More

    ಇದೇನಾ ನಗರಸಭೆಯ ಶುಚಿತ್ವ? ಸ್ವಚ್ಛ ಸರ್ವೇಕ್ಷಣೆ ತನಿಖಾಧಿಕಾರಿ ಮಂಜುಳಾ ಅಸಮಾಧಾನ

    ಚಿಂತಾಮಣಿ: ನಗರದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಮಾಡುವಲ್ಲಿ ಚಿಂತಾಮಣಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಸ್ವಚ್ಛ ಸರ್ವೇಕ್ಷಣೆಯ ಜಿಲ್ಲಾ ತನಿಖಾಧಿಕಾರಿ ಎನ್.ಮಂಜುಳಾ ಬೇಸರ ವ್ಯಕ್ತಪಡಿಸಿದರು.
    ನಗರದ ವಿವಿಧ ವಾರ್ಡ್‌ಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಸರ್ವೇ ಮಾಡುತ್ತಿದ್ದೇನೆ, ನಗರಸಭೆ ಅಧಿಕಾರಿಗಳಿಗೆ ತಿಳಿಸಿ ಬಂದಾಗ ಶುಚಿತ್ವ ಇರುವ ಪ್ರದೇಶ ತೋರಿಸಿ ಯಾಮಾರಿಸುತ್ತಿದ್ದರು, ಆದರೆ ಈ ಬಾರಿ ಯಾರಿಗೂ ತಿಳಿಸದೆ ಬಂದಿದ್ದರಿಂದ ಸ್ವಚ್ಛತೆಯ ಅವ್ಯವಸ್ಥೆ ಗೋಚರವಾಗಿದೆ ಎಂದರು.
    ಬೆಳಗ್ಗೆಯಿಂದ ಪ್ರತಿಯೊಂದು ವಾರ್ಡ್ ಪರಿಶೀಲಿಸಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ, ಪೌರಾಯುಕ್ತರು, ಪರಿಸರ ಅಭಿಯಂತರರು ಮತ್ತು ಆರೋಗ್ಯಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
    ನಗರದ ಕೊಳಚೆ ಪ್ರದೇಶಗಳು ಸೇರಿ ಜನನಿಬಿಡ ಪ್ರದೇಶಗಳಲ್ಲಿ ಕಸದ ರಾಶಿ ಬಿದ್ದಿದೆ. ಚರಂಡಿಗಳಲ್ಲಿ ಹೂಳು ತುಂಬಿರುವುದು, ಒಳಚರಂಡಿ ಮ್ಯಾನ್‌ಹೋಲ್‌ಗಳು ಹಾಳಾಗಿರುವುದನ್ನು ನೋಡಿದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದರು.
    ಅಶುಚಿತ್ವ, ಕಸದ ರಾಶಿ, ಒಳಚರಂಡಿ ಬಂದ ಆಗಿರುವುದು, ಮ್ಯಾನ್‌ಹೋಲ್‌ನಿಂದ ಒಳಚರಂಡಿ ನೀರು ಹರಿಯುತ್ತಿರುವುದನ್ನು ಸಾರ್ವಜನಿಕರು ೆಟೋ ತೆಗೆದು ಸ್ವಚ್ಛತಾ ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು. ಈ ಬಗ್ಗೆ ನಗರಸಭೆ ಅರಿವು ಮೂಡಿಸಬೇಕು. ಆದರೆ ವಾರ್ಡ್‌ಗಳಲ್ಲಿ ಸಂಚರಿಸಿದಾಗ ಅರಿವು ಮೂಡಿಸದಿರವುದು ಬಹಿರಂಗವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts