19 C
Bengaluru
Saturday, January 18, 2020

ಹೋಳಿಗೆ ತುಪ್ಪದ ವಿಶಿಷ್ಟ ಜಾತ್ರೆ

Latest News

ಸನ್ನಡತೆ ತೋರಿದರೆ ರೌಡಿ ಪಟ್ಟಿಯಿಂದ ಖುಲಾಸೆ

ಧಾರವಾಡ: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ತೆರೆಯಲಾಗಿರುವ ರೌಡಿಶೀಟರ್ ಪಟ್ಟಿಯನ್ನು ಅವರು ತೋರಿದ ಸನ್ನಡತೆ ಹಾಗೂ ಪುನಃ ಪ್ರಕರಣಗಳಲ್ಲಿ ಭಾಗಿಯಾಗದ ಬಗ್ಗೆ ಪರಿಶೀಲಿಸಿದ...

ಉಣಕಲ್ ಸಿದ್ಧಪ್ಪಜ್ಜನವರ ವಿಜೃಂಭಣೆಯ ರಥೋತ್ಸವ

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧಪ್ಪಜ್ಜನವರ 99ನೇ ಪುಣ್ಯಾರಾಧನೆ ನಿಮಿತ್ತ ಉಣಕಲ್ ಸಾಯಿ ನಗರ ರಸ್ತೆಯ ಶ್ರೀ ಸಿದ್ಧಪ್ಪಜ್ಜನವರ ಮೂಲಗದ್ದುಗೆಯ ಮಠದ ಆವರಣದಲ್ಲಿ ಶುಕ್ರವಾರ...

ಸಿಎಎ ಜಾಗೃತಿಗೆ ಷಾ ಗರ್ಜನೆ

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮ್ಮುಖದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶ ನಡೆಯಲಿರುವ ಹುಬ್ಬಳ್ಳಿ ನೆಹರು ಮೈದಾನದ...

ಕೃಷಿ ಜಾತ್ರೆ ಇಂದಿನಿಂದ

ಧಾರವಾಡ: ಉತ್ತರ ಕರ್ನಾಟಕ ಭಾಗದ ರೈತರ ಪಾಲಿನ ಒಕ್ಕಲುತನದ ಜಾತ್ರೆ ಎಂದೇ ಖ್ಯಾತವಾಗಿರುವ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳ ಜ....

ಧರ್ಮ ಆಚರಣೆಯಿಂದ ಬೆಲೆ-ನೆಲೆ

ಹುಬ್ಬಳ್ಳಿ: ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಸತ್ಯದ ತಳಹದಿ ಮೇಲೆ ಧರ್ಮ, ಸಂಸ್ಕೃತಿ ಗಟ್ಟಿಗೊಳ್ಳಬೇಕಾಗಿದೆ. ಸತ್ಯ ಶುದ್ಧವಾದ ಧರ್ವಚರಣೆಯಿಂದ ವ್ಯಕ್ತಿತ್ವಕ್ಕೆ...

ಎ.ಪಿ.ಮಠಪತಿ ಕಮಲನಗರ
ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ ಜತೆ ತುಪ್ಪದ ರುಚಿ ಸವಿಯುವುದು ಹಬ್ಬದ ವೈಶಿಷ್ಟ್ಯ. ಆದರೆ ಕಮಲನಗರ ತಾಲೂಕಿನ ಖೇಡ್ ಗ್ರಾಮದಲ್ಲಿ ಭಾನುವಾರ ಜಪಯಜ್ಞ ಪೂಜಾ ಮಹೋತ್ಸವ ಮತ್ತು ನಾವದಗಿಯ ಶ್ರೀ ರೇವಪ್ಪಯ್ಯ ಸ್ವಾಮೀಜಿ ಗುರುಪೂಜೆ ನಿಮಿತ್ತ ಹೋಳಿಗೆ-ತಪ್ಪದ್ದೇ ಜಾತ್ರೆ ನಡೆದಿದ್ದು ಮತ್ತಷ್ಟು ವಿಶಿಷ್ಟ ಎನಿಸಿದೆ.
14 ವರ್ಷಗಳಿಂದ ಕಾರಹುಣ್ಣಿಮೆ ಆರನೇ ದಿನಕ್ಕೆ ಖೇಡ್ನಲ್ಲಿ ಈ ಹೋಳಿಗೆ-ತುಪ್ಪದ ಜಾತ್ರೆ ನಡೆಯುತ್ತದೆ. ಕರ್ನಾಟಕ ಅಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣಗಳಿಂದಲೂ ಭಕ್ತಸಮೂಹ ಹರಿದುಬರುತ್ತದೆ. ಬಂದವರಿಗೆಲ್ಲ ಬೆಳಗ್ಗೆಯಿಂದ ಇಳಿಹೊತ್ತಿನವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಪಡಿಸುತ್ತಾರೆ ಗ್ರಾಮಸ್ಥರು.
ಈ ಸಲ ಹೈದರಾಬಾದ್ನಿಂದ 15 ಕೆಜಿಯ 55 ಡಬ್ಬಿ ತುಪ್ಪ ಹಾಗೂ 950 ಕೆಜಿ ಕಡಲೆ ಬೇಳೆಯನ್ನು ದಾಸೋಹಕ್ಕಾಗಿ ತರಲಾಗಿದೆ. ಖೇಡ್ನಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಂಡು ಹೋದ ಗೃಹಿಣಿಯರು, ಉದ್ಯೋಗ ಅರಸಿ ಹೋದ ಪುರುಷರು ತಪ್ಪದೇ ಈ ಜಾತ್ರೋತ್ಸವಕ್ಕೆ ಬಂದಿದ್ದರಿಂದ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಂದರಲ್ಲಿ ಜನಸಾಗರ, ಸಂಗಮ ಗ್ರಾಮದಿಂದ ರಸ್ತೆಯುದ್ದಕ್ಕೂ ಜೀಪ್, ಟಂಟಂ, ಟೆಂಪೋ, ಮೋಟಾರ್ ಸೈಕಲ್, ಕಾರುಗಳ ಸಂಚಾರ ವ್ಯಾಪಕವಾಗಿತ್ತು.
ಜಾತ್ರೆಯಲ್ಲಿ ವಿಭೂತಿ, ರುದ್ರಾಕ್ಷಿ, ತೆಂಗು, ಕರಿದ ತಿಂಡಿ ತಿನಿಸು ಹಾಗು ಮಕ್ಕಳ ಆಟಿಕೆಗಳ ಅಂಗಡಿಗಳಲ್ಲಿ ಮಾರಾಟ-ಖರೀದಿ ಜೋರಾಗಿ ನಡೆಯಿತು. ಜಾತ್ರೆಗೆ ಮುನ್ನ ಐದು ದಿನ ತಡೋಳಾ-ಮೆಹಕರ್ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಬೆಳಗ್ಗೆ ಇಷ್ಟಲಿಂಗ ಪೂಜೆ, ಜಪ, ಧ್ಯಾನದ ಕುರಿತು ಪ್ರಶಿಕ್ಷಣ ಹಾಗೂ ಸಂಜೆ ಪ್ರವಚನ ನೀಡಿದ್ದಾರೆ.
ಮಹಾತಪಸ್ವಿ ಶ್ರೀ ರೇವಪ್ಪಯ್ಯ ಸ್ವಾಮೀಜಿ ಅವರ ದಾಸೋಹ ಕಾರ್ಯವನ್ನು ಕಳೆದ 14 ವರ್ಷಗಳಿಂದ ಖೇಡ್ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿರುವುದು ಈ ಜಾತ್ರೆಯ ವಿಶೇಷ.

ಭಾಲ್ಕಿ ತಾಲೂಕಿನ ನಾವದಗಿಯ ಶ್ರೀ ರೇವಪ್ಪಯ್ಯ ಖೇಡ್ನಲ್ಲಿ ತಪಸ್ಸು ಕುಳಿತಿದ್ದರು. ಈ ಸ್ಥಳದಲ್ಲಿ ಗ್ರಾಮಸ್ಥರು ಅವರ ಭವ್ಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಶ್ರೀ ರೇವಪ್ಪಯ್ಯನವರು ತಮ್ಮ ಜೀವಿತಾವಧಿಯಲ್ಲಿ ಗುರುಲಿಂಗ ಜಂಗಮರ ಸೇವೆ ಸಂಸ್ಕಾರ ನೀಡುತ್ತ ಗ್ರಾಮ ಗ್ರಾಮಗಳಲ್ಲಿ ಹೋಳಿಗೆ-ತುಪ್ಪದ ದಾಸೋಹ ಮಾಡಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರ ದಾಸೋಹ ಕಾರ್ಯವನ್ನು ಖೇಡ್ ಗ್ರಾಮಸ್ಥರು ಮುಂದುವರಿಸಿದ್ದಾರೆ.

ಈ ಜಾತ್ರೆಯಲ್ಲಿ ಯಾವುದೇ ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಸಮಾನರಾಗಿ ಹರ್ಷದಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಗ್ರಾಮೀಣ ಭಾಗದ ಸಂಸ್ಕೃತಿ ಪ್ರತೀಕವೇ ಹೋಳಿಗೆ-ತುಪ್ಪದ ಜಾತ್ರೆ.
| ಶ್ರೀ ರಾಜೇಶ್ವರ ಶಿವಾಚಾರ್ಯ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...