More

    ಅಂಗನವಾಡಿಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸಿ

    ರೋಣ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ತಾಲೂಕು ಘಟಕದ ಖಜಾಂಚಿ ಶೋಭಾ ಭಜಂತ್ರಿ ಮಾತನಾಡಿ, ಕೋವಿಡ್-19ನಿಂದ ದೇಶವೇ ತತ್ತರಿಸಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ತಮ್ಮೂರಿಗೆ ಕರೊನಾ ಮಹಾಮಾರಿ ಬರಬಾರದೆಂಬ ನಿಟ್ಟಿನಲ್ಲಿ ಹಗಲಿರುಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇಂಥದ್ದರಲ್ಲಿ ಕರೊನಾ ಸೇನಾನಿಗಳಿಗೆ ಸರ್ಕಾರ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಮತ್ತಿತರ ಸಾಮಗ್ರಿ ನೀಡದ ಕಾರಣ ಅನೇಕ ಅಂಗನವಾಡಿಗಳ ಕಾರ್ಯಕರ್ತೆಯರು, ಅವರ ಕುಟುಂಬದವರಿಗೆ ಕರೊನಾ ಸೋಂಕು ತಗುಲಿದೆ ಎಂದು ದೂರಿದರು.

    ಕರೊನಾ ಸಂದರ್ಭದಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 25000 ರೂ. ಪ್ರೋತ್ಸಾಹಧನ, ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್ ಪಾಸ್, 50 ಲಕ್ಷ ರೂ. ಆರೋಗ್ಯ ವಿಮೆ, ಕರೊನಾ ಸೋಂಕಿತ ಅಂಗನವಾಡಿ ಕಾರ್ಯಕರ್ತೆಯರಿಗೆ 5 ಲಕ್ಷ ರೂ. ಪರಿಹಾರ ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್​ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

    ದುಂಡಮ್ಮ ಬಳಿಗಾರ, ಚಂದ್ರಕಲಾ ಕಬರಳ್ಳಿ, ರಂಗಮ್ಮ ರಾಯನಗೌಡ್ರ, ಶ್ರೀದೇವಿ ಜಕ್ಕಣ್ಣವರ, ರಂಗವ್ವ ಹಡಪದ, ವಿದ್ಯಾವತಿ ದಾವಣಗೇರಿ, ಶೋಭಾ ಟಂಕಸಾಲಿ, ಸಂಗಮ್ಮ ಬಡಿಗೇರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts