More

    ಅಪಾಯದ ಮುನ್ಸೂಚನೆ ನೀಡಿದ ಮಹಾಮಾರಿ

    ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಕರೊನಾ ಮಹಾಸ್ಪೋಟವಾಗಿದ್ದು, ಇಬ್ಬರು ಕೆಎಸ್​ಆರ್​ಪಿ ಪೇದೆಗಳು, ಆಶಾ ಕಾರ್ಯಕರ್ತರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಸೇರಿ 56 ಜನರಿಗೆ ಸೋಂಕು ದೃಢಪಟ್ಟಿದೆ. 33 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಜಿಲ್ಲೆಯಲ್ಲಿ ಶುಕ್ರವಾರದ 56 ಪ್ರಕರಣಗಳು ಸೇರಿ ಈವರೆಗೆ 390 ಜನರಿಗೆ ಕರೊನಾ ದೃಢಗೊಂಡಂತಾಗಿದೆ. ಇಂದಿನ 31 ಜನ ಸೇರಿ ಈವರೆಗೆ 275 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 108 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ. ಇಂದು ರಾಣೆಬೆನ್ನೂರ ತಾಲೂಕಿನಲ್ಲಿ 36, ಹಾವೇರಿ ತಾಲೂಕಿನಲ್ಲಿ 12, ಶಿಗ್ಗಾಂವಿ ತಾಲೂಕಿನಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದೆ.

    ಹಾವೇರಿ ತಾಲೂಕು: ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಮಸೀದಿ ಸಮೀಪದ ನಿವಾಸಿಗಳಾಗಿರುವ 60, 51, 55 ವರ್ಷದ ಮೂವರು ಮಹಿಳೆಯರಿಗೆ, 61, 68 ವರ್ಷದ ಪುರುಷರಿಗೆ ಸೇರಿ ಒಟ್ಟು ಐವರಿಗೆ, ಗುತ್ತಲ ಪಟ್ಟಣದ ಶಾಂತಿನಗರದ ನಿವಾಸಿ 34 ವರ್ಷದ ಕಿರಿಯ ಆರೋಗ್ಯ ಸಹಾಯಕಿ, ಬೆಳವಿಗಿ ರಸ್ತೆಯ ನಿವಾಸಿ 36 ವರ್ಷದ ಆಶಾ ಕಾರ್ಯಕರ್ತೆ ಹಾಗೂ ಯಲಿಪೇಟೆ ಓಣಿಯ ನಿವಾಸಿ, ಕಿರಿಯ ಆರೋಗ್ಯ ಸಹಾಯಕ 40 ವರ್ಷದ ಪುರುಷ ಸೇರಿ ಮೂವರಿಗೆ, ಹಾವೇರಿ ನಗರದ ಕಲ್ಲುಮಂಟಪ ರಸ್ತೆಯ ನಿವಾಸಿ 58 ವರ್ಷದ ಪುರುಷ, ಶಿವಬಸವ ನಗರದ 35 ವರ್ಷದ ಪುರುಷ, ದಾನೇಶ್ವರಿ 6ನೇ ಕ್ರಾಸ್​ನ ನಿವಾಸಿ 45 ವರ್ಷದ ಪುರುಷ ಹಾಗೂ ಆಲದಕಟ್ಟಿ ಗ್ರಾಮದ 31 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಶಿಗ್ಗಾಂವಿ ತಾಲೂಕು: ತುಮಕೂರು ಪ್ರವಾಸ ಹಿನ್ನೆಲೆ ಹೊಂದಿರುವ ಶಿಗ್ಗಾಂವಿ ತಾಲೂಕು ಗಂಗಿಭಾವಿಯ ಕೆಎಸ್​ಆರ್​ಪಿ ಪೇದೆಗಳಾದ 42 ಹಾಗೂ 41 ವರ್ಷದ ಪುರುಷರು, ಬಂಕಾಪುರದ ಶಾ ಬಜಾರ್​ನ 17ವರ್ಷದ ಬಾಲಕಿ, 18 ವರ್ಷದ ಯುವತಿ, 58 ವರ್ಷದ ಪುರುಷ, 36 ವರ್ಷದ ಮಹಿಳೆ, ಶಿಗ್ಗಾಂವಿ ಜಯನಗರದ 30 ವರ್ಷದ ಪುರುಷ, ಹಳೆಪೇಟೆಯ 55 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಈ ಎಲ್ಲರ ಸ್ವ್ಯಾಬ್ ಟೆಸ್ಟ್​ಗೆ ಜು. 12ರಿಂದ 15ರ ಅವಧಿಯಲ್ಲಿ ಕಳಿಸಲಾಗಿತ್ತು. ಜು. 16ರಂದು ಪಾಸಿಟಿವ್ ಬಂದಿದೆ.

    ರಾಣೆಬೆನ್ನೂರ ತಾಲೂಕು: ಬೆಂಗಳೂರು ಪ್ರವಾಸ ಹಿನ್ನೆಲೆಯಿಂದ ರಾಣೆಬೆನ್ನೂರನ ಮಾರುತಿ ನಗರದ 26 ವರ್ಷದ ಪುರುಷನಿಗೆ, 40 ವರ್ಷದ ಪುರುಷ ಗದಗನಿಂದ ಬಂದಿದ್ದು, ಗದಗನಲ್ಲಿಯೇ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡು ಜು. 15ರಂದು ರಾಣೆಬೆನ್ನೂರಿಗೆ ಬಂದಿದ್ದ. ಅಲ್ಲಿನ ವರದಿ ಜು. 16ರಂದು ಬಂದಿದೆ. ಇನ್ನುಳಿದ 34 ಜನರಿಗೆ ಈಗಾಗಲೇ ಮೃತಪಟ್ಟಿರುವ ಮಾರುತಿನಗರದ ವೃದ್ಧರೊಂದಿಗೆ ಮದುವೆಯಲ್ಲಿ ಪಾಲ್ಗೊಂಡಿದ್ದರಿಂದ ಸೋಂಕು ದೃಢಪಟ್ಟಿದೆ.

    ಶುಕ್ರವಾರ ಒಟ್ಟು 31ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ ಹಾವೇರಿ ತಾಲೂಕಿನ 16, ಶಿಗ್ಗಾಂವಿ, ರಾಣೆಬೆನ್ನೂರ ಹಾಗೂ ಹಾನಗಲ್ಲ ತಾಲೂಕಿನ ತಲಾ ನಾಲ್ವರು, ಬ್ಯಾಡಗಿ ತಾಲೂಕಿನ 3 ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts