ಬಾಗಲಕೋಟೆ: ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ ಕೈಗೊಳ್ಳಲಾದ ಒಟ್ಟು ೧.೭೬ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಗುರುವಾರ ಚಾಲನೆ ನೀಡಿದರು.
ರನ್ನ ಬೆಳಗಲಿಯ ಬಂದ ಲಕ್ಷಿ÷್ಮÃ ದೇವಸ್ಥಾನದ ಆವರಣದಲ್ಲಿ ಪೌರಾಡಳಿತ ಹಗೂ ರನ್ನ ಬೆಳಗಲಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯ ಮಂತ್ರಿ ಅಮೃತ ನಗರೋತ್ಥಾನದಡಿ ೨೦೦.೫೧ ಲಕ್ಷ ರೂ.ಗಳಲ್ಲಿ ಬೆಳಗಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ, ೭೦ ಲಕ್ಷ ರೂ. ಶೀಥಿಲಗೊಂಡ ಹಳೆಯ ಗ್ರಂಥಾಲಯದ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸ್ವಚ್ಛಭಾರತ ಮಿಷನ್ ೧.೦ ಮತ್ತು ೨.೦ ಯೋಜನೆಯಡಿ ೮.೬೩ ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಪೀಸ್ ರೂಮ್ ನಿರ್ಮಾಣ, ೪೦ ಲಕ್ಷ ರೂ.ಗಳಲ್ಲಿ ಎಂ.ಆರ್.ಎಫ್ ಘಟಕಕ್ಕೆ ಪ್ರಾಥಮಿಕ ಶೇಡ್ ನಿರ್ಮಾಣ, ೫೪.೨೭ ಲಕ್ಷ ರೂ.ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಶೆಡ್ ನಿರ್ಮಾಣ, ೭೩.೮೮ ಲಕ್ಷ ರೂ.ಗಳ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತಲೂ ಕಂಪೌAಡ್ ಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರೋತ್ಥಾನ ಹಂತ-೪ರಡಿ ಆಯ್ಕೆಯಾದ ಫಲಾನುಭವಿಗಳಿಗೆ ಅಲ್ಮೇರಾ, ಹೊಲಿಗೆಯಂತ್ರ, ಪೌರಕಾರ್ಮಿಕರಿಗೆ ಸುರಕ್ಷತಾ ಹಾಗೂ ಸೋಲಾರ್ ವಾಟರ್ ಹಿಟರ್ ಹಾಗೂ ಕಳೆದ ೨೦೨೧-೨೨ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ ನಿವಾಸ ಯೋಜನೆ (ನಗರ) ಹೆಚ್ಚುವರಿ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಣೆ ಸಹ ಮಾಡಲಾಯಿತು. ಅಲ್ಲದೇ ಬೆಳಗಲಿಯಿಂದ ಮಿರ್ಜಿವರೆಗೆ ೪೦೦ ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ, ತಲಾ ೨೦ ಲಕ್ಷ ರೂ.ದಲ್ಲಿ ಮಾಳಿಂಗರಾಯ ತೋಟದ ಹತ್ತಿರ ಮತ್ತು ಪಾದಗಟ್ಟಿ ಹತ್ತಿರ ಅಂಗನವಾಡಿ ಕೇಂದ್ರ ನಿರ್ಮಾಣ ಹಾಗೂ ೧೫೦ ಲಕ್ಷ ರೂ.ನಿರ್ಮಿಸಲಾದ ಹೊಸ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಲಾಯಿತು.
ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ನಿಗದಿತ ಅವಽಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ರನ್ನ ಬೆಳಗಲಿ ಪ.ಪಂಚಾಯಿತಿ ಅಧ್ಯಕ್ಷೆ ರೂಪಾ ಸದಾಶಿವ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗಲಿಕರ, ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನಗೌಡರ ಪಾಟೀಲ, ಸದಸ್ಯರಾದ ಪ್ರವೀಣ ಪಾಟೀಲ, ಸದಾಶಿವ ಸಂಕರೆಡ್ಡಿ, ಪ್ರವೀಣ ಭರಮಣಿ, ಮುಬಾರಕ ಅತ್ತಾರ, ಕರಿಯಪ್ಪ ಕುಂಬಾಡಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ., ಜಿ.ಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.