More

    ಇನ್ಪೋಸಿಸ್​ನಿಂದ 5 ಸಾವಿರ ಕಿಟ್ ವಿತರಣೆ

    ಹುಬ್ಬಳ್ಳಿ: ಲಾಕ್​ಡೌನ್ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಬಡವರಿಗೆ ನೆರವಾಗಲು ಮುಂದೆ ಬಂದ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇದುವರೆಗೆ 5 ಸಾವಿರ ಆಹಾರ ಧಾನ್ಯದ ಕಿಟ್ ನೀಡಿದ್ದು, ಅವುಗಳನ್ನು ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳ ಅರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂದು ರಾಷ್ಟ್ರೆೊತ್ಥಾನ ರಕ್ತನಿಧಿ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಷ್ಟ್ರೆೊತ್ಥಾನ ರಕ್ತನಿಧಿ ಹಾಗೂ ಜನವಿಕಾಸ ಪ್ರತಿಷ್ಠಾನಗಳು ಸೇರಿ ಇನ್ಪೋಸಿಸ್ ಫೌಂಡೇಷನ್ ನೀಡಿದ ಕಿಟ್​ಗಳನ್ನು ಬಡವರಿಗೆ ಹಂಚಿಕೆ ಮಾಡಲಾಗಿದೆ. ಶಿರಸಿಯ ಅಲೆಮಾರಿ, ಕಡುಬಡವರಿಗೆ 1200 ಕಿಟ್, ದಾಂಡೇಲಿಯಲ್ಲಿ 200, ಹಾನಗಲ್ 500, ಗದಗ 200, ಶಿರಹಟ್ಟಿ 50, ಹಾವೇರಿ 50, ಧಾರವಾಡ 570, ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ 300 ಹೀಗೆ ನಾಲ್ಕು ಜಿಲ್ಲೆಯ ವಿವಿಧ ಊರುಗಳ ಅರ್ಚಕರು, ಜಂಗಮರು, ಅಸಂಘಟಿತ ಕಾರ್ವಿುಕರು, ಪತ್ರಿಕೆ ವಿತರಕರು ಮುಂತಾದವರಿಗೆ ಒಟ್ಟು 5 ಸಾವಿರ ಕಿಟ್ ವಿತರಣೆ ಮಾಡಲಾಗಿದೆ ಎಂದರು.

    ಇದೇ ರೀತಿ ಕೊಳಗೇರಿ ನಿವಾಸಿಗಳು, ಮುಸ್ಲಿಂ ಸಮುದಾಯದ ಬಡವರಿಗೆ ಹಂಚಿಕೆ ಮಾಡಲು ಇನ್ನೂ 5 ಸಾವಿರ ಕಿಟ್ ನೀಡಲು ಇನ್ಪೋಸಿಸ್ ಫೌಂಡೇಷನ್ ಒಪ್ಪಿಗೆ ನೀಡಿದ್ದು, ಬರುವ 10 ದಿನಗಳಲ್ಲಿ ಈ ಕಾರ್ಯವೂ ನಡೆಯಲಿದೆ ಎಂದರು.

    ರಾಷ್ಟ್ರೆೊತ್ಥಾನ ರಕ್ತನಿಧಿ ವತಿಯಿಂದ ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಆಕ್ಸಿ ಕಾನ್ಸನ್​ಟ್ರೇಟರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಇನ್ಪೋಸಿಸ್ ಸೇರಿ ವಿವಿಧ ದಾನಿಗಳಿಂದ 70 ಕಾನ್ಸನ್​ಟ್ರೇಟರ್ ಸಂಗ್ರಹಿಸಲಾಗಿದೆ. ಇದರಲ್ಲಿ 50 ಜನರಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯಲು ಈ ಯಂತ್ರಗಳನ್ನು ಪೂರೈಕೆ ಮಾಡಲಾಗಿದೆ. ಸಾವಿರಾರು ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಕರೊನಾ ಮೊದಲ ಅಲೆ ಸಂದರ್ಭದಲ್ಲಿ 260 ಪ್ಲಾಸ್ಮಾ ಪ್ಲೇಟ್​ಲೆಟ್ ಸಂಗ್ರಹಿಸಿ ರೋಗಿಗಳಿಗೆ ನೀಡಲಾಗಿತ್ತು. ಈ ಬಾರಿ 60 ಪ್ಲಾಸ್ಮಾ ಸಂಗ್ರಹ ಮಾಡಿ ಕೊಡಲಾಗಿದೆ ಎಂದರು.

    ಕೋವಿಡ್ ಪ್ರಾಥಮಿಕ ಔಷಧ, ಸಲಕರಣೆ ಸೇರಿ 20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದಾನ ರೂಪದಲ್ಲಿ ಸುಧಾ ಮೂರ್ತಿ ಅವರು ನೀಡಿದ್ದಾರೆ ಎಂದು ಕುಲಕರ್ಣಿ ತಿಳಿಸಿದರು.

    ರಾಷ್ಟ್ರೆೊತ್ಥಾನ ರಕ್ತನಿಧಿ ಕೇಂದ್ರದಿಂದ ಹಿರಿಯರು, ಅಶಕ್ತರಿಗಾಗಿ ಆರೋಗ್ಯ ತಪಾಸಣೆ ಸೇರಿ ವಿವಿಧ ಸೇವೆಗಳನ್ನು ಮನೆಮನೆಗೆ ಹೋಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಇರುವವರಿಗೆ ರಕ್ತ ಹಾಗೂ ಕೋವಿಡ್ ಪ್ಲಾಸ್ಮಾ ನೀಡಲಾಗಿದೆ. ಟೆಲಿ ಮೆಡಿಸಿನ್ ಸಲಹೆ, ಕೋವಿಡ್ ಪ್ರಾಥಮಿಕ ಚಿಕಿತ್ಸೆಗೆ ಅಗತ್ಯ ಔಷಧ ವಿತರಣೆ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಜನವಿಕಾಸ ಪ್ರತಿಷ್ಠಾನದ ಪದಾಧಿಕಾರಿಗಳಾದ ಕಿರಣ ಗುಡ್ಡದಕೇರಿ, ಕಿರಣ ಗಡ, ಶ್ರೀಧರ ಜೋಶಿ, ರವಿ ನಾಯಕ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts