More

    ಎಂಪಿಎಂ ಪುನಾರಂಭಕ್ಕೆ ಬೆಂಗಳೂರಿನಲ್ಲಿ ಸಭೆ

    ಭದ್ರಾವತಿ: ನಗರದ ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನ ಕುರಿತು ಬೆಂಗಳೂರಿನಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿವಿಧ ಕಂಪನಿ ಮುಖ್ಯಸ್ಥರು, ಅಧಿಕಾರಿಗಳ ಜತೆ ಕಾರ್ಖಾನೆ ಪುನಾರಾಂಭಿಸುವ ಬಗ್ಗೆ ರ್ಚಚಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಎಂಪಿಎಂ ಕಾರ್ಖಾನೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹಿತದೃಷ್ಟಿಯಿಂದ ಅನುಕೂಲವಾಗುವ ರೀತಿಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗಿದೆ.

    ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಪದಾಧಿಕಾರಿಗಳು ಜ.7ರಂದು ವಿಐಎಸ್​ಎಲ್ ಎಂಪ್ಲಾಯಿಸ್ ಅಸೋಸಿಯೇಶನ್ ಕಚೇರಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ ಕಾರ್ವಿುಕರ ಸಮಸ್ಯೆ ಬಗ್ಗೆ ರ್ಚಚಿಸಿ ಮನವಿ ಸಲ್ಲಿಸಿದ್ದರು. ಕಾರ್ಖಾನೆ ಮಾನವ ಸಂಪನ್ಮೂಲವನ್ನು ಶೂನ್ಯಗೊಳಿಸಲು ಹೊರಡಿಸಿರುವ ಆದೇಶ ಹಿಂಪಡೆದು ಈಗಿರುವ 220 ನೌಕರರಿಗೆ ಸೇವಾ ಭದ್ರತೆ ನೀಡಬೇಕು. ಈಗಾಗಲೆ ವಿವಿಧ ನಿಗಮ ಮಂಡಳಿಗಳಿಗೆ ನಿಯೋಜನೆ ಮೇರೆಗೆ ತೆರಳಿರುವ ಕಾರ್ವಿುಕರನ್ನು ಆಯಾ ಇಲಾಖೆಯಲ್ಲಿಯೇ ವಿಲೀನಗೊಳಿಸಬೇಕು. ಕಾರ್ಖಾನೆ ಪುನಾರಂಭಿಸಿ ಸ್ಥಳೀಯ ವಿದ್ಯಾವಂತ ಯುವಕರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು. ಈಗಾಗಲೆ 779 ಕಾರ್ವಿುಕರು ಸ್ವಯಂ ನಿವೃತ್ತಿ ಪಡೆದಿದ್ದು ಅವರಿಗೆ ಮೊದಲ ಕಂತಿನ ಹಣ ಮಾತ್ರ ನೀಡಲಾಗಿದೆ. 2ನೇ ಕಂತಿನ ಹಣ ಹಾಗೂ ಶೇ.30 ಕಡಿತಗೊಳಿಸಿದ ಹಣ, ಸೂಪರ್ ಆನ್ಯುಯೇಷನ್, ಪಿಂಚಣಿ ಹಣ ನೀಡಲು ಸಹಕರಿಸುವುದೂ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗಿತ್ತು.

    ಕಾರ್ವಿುಕರ ಬೇಡಿಕೆ ಆಲಿಸಿದ ಬಿ.ವೈ.ರಾಘವೇಂದ್ರ, ಕಾರ್ವಿುಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಜತೆ ರ್ಚಚಿಸಿ ವಿಧಾನಸಭೆ ಅಧಿವೇಶದಲ್ಲಿ ಪ್ರಸ್ತಾಪಿಸಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯನ್ನು ಕೈಬಿಟ್ಟು ಕಾರ್ಖಾನೆ ಪುನಾರಂಭವಾಗುವ ಲಕ್ಷಣ ಗೋಚರವಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಐಎಎಸ್ ಅಧಿಕಾರಿ ಮಣಿವಣ್ಣನ್, ಸಿಎಂ ಸಲಹೆಗಾರ ಲಕ್ಷ್ಮೀನಾರಾಯಣ, ಎಸ್.ಎಸ್.ಜ್ಯೋತಿಪ್ರಕಾಶ್, ಎಂಪಿಎಂ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts