More

    ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯ


    ಯಾದಗಿರಿ: ನಾವು ಆರೋಗ್ಯವಾಗಿದ್ದರೆ, ನಮ್ಮ ಗ್ರಾಮವೂ ಆರೋಗ್ಯವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದೈಹಿಕ ಶ್ರಮ ವಹಿಸಿ ದುಡಿಯುವ ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಲು ಹಮ್ಮಿಕೊಂಡ ಗ್ರಾಮ ಆರೋಗ್ಯ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ನರೇಗಾ ಯೋಜನೆಯ ಸಹಾಯಕ ನಿದರ್ೇಶಕ ಖಾಲೀದ್ ಅಹ್ಮದ್ ಕಿವಿಮಾತು ಹೇಳಿದರು.


    ತಾಲೂಕಿನ ಮಲ್ಕಪ್ಪನಳ್ಳಿ ಗ್ರಾಮದ ಕೆರೆಯಲ್ಲಿ ನರೇಗಾದ ಅಮೃತ ಸರೋವರ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಸೋಮವಾರ ಕೂಲಿ ಕಾಮರ್ಿಕರಿಗೆ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಜೂ.22ರ ವರೆಗೆ ನರೇಗಾದಡಿ ಕೆಲಸ ಮಾಡುವ ಹೆಚ್ಚಿನ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಉದ್ದೇಶ ಈ ಕಾರ್ಯಕ್ರಮದ್ದು ಎಂದರು.

    ನಿಮ್ಮ ಆರೋಗ್ಯವೇ ಗ್ರಾಮದ ಆರೋಗ್ಯ, ಪ್ರಸ್ತುತ ಎದುರಿಸುತ್ತಿರುವ ಹಾಗೂ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ತಪಾಸಣೆ ಮಾಡಿಸಿಕೊಳ್ಳಲು ನಿಮ್ಮೂರಲ್ಲೇ ನಡೆಯುವ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಪ್ಪದೇ ಭಾಗವಹಿಸಿ, ಅನಾರೋಗ್ಯದ ಬಗ್ಗೆ ನಿರ್ಲಕ್ಷ ಬೇಡ. ತಪಾಸಣೆ ಮಾಡಿಸಿಕೊಂಡರೆ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
    ಯರಗೋಳ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಅಕಾರಿ ಐರಿನ್ ಮಾತನಾಡಿ, ಗ್ರಾಮ ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಲ್ಲಿ ರಕ್ತದೊತ್ತಡ, ಟಿಬಿ ಸ್ಕ್ರೀನಿಂಗ್, ಅಪ್ಟೌಕತೆ, ರಕ್ತಹೀನತೆ, ಮಾನಸಿಕ ಆರೋಗ್ಯ, ಸಕ್ಕರೆ ಕಾುಲೆಗಳ ತಪಾಸಣೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದರು.

    ಪಿಡಿಒ ಕಲ್ಯಾಣಕುಮಾರ, ಸಂಯೋಜಕ ಪರಶುರಾಮ, ಶಂಕರ ಬದ್ದೇಪಲ್ಲಿ, ರಿಜ್ವಾನ್, ಸುನಿತಾ, ರೇಖಾ, ಅಂಬರೀಶ , ಶಿವರಾಜ, ಶ್ರೀದೇವಿ ಪಾಟೀಲ್, ಕುಮಾರ ಕೌದಿ, ಬಸಪ್ಪ ಹೋತಪೇಟ, ಮಲ್ಲು, ಪ್ರವೀಣ, ರೇಣುಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts