More

  ಾಸ್ಟಾೃಗ್ ಲೈನ್‌ಗಳು ಖಾಲಿ ಖಾಲಿ; ಸಿಬ್ಬಂದಿ-ಸಾರ್ವಜನಿಕರ ಗುದ್ದಾಟ ಅತ್ತಿಬೆಲೆ ಟೋಲ್‌ನಲ್ಲಿ ವಾಹನದಟ್ಟಣೆ

  ಆನೇಕಲ್: ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಬಳಸುವ ವಾಹನಗಳಿಗೆ ಕಡ್ಡಾಯವಾಗಿ ಾಸ್ಟಾೃಗ್ ನಿಯಮ ಜಾರಿಗೊಳಿಸಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ಉದಾಹರಣೆಯಾಗಿ ಎಲ್ಲ ಟೋಲ್‌ಗಳಲ್ಲೂ ಬಹುತೇಕ ವಾಹನ ಸವಾರರು ಹಣ ಪಾವತಿಸುತ್ತಿಲೇ ಇದ್ದಾರೆ. ಾಸ್ಟಾೃಗ್ ಲೈನ್‌ಗಳು ಖಾಲಿ ಹೊಡೆಯುತ್ತಿವೆ.

  ಬೆಂಗಳೂರಿನಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಅತ್ತಿಬೆಲೆ ಟೋಲ್‌ನಲ್ಲಿ 5 ಾಸ್ಟಾೃಗ್ ಲೈನ್ ಹಾಗೂ ಸುಂಕ ಪಾವತಿಸುವ 3 ಲೈನ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಬಹುತೇಕ ವಾಹನಗಳು ಹಣ ಪಾವತಿಸುವ ಲೈನ್‌ಗಳಲ್ಲೆ ಸಾಗುತ್ತಿವೆ. ಾಸ್ಟಾೃಗ್ ಅಳವಡಿಸಿಕೊಂಡಿದ್ದರೂ ಸಮರ್ಪಕವಾಗಿ ಸ್ಕ್ಯಾನ್ ಆಗದ ಕಾರಣ ಟೋಲ್ ಸಿಬ್ಬಂದಿ ಪರದಾಡುತ್ತಿದ್ದಾರೆ.

  ಅತ್ತಿಬೆಲೆ ಟೋಲ್ ತಮಿಳುನಾಡಿಗೆ ಹೊಂದಿಕೊಂಡಿರುವುದರಿಂದ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಸ್ಕಾೃನರ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ತೊಡಕಾಗಿದೆ ಎಂಬ ಆರೋಪ ಕೇಳಿಬಂದಿದೆ.

  ಅತ್ತಿಬೆಲೆ ಟೋಲ್‌ನಲ್ಲಿ ಕಳೆದೆರಡು ದಿನಗಳಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ತಿಕ್ಕಾಟಕ್ಕೆ ಕಾರಣವಾಗಿದೆ. ಮುಂದಿನ ವಾಹನಗಳು ಸ್ಕ್ಯಾನ್ ಆಗಿ ಮುಂದಕ್ಕೆ ಸಾಗದ ಹೊರತು ಹಿಂದಿನ ವಾಹನಗಳು ಸಾಗಲು ಸಾಧ್ಯವಿಲ್ಲದಿರುವುದರಿಂದ ವಾಹನ ಸವಾರರು ಸಿಟ್ಟಿಗೇಳುತ್ತಿದ್ದಾರೆ.

  ವಾಹನದಟ್ಟಣೆ: ಅತ್ತಿಬೆಲೆ ಟೊಲ್‌ಬಳಿ ಶುಕ್ರವಾರವೂ ವಾಹನದಟ್ಟಣೆ ಸಾಮಾನ್ಯವಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು, ಟೊಲ್ ಸಿಬ್ಬಂದಿ ಸುಗಮ ವಾಹನ ಸಂಚಾರಕ್ಕೆ ಬೆವರು ಸುರಿಸುತ್ತಿದ್ದದ್ದು ಕಂಡುಬಂತು.

  ಗಂಟೆಗಟ್ಟಲೆ ಟ್ರಾಪಿಕ್ ಜಾಮ್‌ನಲ್ಲಿ ಕಾಯಬೇಕಾದ ಸ್ಥಿತಿ ಇದ್ದರೂ, ಅತ್ತಿಬೆಲೆ ಟೋಲ್ ಆಡಳಿತ ಮಂಡಳಿ ಾಸ್ಟಾೃಗ್ ಸ್ಕ್ಯಾನರ್ ಕಾರ್ಯನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ದಿನ ಟೋಲ್‌ನಲ್ಲಿ ಪರದಾಡುವಂತಾಗಿದೆ.
  ಬೈರೇಶ್, ವಾಹನ ಸವಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts