More

    ಎಂಎಸ್​ಪಿ ದರ ಪ್ರತಿವರ್ಷ ಹೆಚ್ಚಳ

    ಹಾನಗಲ್ಲ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬೆಳೆಗಳ ಎಂಎಸ್​ಪಿ ದರವನ್ನು ಪ್ರತಿವರ್ಷ ಹೆಚ್ಚಿಸುತ್ತಿದ್ದು, ಸಣ್ಣ-ಅತಿಸಣ್ಣ ರೈತರಿಗೆ ಅನುಕೂಲವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಸಹಯೋಗದಲ್ಲಿ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ತಾಲೂಕಿನಲ್ಲಿ 19,760 ರೈತರಿದ್ದಾರೆ. ಒಟ್ಟು 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ, ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರದ ಮಿಲ್ಲರ್ ಪಾಯಿಂಟ್ ತಡಸದಲ್ಲಿ ಸ್ಥಾಪಿಸಲಾಗಿದೆ. ಸಣ್ಣ ರೈತರು ಅಲ್ಲಿಗೆ ಭತ್ತ ಕೊಂಡೊಯ್ಯುವುದು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾನಗಲ್ಲಿನ ಎಪಿಎಂಸಿ ಆವರಣದಲ್ಲಿ ಮಿಲ್ಲರ್ ಪಾಯಿಂಟ್ ಸ್ಥಾಪನೆಯಾಗಬೇಕು ಎಂಬ ಆಗ್ರಹ ರೈತರಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸುತ್ತೇನೆ ಎಂದರು.

    ಎಪಿಎಂಸಿ ಅಧ್ಯಕ್ಷ ಶೇಖಣ್ಣ ಮಹರಾಜಪೇಟ್ ಮಾತನಾಡಿ, ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 1815 ರಿಂದ ಗರಿಷ್ಠ 1835 ರೂ. ನಿಗದಿಪಡಿಸಲಾಗಿದೆ. ಕೃಷಿ ಇಲಾಖೆ ಅಳವಡಿಸಿದ ಬೆಳೆ ಸಮೀಕ್ಷೆ ದಾಖಲೆ ಆಧರಿಸಿ ಭತ್ತ ಖರೀದಿಸಲಾಗುವುದು. ಪಹಣಿ ಪತ್ರಿಕೆಯಲ್ಲಿ ಭತ್ತ ಎಂದು ನಮೂದಿಸದಿದ್ದಲ್ಲಿ ಖರೀದಿಸಲು ಸಾಧ್ಯವಾಗುವುದಿಲ್ಲ. ಭತ್ತದ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದರು.

    ಉಪಾಧ್ಯಕ್ಷೆ ಸುಜಾತಾ ಪಸಾರದ, ಸದಸ್ಯೆ ಶಾಂತವ್ವ ಪಾಟೀಲ, ಶಿವಯೋಗಿ ವಡೆಯರ, ರಾಜಣ್ಣ ಪಟ್ಟಣದ, ಪದ್ಮನಾಭ ಕುಂದಾಪುರ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ರಾಜು ಗೌಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಇಎ ದೇವೇಂದ್ರಪ್ಪ ಕಡ್ಲೇರ, ಎಪಿಎಂಸಿ ಕಾರ್ಯದರ್ಶಿ ಬಸವರಾಜ ಪರಮಶೆಟ್ಟಿ, ಆರ್.ಕೆ. ಪಾಟೀಲ, ನಾಗರಾಜ ಉಪಸ್ಥಿತರಿದ್ದರು.

    ಭತ್ತ ಬೆಳೆಯಲು ನಮ್ಮ ರೈತರು ಅಧಿಕ ನೀರನ್ನು ಪೋಲು ಮಾಡುತ್ತಿದ್ದಾರೆ. ಕಡಿಮೆ ನೀರಿನ ಬಳಕೆಯಲ್ಲಿ ಅಧಿಕ ಬೆಳೆ ತೆಗೆಯುವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನೀರು ಉಳಿಸಿ ಕೊಡುಗೆಯಾಗಿ ನೀಡಬೇಕಿದೆ. ನೀರಿನ ಮೌಲ್ಯ ಕಾಪಾಡಬೇಕಿದೆ.

    | ಶಿವಕುಮಾರ ಉದಾಸಿ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts