More

    ಆಯುಷ್ಮಾನ್ ನೋಂದಣಿಯಲ್ಲಿ ಶಿವಮೊಗ್ಗ ದೇಶಕ್ಕೆ ನಂ.8

    ಶಿಕಾರಿಪುರ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ನೋಂದಣಿಯಲ್ಲಿ ಶಿವಮೊಗ್ಗ ಜಿಲ್ಲೆ ದೇಶದಲ್ಲಿ 13ನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿದೆ. ಡಿಸೆಂಬರ್ ಮಾಸಿಕ ವರದಿ ಪ್ರಕಾರ ಕಾರ್ಡ್ ವಿತರಣೆಯಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನದ ಮೂಲಕ 40,000 ಸಾವಿರ ಕುಟುಂಬಗಳಿಗೆ 74.093 ಕಾರ್ಡ್ ವಿತರಿಸಲಾಗಿದೆ. ಇದಕ್ಕಾಗಿ 183 ಸಿಎಸ್​ಸಿ ಕೇಂದ್ರ, 134 ಆರೋಗ್ಯ ಕೇಂದ್ರ ಬಳಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಧನೆಯಾಗುತ್ತಿತ್ತು. ಆದರೆ ತೀರ್ಥಹಳ್ಳಿ ಮುಂತಾದ ಕಡೆಗಳಲ್ಲಿ ಸರಿಯಾದ ನೆಟ್​ವರ್ಕ್ ಸಿಗದ ಕಾರಣ ಸ್ವಲ್ಪ ಕಡಿಮೆ ಆಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಯ ಕಡೆಗೆ ಗಮನಹರಿಸಲಾಗುವುದು ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

    ಶಿವಮೊಗ್ಗದ ಪ್ರೇರಣಾ ಎಜುಕೇಷನಲ್ ಮತ್ತು ಸೋಷಿಯಲ್ ಟ್ರಸ್ಟ್ ಡಿಸೆಂಬರ್ 25ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಕಾರ್ಡ್​ಗಳನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಶಾ ಕಾರ್ಯಕರ್ತೆಯರ ಸಹಕಾರದಿಂದ ವಿತರಿಸಿದೆ ಎಂದರು ಹೇಳಿದರು.

    ಒಟ್ಟಾರೆ ಇಲ್ಲಿ ಆರೋಗ್ಯ ಕಾರ್ಡ್ ಪಡೆಯಲು ಅರ್ಹರಾದವರು 14 ಲಕ್ಷ ಜನ. ಅಭಿಯಾನಕ್ಕಿಂತ ಮುಂಚೆ 4 ಲಕ್ಷ ಮಂದಿ ಕಾರ್ಡ್ ಹೊಂದಿದ್ದರು ಎಂದು ಹೇಳಿದರು.

    ಒಳಚರಂಡಿ ಕಾಮಗಾರಿ ವೀಕ್ಷಣೆ: ಶಿಕಾರಿಪುರಕ್ಕೆ 2009ರಲ್ಲಿ ಒಳಚರಂಡಿ ಯೋಜನೆಯನ್ನು ಸರ್ಕಾರ ಮಂಜೂರು ಮಾಡಿತ್ತು. ಅದರ ಕೆಲಸ ಅಪೂರ್ಣವಾಗಿದ್ದು ಅದನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೌಸಿಂಗ್ ಬೋಡ್ ಆಯುಕ್ತ ರಮೇಶ್ ಹಾಗೂ ಡಿಸಿ ಜತೆ 15 ಕಡೆ ವೀಕ್ಷಣೆ ಮಾಡಿ ಅದರ ಸಾಧಕ ಬಾಧಕಗಳ ಅವಲೋಕನ ಮಾಡಲಾಗಿದೆ. ಜತೆಗೆ ಸಿಎಂ ಆದೇಶದ ಪ್ರಕಾರ ಉಳಿದ ಕೆಲಸವನ್ನು ಮುಗಿಸಲು ತೀರ್ವನಿಸಲಾಗಿದೆ. ಈ ಕಾರ್ಯದಲ್ಲಿ ರೈತರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಗಮನಹರಿಸಲಾಗುವುದು. ಇದಕ್ಕೆ ಸಂಬಂಧಿಸಿ ಪುರಸಭೆ, ಕೆಶಿಪ್, ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್.ಗುರುಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts