More

    ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

    ರಾಣೆಬೆನ್ನೂರ: ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ಫಲಾನುಭವಿಗಳು ಮಂಗಳವಾರ ನಗರದ ತಾಪಂ ಎದುರು ಪ್ರತಿಭಟನೆ ನಡೆಸಿದರು.

    ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ ಒಟ್ಟು 5,616 ಮನೆಗಳು ಮಂಜೂರಾಗಿವೆ. ಅದರಲ್ಲಿ 3436 ಮನೆಗಳ ಬಿಲ್ ಆಗದೇ ಇರುವುದರಿಂದ ನಿರ್ಮಾಣ ಹಂತದಲ್ಲಿಯೇ ಉಳಿದುಕೊಂಡಿವೆ. ಇನ್ನೂ ಕೆಲ ಮನೆಗಳ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಬಡವರು ಪರದಾಡುವಂತಾಗಿದೆ.

    ಬಡವರು ಸರ್ಕಾರದ ಮೇಲಿನ ವಿಶ್ವಾಸದಿಂದ ಆಶ್ರಯ ಮನೆ ನಿರ್ವಿುಸಿಕೊಳ್ಳಲು ಮುಂದಾಗಿದ್ದರು. ಆದರೀಗ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಫಲಾನುಭವಿಗಳಿಗೆ ನಿರಾಶೆಯಾಗಿದೆ. ಈ ಕುರಿತು ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ತಿಂಗಳೊಳಗೆ ಹಣ ಮಂಜೂರು ಮಾಡಬೇಕು. ಇಲ್ಲವಾದರೆ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ತಾಪಂ ಇಒ ಎಸ್.ಎಂ. ಕಾಂಬಳೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಕಿರಣ ಗುಳೇದ, ಡಿ.ಕೆ. ರಾಜನಹಳ್ಳಿ, ಪಕ್ಕೀರೇಶ ರಂಗರೆಡ್ಡಿ, ಮಹೇಶ ಲಮಾಣಿ, ಸುನೀಲ ದೇವರಗುಡ್ಡ, ರಾಜಪ್ಪ ಮಡಿವಾಳರ, ವಿನಾಯಕ ಬಸನಗೌಡ್ರ, ಸಂಕಪ್ಪ ಕುಂಚಿಕೊರವರ, ಗೌರಮ್ಮ ನಡುವಿನಮನಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts