22.5 C
Bengaluru
Sunday, January 19, 2020

ಹೋರಾಟದ ಅಸ್ತ್ರವಾಗಲಿ ರಂಗಭೂಮಿ

Latest News

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಧಾರವಾಡ (ಡಾ. ಡಿ.ಸಿ. ಪಾವಟೆ ವೇದಿಕೆ): ಕನ್ನಡ ಭಾಷೆ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ರಂಗಭೂಮಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ರಂಗ ಪ್ರಯೋಗಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳು ಸಾಕಷ್ಟಿವೆ. ಅವುಗಳನ್ನು ಅನುದಾನಕ್ಕಾಗಿ ಬಳಸದೇ ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕಾಗಿದೆ ಎಂಬ ಅಭಿಪ್ರಾಯ ರಂಗಭೂಮಿ ಇತ್ತಿಚಿನ ಪ್ರಯೋಗಗಳು ಗೋಷ್ಠಿಯಲ್ಲಿ ಹೊರಹೊಮ್ಮಿತು.

ಇಲ್ಲಿಯ ಕೃಷಿ ವಿವಿ ಆವರಣದ ಪ್ರೇಕ್ಷಾಗೃಹದ ಡಾ. ಡಿ.ಸಿ. ಪಾವಟೆ ವೇದಿಕೆಯಲ್ಲಿ ಶನಿವಾರ ನಡೆದ ರಂಗಭೂಮಿ ಇತ್ತಿಚಿನ ಪ್ರಯೋಗಗಳು ಗೋಷ್ಠಿಯಲ್ಲಿ ಮಾತನಾಡಿದ ರಂಗಭೂಮಿ ತಜ್ಞರು, ಇತ್ತೀಚಿನ ಬದಲಾವಣೆಗಳನ್ನು ದಾಖಲಿಸಿದರು.

ಪೊ›. ಲಕ್ಷ್ಮಿ ಚಂದ್ರಶೇಖರ ಅವರು ಏಕವ್ಯಕ್ತಿ ಪ್ರಯೋಗ ಮತ್ತು ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಮಾತನಾಡಿ, ಏಕವ್ಯಕ್ತಿ ರಂಗಪ್ರಯೋಗ ಅದರಲ್ಲೂ ಮಹಿಳೆಯರ ಪಾತ್ರಗಳನ್ನು ಜನ ಈಗ ಒಪ್ಪಿಕೊಳ್ಳುತ್ತಿದ್ದಾರೆ. ಏಕವ್ಯಕ್ತಿ ಎಂದರೆ ಬರೀ ಪುರುಷ ಎಂದು ಪರಿಗಣಿಸಲಾಗುತ್ತಿತ್ತು ಎಂದರು.

ತಾಸು, ಒಂದೂವರೇ ತಾಸು ಒಬ್ಬರೇ ವೇದಿಕೆ ಮೇಲೆ ನಿಂತು ಪ್ರಯೋಗ ನೀಡುವುದನ್ನು ಈಗ ತಂತ್ರಜ್ಞಾನ ಸಲೀಸಾಗಿಸಿದೆ. ಅದರಿಂದ ಇನ್ನಷ್ಟು ಅಚ್ಚುಕಟ್ಟಾಗಿ ನಾಟಕ ಕಟ್ಟಿಕೊಡಲು ನೆರವಾಗಿದೆ ಎಂದರು.

ಸಮಾಜದ ಅಂಕುಡೊಂಕುಗಳನ್ನು ತಿಳಿಸುವ ಹಾಗೂ ಪ್ರತಿಭಟಿಸುವ ಹೋರಾಟದ ಅಸ್ತ್ರವಾಗಿಯೂ ನಾಟಕ ಬಳಕೆಯಾಗಬೇಕು ಎಂದು ಪ್ರತಿಪಾದಿಸಿದರು.

ವೃತ್ತಿ ರಂಗಭೂಮಿ ಇಂದು ಕುರಿತು ಡಾ. ರಾಮಕೃಷ್ಣ ಮರಾಠೆ ಮಾತನಾಡಿ, ಸಮಕಾಲೀನ ಸಮಸ್ಯೆಗಳಿಗೆ ರಂಗಭೂಮಿ ವೇದಿಕೆಯಾಗುತ್ತ ಬಂದಿದೆ. ಸ್ವಾತಂತ್ರ್ಯ ಚಳವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ ರಂಗಭೂಮಿ 1980ರ ದಶಕದ ಹೊತ್ತಿಗೆ ನಶಿಸಿತು. ಆದರೆ, ನಂತರದಲ್ಲಿ ಸರ್ಕಾರದ ಅನುದಾನ ಆರಂಭವಾದ ಮೇಲೆ ಅನುದಾನಕ್ಕಾಗಿಯೇ ಕೆಲ ಕಂಪನಿಗಳು ಹುಟ್ಟಿಕೊಂಡದ್ದು ವಿಪರ್ಯಾಸ ಎಂದರು.

ವೃತ್ತಿ ರಂಗಭೂಮಿಯಲ್ಲಿ 90 ವರ್ಷ ಕಳೆದಿರುವ ಕೆಬಿಆರ್ ಡ್ರಾಮಾ ಕಂಪನಿಯಂತ ಕೆಲ ಕಂಪನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಕೌಶಲ ಕಲಾವಿದರ ಕೊರತೆ ಎದುರಾಗುತ್ತಿದೆ. ಸರ್ಕಾರ ವೃತ್ತಿ ರಂಗಭೂಮಿ ಅಧ್ಯಯನ ಹಾಗೂ ತರಬೇತಿ ಕೇಂದ್ರ ಆರಂಭಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ಇತ್ತಿಚೀನ ಕನ್ನಡ ನಾಟಕಗಳ ಬಗ್ಗೆ ಮಾತನಾಡಿದ ಸುಭಾಸ ನರೇಂದ್ರ, ನಿರ್ದೇಶಕನ ಆಶಯದಂತೆ ಕೆಲ ನಾಟಕಗಳು ಪ್ರಯೋಗ ಕಾಣುತ್ತಿದ್ದು, ಸಮಾಜದ ಸಮಸ್ಯೆಗಳು ನಗಣ್ಯವಾಗುತ್ತಿವೆ ಎಂದು ವಿಷಾದಿಸಿದರು.

ಪ್ರೇಕ್ಷಕರನ್ನು ಸೆಳೆಯಲು ಇಂದಿನ ಕೆಲ ನಾಟಕಗಳಿಗೆ ಆಕರ್ಷಕ ಹೆಸರು ಇಡಲಾಗುತ್ತಿದೆ. ಸುಶಿಕ್ಷಿತರು ನಾಟಕಗಳಿಂದ ದೂರ ಸರಿಯುವಂತಹ ವಾತಾವರಣ ನಿರ್ವಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಟಕ ರಂಗ ಪ್ರತಿಕ್ರಿಯಿಸಬೇಕಿದೆ

ಅಧ್ಯಕ್ಷತೆ ವಹಿಸಿದ್ದ ಸಿ. ಬಸವಲಿಂಗಯ್ಯ ಮಾತನಾಡಿ, ಮುಟ್ಟಿನಿಂದಲೇ ಹುಟ್ಟುವ ಮನುಷ್ಯ ಮಹಿಳೆಯೊಬ್ಬಳು ದೇಗುಲ ಪ್ರವೇಶ ಮಾಡುವುದನ್ನು ವಿರೋಧಿಸುವುದು ಏಕೆ? ಮುಟ್ಟಾದ ಮಹಿಳೆ ಅಯ್ಯಪ್ಪ ದೇಗುಲ ಪ್ರವೇಸಿಸಿದರೆ ಅದು ಅಪವಿತ್ರ ಹೇಗೆ ಆಗುತ್ತದೆ? ಗರ್ಭ ಧರಿಸುವ ಮಹಿಳೆ ಗರ್ಭಗುಡಿ ಪ್ರವೇಶಿಸಬಾರದು ಎಂದರೆ ಹೇಗೆ? ಇದಕ್ಕೆ ರಂಗಭೂಮಿ ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದರು.

ಎಲ್ಲೆಡೆ ಇಂಗ್ಲಿಷ ಆವರಿಸಿಕೊಳ್ಳುತ್ತಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಸಿನಿಮಾ ಸಾಹಿತ್ಯ ಇಂದು ಉತ್ತಮವಾಗಿ ಮೂಡಿ ಬರುತ್ತಿಲ್ಲ. ಸಮಾಜದ ಇಂಥ ಸಮಸ್ಯೆಗಳ ಬಗ್ಗೆ ರಂಗಭೂಮಿ ಪ್ರತಿಭಟನೆ ವ್ಯಕ್ತಪಡಿಸಬೇಕು, ಜೊತೆಗೆ ರಂಜನೆಯನ್ನೂ ನೀಡಬೇಕಾದ ಸವಾಲು ಇದೆ ಎಂದರು.

ಆಕ್ಷೇಪ: ಮಧ್ಯಾಹ್ನ 3.45ಕ್ಕೆ ನಿಗದಿಯಾಗಿದ್ದ ರಂಗಭೂಮಿ ಗೋಷ್ಠಿ ಹಿಂದಿನ ಗೋಷ್ಠಿ ತಡವಾಗಿದ್ದರಿಂದ ಸಂಜೆ 5ಗಂಟೆ ಹೊತ್ತಿಗೆ ಆರಂಭವಾಯಿತು. ಈ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡುವವರು ಹೆಚ್ಚು ಮಾತನಾಡುವುದಕ್ಕೆ ಪ್ರೇಕ್ಷಕರು ಆಕ್ಷೇಪಿಸಿದ ಘಟನೆ ನಡೆಯಿತು. ಈ ಗೋಷ್ಠಿ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯಬೇಕಿದ್ದ ಕಾರಣ ಬಹಳಷ್ಟು ಜನ ಬೇಗ ಮುಗಿಸಲು ಒತ್ತಾಯಿಸಿದರು.

ಸಮ್ಮೇಳನ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ವೇದಿಕೆ ಮೇಲಿದ್ದರು. ಮಲ್ಲಿಕಾರ್ಜುನ ಮಹಾಮನೆ ಸ್ವಾಗತಿಸಿದರು. ಎಂ.ಬಿ. ಪವಾಡಶೆಟ್ಟರ್ ನಿರ್ವಹಿಸಿದರು. ಕೆ.ಎನ್. ಅವಿನಾಶ್ ವಂದಿಸಿದರು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...