಕೇಜ್​ನಲ್ಲಿ 16 ಲಕ್ಷ ರೂ.

    ಹುಬ್ಬಳ್ಳಿ: ವರ್ಷಕ್ಕೂ ಹೆಚ್ಚು ಸಮಯದಿಂದ ಸ್ಥಗಿತಗೊಂಡಿದ್ದ ಪೇಯ್್ಡ ರ್ಪಾಂಗ್ (ವಾಹನ ನಿಲುಗಡೆಗೆ ಶುಲ್ಕ) ವ್ಯವಸ್ಥೆ ನಗರದಲ್ಲಿ ಮತ್ತೆ ಕಾಲಿಟ್ಟಿದೆ. ವಾರದ ಹಿಂದೆ ವಾಣಿಜ್ಯ ನಗರಿಯಲ್ಲಿ ಆರಂಭಗೊಂಡಿರುವ ಈ ವ್ಯವಸ್ಥೆ ಸದ್ಯದಲ್ಲೇ ಧಾರವಾಡದಲ್ಲೂ ಜಾರಿಯಾಗಬಹುದು.

    ರ್ಪಾಂಗ್​ಗೆ ಸೂಚಿಸಿರುವ ನಿರ್ದಿಷ್ಟ ಸ್ಥಳಗಳಲ್ಲಿ ವಾಹನ ನಿಲುಗಡೆ ಶುಲ್ಕ ಆಕರಣೆಗೆ ಹುಬ್ಬಳ್ಳಿ (8) ಮತ್ತು ಧಾರವಾಡ (2) ಸೇರಿ 10 ಪ್ಯಾಕೇಜ್​ಗಳಿಗೆ ಪಾಲಿಕೆ ಟೆಂಡರ್ ಕರೆದಿತ್ತು. ಇವುಗಳಲ್ಲಿ 2 ಪ್ಯಾಕೇಜ್​ಗಳಿಗೆ ಅನುಮೋದನೆ ನೀಡಿದ್ದು, ಗುತ್ತಿಗೆ ಪಡೆದವರು ಶುಲ್ಕ ಆಕರಣೆ ಆರಂಭಿಸಿದ್ದಾರೆ. ಕೇವಲ 2 ಪ್ಯಾಕೇಜ್​ಗಳಿಂದ ಪಾಲಿಕೆಗೆ 16,11,055 ರೂ. ಆದಾಯ ಬಂದಿದೆ. ಉಳಿದ ಪ್ಯಾಕೇಜ್​ಗಳಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ಅನುಮೋದನೆ ಪಡೆದಿಲ್ಲ. ಕೆಲವೊಂದು ಸಮಾಲೋಚನೆ ಹಂತದಲ್ಲಿವೆ.

    ಕೊಪ್ಪಿಕರ ರಸ್ತೆಯಲ್ಲಿ ವಾಹನ ನಿಲುಗಡೆ ಶುಲ್ಕ ಆಕರಣೆ ಗುತ್ತಿಗೆಯನ್ನು 8.20 ಲಕ್ಷ ರೂ. ಗೆ ಅರುಣ ಶಿರ್ಕೆ ಪಡೆದುಕೊಂಡಿದ್ದಾರೆ. ದುರ್ಗದಬೈಲ್ ವೃತ್ತ, ಬಾಕಳೆಗಲ್ಲಿ, ಮೈಸೂರ ಸ್ಟೋರ್ಸ್ ಕ್ರಾಸ್​ವರೆಗೆ ಗುತ್ತಿಗೆಯನ್ನು 7,91,055 ರೂ. ಮೊತ್ತಕ್ಕೆ ಆಸೀಫ್ ನದಾಫ್ ಪಡೆದಿದ್ದಾರೆ. ಇದು 1 ವರ್ಷ ಅವಧಿಯ ಗುತ್ತಿಗೆ. ದ್ವಿಚಕ್ರ ವಾಹನಗಳಿಗೆ 5 ರೂ. ಹಾಗೂ ಕಾರ್, ಜೀಪ್​ಗಳಿಗೆ 10 ರೂ. ರ್ಪಾಂಗ್ ಶುಲ್ಕ ನಿಗದಿಪಡಿಸಲಾಗಿದೆ.

    ಗಮನಾರ್ಹ ಸಂಗತಿಯೆಂದರೆ, ಗೊತ್ತು ಪಡಿಸಿರುವ ಪೇಯ್್ಡ ರ್ಪಾಂಗ್ ಸ್ಥಳದಲ್ಲಿ ಅಧಿಕೃತ ಬೋರ್ಡ್ ಹಾಕಲಾಗಿದೆ. ಶುಲ್ಕ ವಸೂಲಿ ಮಾಡುವ ಗುತ್ತಿಗೆದಾರರ ಸಿಬ್ಬಂದಿ ಗುರುತಿನ ಚೀಟಿ ಹಾಗೂ ಭಿನ್ನವಾದ ಪೋಷಾಕು ಧರಿಸಿರುತ್ತಾರೆ.

    ಆಡಳಿತಾಧಿಕಾರಿ ಅವಧಿ

    ಹು-ಧಾ ಮಹಾನಗರ ಪಾಲಿಕೆಯಲ್ಲಿ ಕಳೆದ 10 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಇಲ್ಲಿಯ ಆಡಳಿತಾಧಿಕಾರಿಯಾಗಿದ್ದಾರೆ. ಆಡಳಿತಾತ್ಮಕ ವಿಷಯಗಳಿಗೆ ಅವರೇ ಅನುಮೋದನೆ ನೀಡುವವರು. ಪೇಯ್್ಡ ರ್ಪಾಂಗ್​ಗೆ ಅವರ ಒಪ್ಪಿಗೆಯನ್ನೇ ಪಡೆಯಲಾಗಿದೆ.

    ಈ ಹಿಂದೆ ಜನಪ್ರತಿನಿಧಿಗಳ ಆಡಳಿತವಿದ್ದ ಅವಧಿಯಲ್ಲಿ ಪೇಯ್್ಡ ರ್ಪಾಂಗ್ ರದ್ದು ಪಡಿಸಲಾಗಿತ್ತು. ರ್ಪಾಂಗ್ ಗುತ್ತಿಗೆ ಹಿಡಿದವರು ಸಾರ್ವಜನಿಕರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಗರದೆಲ್ಲೆಡೆ ಪೇಯ್್ಡ ರ್ಪಾಂಗ್ ವ್ಯವಸ್ಥೆ ಜಾರಿಗೆ ತಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ನಾಲ್ಕೈದು ಕೆಲಸಗಳಿಗಾಗಿ ನಗರಕ್ಕೆ ಬರುವ ಒಬ್ಬ ವ್ಯಕ್ತಿ ನಾಲ್ಕೈದು ಕಡೆ ವಾಹನ ರ್ಪಾಂಗ್ ಮಾಡಬೇಕಾಗುತ್ತದೆ. ಆಗ, ಒಂದೇ ದಿನಕ್ಕೆ ನಾಲ್ಕೈದು ಕಡೆ ವಾಹನ ನಿಲುಗಡೆ ಶುಲ್ಕ ಪಾವತಿಸುವುದು ದುಬಾರಿಯಾಗುತ್ತದೆ ಎಂಬುದು ಸಾರ್ವಜನಿಕರ ವಾದವಾಗಿತ್ತು. ಈಗಲೂ ಸಹ ಈ ವಿಷಯದಲ್ಲಿ ಪಾಲಿಕೆ ವಿಚಾರ ಮಾಡಿದಂತೆ ಇಲ್ಲ. ಟೆಂಡರ್ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದೆಲ್ಲ ಪಾಲಿಕೆ ಹೇಳುತ್ತದೆ. ಆದರೆ, ಅದೆಲ್ಲ ಆಗುವ ಕೆಲಸವಲ್ಲ.

    ಅವಳಿ ನಗರದಲ್ಲಿ ರ್ಪಾಂಗ್ ವ್ಯವಸ್ಥೆ ಸುಧಾರಿಸಬೇಕಾದರೆ ಹೆಚ್ಚು ಕಡೆ ಪೇಯ್್ಡ ರ್ಪಾಂಗ್ ವ್ಯವಸ್ಥೆ ಬರಬೇಕು ಎಂಬುದು ಪಾಲಿಕೆಯ ವಾದ. ಸೂಕ್ತ ರ್ಪಾಂಗ್ ಸ್ಥಳವನ್ನು ಪೊಲೀಸ್ ಇಲಾಖೆ ಗುರುತಿಸುತ್ತದೆ. ಬಹುಮಹಡಿ ಕಟ್ಟಡಗಳಲ್ಲಿ ರ್ಪಾಂಗ್ ಸ್ಥಳ ಅತಿಕ್ರಮಣವಾಗಿರುತ್ತದೆ. ರ್ಪಾಂಗ್ ಸ್ಥಳ ಖುಲ್ಲಾ ಇದ್ದರೂ ಸಾರ್ವಜನಿಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದು ಅವಳಿ ನಗರದಲ್ಲಿ ಸಾಮಾನ್ಯವಾಗಿದೆ.

    ಪೇಯ್್ಡ ರ್ಪಾಂಗ್ ಇರುವ ಸ್ಥಳದಲ್ಲಿ ದ್ವಿಚಕ್ರ ವಾಹನಗಳು 5 ರೂ. ಹಾಗೂ ಕಾರು, ಜೀಪ್ ಇನ್ನಿತರ ಲಘು ವಾಹನಗಳು 10 ರೂ. ರ್ಪಾಂಗ್ ಶುಲ್ಕ ಪಾವತಿಸಬೇಕು. ಇದರಲ್ಲಿ ಗಂಟೆ ಲೆಕ್ಕ ಬೇರೆ ಇರುವುದಿಲ್ಲ.

    ಪಿ.ಡಿ. ಗಾಳೆಮ್ಮನವರ್, ಉಪ ಆಯುಕ್ತರು (ಕಂದಾಯ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts