More

    ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

    ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ ಉಬರ್ ಈಟ್ಸ್​ ಪಾಲಾಗಿದ್ದ ಭಾರತದ ಫುಡ್ ಡೆಲಿವರಿ ಮತ್ತು ರೆಸ್ಟೋರಂಟ್ ಡಿಸ್ಕವರಿ ಪ್ಲಾಟ್​ಫಾರಂನ ಶೇಕಡ 9.9 ಮಾರುಕಟ್ಟೆ ವಹಿವಾಟು ಇನ್ನು ಜೊಮ್ಯಾಟೋದ್ದಾಗಲಿದೆ.

    ಈ ವಹಿವಾಟಿನೊಂದಿಗೆ ಉಬರ್ ಈಟ್ಸ್ ಭಾರತೀಯ ಮಾರುಕಟ್ಟೆಯಿಂದ ಹಿಂದೆ ಸರಿದಿದೆ. 35 ದಶಲಕ್ಷ ಡಾಲರ್ (ಅಂದಾಜು 2,492 ಕೋಟಿ ರೂಪಾಯಿ) ನ ವಹಿವಾಟು ಇದಾಗಿದೆ.  ಉಬರ್ ಈಟ್ಸ್​ನ ಆ್ಯಪ್​ ಇನ್ನು ಜೊಮ್ಯಾಟೋ ಆ್ಯಪ್​ ಜತೆಗೆ ವಿಲೀನವಾಗಲಿದ್ದು, ಗ್ರಾಹಕರು ಜೊಮ್ಯಾಟೋ ಆ್ಯಪ್​ನಲ್ಲಿ ಸ್ಥಾನಪಡೆಯಲಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ ಈ ಬಗ್ಗೆ ದಾಖಲೆ ಸಲ್ಲಿಸಿರುವ ಜೊಮ್ಯಾಟೋದ ಪಾಲುದಾರ ಕಂಪನಿ ಇನ್ಫೋ ಎಡ್ಜ್​(ಇಂಡಿಯಾ), ಜೊಮ್ಯಾಟೋದಲ್ಲಿ ತನ್ನ ಪಾಲುಯ ಶೇಕಡ 22.71ಕ್ಕೆ ಇಳಿಕೆಯಾಗಿದೆ ಎಂದು ಹೇಳಿಕೊಂಡಿದೆ.

    ಈ ನಡುವೆ, ಜೊಮ್ಯಾಟೋ ಕಂಪನಿಯ ಅಲಿಬಾಬಾದ ಅಧೀನ ಸಂಸ್ಥೆ ಆ್ಯಂಟ್ ಫಿನಾನ್ಶಿಯಲ್​ ನಿಂದ 150 ದಶಲಕ್ಷ ಡಾಲರ್ ಹೂಡಿಕೆ ಮಾಡಿಸಿಕೊಂಡ ಕೆಲವೇ ದಿನದಲ್ಲಿ ಉಬರ್ ಈಟ್ಸ್​ ಜತೆಗಿನ ಡೀಲ್​ ಕುದುರಿದೆ.ಉಬರ್ ಈಟ್ಸ್ ವ್ಯವಹಾರ ಭಾರತದಲ್ಲಿ 2017ರಲ್ಲಿ ಆರಂಭವಾಗಿದ್ದು, 41 ನಗರಗಳಲ್ಲಿ 26,000 ರೆಸ್ಟೋರೆಂಟ್​ಗಳು ಪಟ್ಟಿ ಸೇರಿಕೊಂಡಿದ್ದವು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts