More

    ಅನಧಿಕೃತ 8 ಡಬ್ಬಾ ಅಂಗಡಿಗಳ ತೆರವು

    ನರಗುಂದ: ಪಟ್ಟಣದ ಶಿವಾಜಿ ವರ್ತಲದಿಂದ ಸಂಗಮ ಟಾಕೀಸ್​ವರೆಗಿನ ರಸ್ತೆ ಪಕ್ಕದಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳನ್ನು ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭಾನುವಾರ ತೆರವುಗೊಳಿಸಿದರು.

    ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಧ್ರುವರಾಜ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ನೇತೃತ್ವದಲ್ಲಿ ಎರಡು ಜೆಸಿಬಿಗಳ ಸಹಾಯದಿಂದ ಸವದತ್ತಿ ರಸ್ತೆ ಅಕ್ಕ-ಪಕ್ಕದಲ್ಲಿದ್ದ 8 ಅನಧಿಕೃತ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು. ನಂತರ ಈ ರಸ್ತೆ ಪಕ್ಕದ ಗುಂಡಿಗಳಿಗೆ ಗರಸು ಮಣ್ಣು ಹಾಕಿ ಪಾದಚಾರಿಗಳು, ವಾಹನ ಸವಾರರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

    ಅನೇಕ ವರ್ಷಗಳಿಂದ ಈ ರಸ್ತೆ ಅಕ್ಕ-ಪಕ್ಕದಲ್ಲಿ ವ್ಯಾಪಾರಸ್ಥರು ಹೂವು, ಹಣ್ಣು, ತರಕಾರಿ ಸೇರಿ ವಿವಿಧ ವ್ಯಾಪಾರ ಮಾಡುತ್ತಿದ್ದರು. ಖಾಸಗಿ ವಾಹನಗಳನ್ನು ಇಲ್ಲೇ ನಿಲ್ಲಿಸುತ್ತಿದ್ದರಿಂದ ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿತ್ತು. ಈ ಕುರಿತು ಕೆಲವು ಸಂಘಟನೆಗಳು ಪುರಸಭೆ, ಪೊಲೀಸ್ ಇಲಾಖೆಗೆ ನೀಡಿದ ಮನವಿ ಮೇರೆಗೆ ತೆರವು ಕಾರ್ಯಾಚರಣೆ ನಡೆಸಲಾಯಿತು. ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದವು. ಇನ್ನು ಕೆಲ ಅನಧಿಕೃತ ಡಬ್ಬಾ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ತೆರವುಗೊಳಿಸದಂತೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿರುವುದು ಕಂಡು ಬಂತು.

    ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಪ್ರತಿಕ್ರಿಯಿಸಿ, ಅನಧಿಕೃತ ಡಬ್ಬಾ ಅಂಗಡಿಗಳ ಮಾಲೀಕರಿಗೆ ತಮ್ಮ ಅಂಗಡಿಗಳು ಬೇಕಾದಲ್ಲಿ ಪೊಲೀಸ್ ಅಧಿಕಾರಿಗಳನ್ನು ಸಂರ್ಪಸಿ ಅವರಿಂದ ಅನುಮತಿ ತಂದಲ್ಲಿ ಅಂತಹ ವ್ಯಾಪಾರಸ್ಥರಿಗೆ ದಂಡವನ್ನು ಕಟ್ಟಿಸಿಕೊಂಡು ಮರಳಿ ಅಂಗಡಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

    ಕಾರ್ಯಾಚರಣೆಯಲ್ಲಿ ಎಎಸ್​ಐ ವಿ.ಜಿ. ಪವಾರ, ಎಸ್.ಆರ್. ರಾಯನಗೌಡ್ರ, ಸಂತೋಷ ಡೋಣಿ, ಎಸ್.ಎಸ್. ಕಾಶಪ್ಪಯ್ಯನಮಠ, ಜಿ.ಎಸ್. ಕುರಹಟ್ಟಿ, ಪುರಸಭೆ ಅಧಿಕಾರಿಗಳಾದ ಎಚ್.ಎಲ್. ಲಿಂಗನಗೌಡ್ರ, ಅನ್ನಪ್ಪಗೌಡ ದೊಡಮನಿ, ರಾಚಪ್ಪ ಕೆರೂರ, ಡಿ.ಆರ್. ಜೋರಂ, ನಿಸರ್ಗ ಸೇವಾ ಸಮಿತಿ ಮುಖಂಡ ರವಿ ಹೊಂಗಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts