More

    ಅಕ್ಷರ ಜ್ಞಾನವಿದ್ದರೂ ದೂರವಾಗುತ್ತಿರುವ ಪುಸ್ತಕಗಳು

    ಹಾನಗಲ್ಲ: ಪುಸ್ತಕವಿಲ್ಲದ ಮನೆಯನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ದೇವಾಲಯದಂತೆ ಗೌರವ ಪಡೆಯಬೇಕಾದ ಗ್ರಂಥಾಲಯಗಳು ಜನರಿಂದ ದೂರವಾಗುತ್ತಿವೆ. ಓದುವವರಿಲ್ಲದೆ ಪುಸ್ತಕಗಳು ಧೂಳು ಹಿಡಿಯುತ್ತಿರುವುದು ವಿಷಾದನೀಯ ಎಂದು ಹಾವೇರಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಗಂಗಾಧರ ನಂದಿ ಹೇಳಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಸಾರಂಗ ಮಂಟಪದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಬದುಕನ್ನು ಅರಳಿಸುವ ಸಾಹಿತ್ಯ ನಮ್ಮ ನಡುವೆ ಇರುವಾಗ ಅದನ್ನು ಮರೆತು ಮಕ್ಕಳಿಗೆ ಮೊಬೈಲ್ ಸಂಸ್ಕೃತಿಗೆ ಒತ್ತು ನೀಡುತ್ತಿರುವುದು ಸರಿಯಲ್ಲ. ಪಾಲಕರು, ಪೋಷಕರಲ್ಲಿ ಸಾಹಿತ್ಯದ ಅಭಿರುಚಿ ಇಲ್ಲದಿರುವುದು ಬೇಸರದ ಸಂಗತಿ. ನಮ್ಮ ಪುರಾತನ ಪರಂಪರೆಯಲ್ಲಿ ಅಕ್ಷರ ಜ್ಞಾನವಿಲ್ಲದವರು ಇನ್ನೊಬ್ಬರಿಂದ ಓದಿ ತಿಳಿಯುತ್ತಿದ್ದರು. ಈಗ ಅಕ್ಷರ ಜ್ಞಾನವಿದ್ದರೂ ಪುಸ್ತಕಗಳು ದೂರವಾಗುತ್ತಿರುವುದು ವಿಪರ್ಯಾಸ ಎಂದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರಿ ಪ್ರಾಚಾರ್ಯ ಮಾರುತಿ ಶಿಡ್ಲಾಪುರ, ಜಿಲ್ಲೆಯ ಸಾಹಿತ್ಯ ಪರಂಪರೆಯಲ್ಲಿ ಗಂಗಾಧರ ನಂದಿ ಅವರು, ಬದುಕನ್ನೇ ಬರಹವನ್ನಾಗಿ ಮಾಡಿಕೊಂಡವರು. ಕನ್ನಡ ಸಾಹಿತ್ಯ ಪರಿಷತ್ತಿನ ಹಾವೇರಿ ತಾಲೂಕು ಅಧ್ಯಕ್ಷರಾಗಿ ಬಹುಕಾಲ ಸೇವೆ ಸಲ್ಲಿಸುವ ಮೂಲಕ ಸಾಹಿತ್ಯದ ತೇರನ್ನೆಳೆದ ಗಂಗಾಧರ ನಂದಿ ಅವರಿಗೆ ಜಿಲ್ಲಾ ಸಮ್ಮೇಳನದ ಅಧ್ಯಕ್ಷರಾಗುವ ಭಾಗ್ಯ ಬಂದಿದೆ ಎಂದರು.

    ಉಪನ್ಯಾಸಕ ಚಂದ್ರಶೇಖರ ಹಾವೇರಿ, ಜಿಲ್ಲಾ ಪದವಿ ಪೂರ್ವ ಕಾಲೇಜ್ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ನಿಸ್ಸೀಮಗೌಡರ ಮಾತನಾಡಿದರು. ಉಪನ್ಯಾಸಕರಾದ ಎಚ್.ಎಸ್. ರ್ಬಾ, ಸುಮಂಗಲಾ ನಾಯನೇಗಲಿ, ರೂಪಾ ಹಿರೇಮಠ, ಎಸ್.ವಿ. ರಶ್ಮಿ, ಕೆ. ಈಶ್ವರ, ಗೀತಾ ನಾಯ್ಕ, ವೀಣಾ ದೇವರಗುಡಿ, ಆಯಿಷಾ, ಬಸವರಾಜ ಹರಿಜನ, ಇತರರಿದ್ದರು.

    ಸಾಹಿತ್ಯವೇ ನನ್ನ ಉಸಿರಾಟ: ನನ್ನ ಜೀವಿತದ ಕೊನೆಯುಸಿರನ್ನು ವಾಚನಾಲಯದಲ್ಲೇ ಕಳೆಯಬೇಕೆಂದು ಬಯಸಿದ್ದೇನೆ. ಸಾಹಿತ್ಯವೇ ನನ್ನ ಉಸಿರಾಟ, ಅದೇ ನನ್ನ ಆಸ್ತಿ. ಆನಂದವೂ ಅದೇ ಎಂದು ಹಾವೇರಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಗಂಗಾಧರ ನಂದಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts