ಕುಶಾಲನಗರದ ಕೊಪ್ಪ ಗೇಟ್​ನಲ್ಲಿ ಅರಣಾಧ್ಯಕಾರಿಗಳಿಂದ ತಪಾಸಣೆ: 5 ಲಕ್ಷ ರೂ. ಮೌಲ್ಯದ 7 ಬೀಟೆ ನಾಟ ವಶ

ಕುಶಾಲನಗರ: ಕುಶಾಲನಗರದ ಕೊಪ್ಪ ಗೇಟ್​ನಲ್ಲಿ ವಾಹನವನ್ನು ತಡೆದು ಪರಿಶೀಲಿಸಿದ ಅರಣ್ಯಾಧಿಕಾರಿಗಳು ಅದರಲ್ಲಿ ಸಾಗಿಸಲಾಗುತ್ತಿದ್ದ 7 ಬೀಟೆ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ನಸುಕಿನ ಜಾವ 3 ಗಂಟೆಯಲ್ಲಿ ಕುಶಾಲನಗರ ಅರಣ್ಯಾಧಿಕಾರಿಗಳು ಎಂದಿನಂತೆ ತಪಾಸಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಡಿಕೇರಿ ಕಡೆಯಿಂದ ಮೈಸೂರು ಕಡೆಗೆ ಹೊರಟಿದ್ದ ಟಾಟಾ ವಿಂಗರ್ ಸಂಖ್ಯೆ ಕೆಎ 45 2837 ವಾಹನವನ್ನು ಸವಾರರು ನಿಲ್ಲಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ಅಂದಾಜು 5 ಲಕ್ಷ ಮೌಲ್ಯದ 7 ಬೀಟಿ ನಾಟಗಳನ್ನು ವಶಪಡಿಸಿಕೊಂಡು, ಅರಣ್ಯ ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಂಡಿದ್ದಾರೆ.

ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎನ್.ಎಲ್. ಚೇತನ್ ನೇತೃತ್ವದಲ್ಲಿ ಅರಣ್ಯ ರಕ್ಷಕರಾದ ಎಂ.ಜಿ.ಮಣಿಕಂಠ, ಬಿ.ಸಿ.ಗಣೇಶ್ ಹಾಗೂ ಅರಣ್ಯ ವೀಕ್ಷಕ ಟಿ.ಕೆ. ದಿನೇಶ್ ಮತ್ತು ಬಿ.ಆರ್. ಸತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *