More

    ಉದಯ ಶಂಕರ್ ಸಾಹಿತ್ಯದಲ್ಲಿದೆ ಸಮಾಜ ಸುಧಾರಣೆ ಸಂದೇಶ

     ಚಿಕ್ಕಮಗಳೂರು: ಚಲನಚಿತ್ರ ಸಾಹಿತಿ ಚಿಂತನಹಳ್ಳಿ ಉದಯಶಂಕರ್ ಅವರ ಸಾಹಿತ್ಯದಲ್ಲಿ ಸಮಾಜ ಸುಧಾರಣೆಗೆ ಪೂರಕವಾದ ಸಂದೇಶವಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.

    ನಗರದ ಬ್ರಹ್ಮಸಮುದ್ರ ಶ್ರೀರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಚಲನಚಿತ್ರ ಸಾಹಿತಿ ಚಿ.ಉದಯಶಂಕರ್ ನೆನಪು ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಪೂರ್ವಿ ಗಾನಯಾನ -85 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮೂರು ಸಾವಿರಕ್ಕೂ ಹೆಚ್ಚು ಮಧುರ ಗೀತೆಗಳನ್ನು ರಚನೆ ಮಾಡಿರುವ ಅವರ ಸಾಹಿತ್ಯದಲ್ಲಿ ಜೀವನೋಲ್ಲಾಸವಿದೆ. ಅವರ ಅಗಲಿಕೆ ನಂತರವೂ ಇಂದಿಗೂ ನಾವು ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆಂದರೆ ಅವರು ನೀಡಿರುವ ಸಾಹಿತ್ಯವೇ ಸಾಕ್ಷಿ. ಅವರ ಸಾಹಿತ್ಯ ರಚನೆಗಳು ಅಮರ ಎಂದರು.

    ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಕೆ.ಯು.ವಿನೀತ್​ಕುಮಾರ್ ಮಾತನಾಡಿ, ಚಿಂತನಹಳ್ಳಿ ಉದಯಶಂಕರ್ ಬಹುಮುಖ ಪ್ರತಿಭೆ. ಗೀತ ರಚನಾಕಾರರು ಮಾತ್ರವಲ್ಲ, ಚಿತ್ರಕಲೆಗೆ ಸಾಹಿತ್ಯ ಬರೆದವರು ಜತೆಗೆ ನಟರೂ ಹೌದು. ಮಂಕುದಿಣ್ಣೆ ಚಿತ್ರಕ್ಕೆ ನಿರ್ದೇಶನ ನೀಡಿರುವ ಅವರು ಜೀವನಚೈತ್ರ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರು ಒಟ್ಟು 93 ಚಲನಚಿತ್ರಗಳಿಗೆ ಗೀತ ಸಾಹಿತ್ಯ ರಚನೆ ಮಾಡಿದ್ದು ಅವುಗಳಲ್ಲಿ 85 ಚಲನಚಿತ್ರಗಳು ಡಾ.ರಾಜ್​ಕುಮಾರ್ ಅಭಿನಯಿಸಿದ ಚಲನಚಿತ್ರಗಳೆ ಆಗಿವೆ ಎಂದು ಬಣ್ಣಿಸಿದರು.

    ಪೂರ್ವಿಯ ಗಾಯಕರಾದ ಎಂ.ಎಸ್.ಸುಧೀರ್, ರಾಯನಾಯಕ್, ಚೇತನ್​ರಾಮ್ ಪಿ.ಎಸ್.ದೀಪಕ್, ದರ್ಶನ್, ರೂಪಾ ಅಶ್ವಿನ್, ಲಾಲಿತ್ಯ ಅಣ್ವೇಕರ್, ಜ್ಯೋತಿ ವಿನೀತ್, ರಮ್ಯಾ ಮಧುಸೂದನ್ ಹಾಗೂ ಸಾಗ್ನಿಕಾ ರವರು ಚಿ.ಉದಯಶಂಕರ್ ವಿರಚಿತ 18 ಗೀತೆಗಳನ್ನು ಪ್ರಸ್ತುತಪಡಿಸಿದರು. ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ, ರೂಪಾ ನಾಯ್್ಕ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts