ಹೋಮಿಯೋಪಥಿ ಚಿಕಿತ್ಸೆಯಿಂದ ಅನುಕೂಲ

ಹುಬ್ಬಳ್ಳಿ: ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ನಗರದಲ್ಲಿ ಭಾನುವಾರ ಡಾ. ಸ್ಯಾಮುವೆಲ್ ಹನ್ನೆಮನ್ ಅವರ 264ನೇ ಹುಟ್ಟುಹಬ್ಬದ ಅಂಗವಾಗಿ ವಿಶ್ವ ಹೋಮಿಯೋಪಥಿಕ್ ದಿನ ಆಚರಿಸಲಾಯಿತು. ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್​ನ ಹುಬ್ಬಳ್ಳಿ-ಧಾರವಾಡದ ಶಾಖೆಯನ್ನು ಈ ವೇಳೆ ಸಂಸದ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು , ವೈದ್ಯಕೀಯ ರಂಗದಲ್ಲಿ ಹೋಮಿಯೋಪಥಿ ಚಿಕಿತ್ಸೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಹೋಮಿಯೋಪಥಿ ಚಿಕಿತ್ಸೆಯಿಂದ ಹಲವಾರು ರೋಗಗಳನ್ನು ಗುಣಪಡಿಸಬಹುದಾಗಿದೆ ಎಂದರು. ಅತಿಥಿಯಾಗಿ ಪಾಲ್ಗೊಂಡ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಹು-ಧಾ ಜನರಿಗೆ ಅರಿವು ಮೂಡಿಸಲು ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಶನ್ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.

ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ವೀರಬ್ರಹ್ಮಾಚಾರಿ ಅಧ್ಯಕ್ಷತೆ ವಹಿಸಿದ್ದರು. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ, ಅಧೀಕ್ಷಕ ಡಾ. ಅರುಣಕುಮಾರ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ಇದ್ದರು.

ನಂತರ ನಡೆದ ಕಾರ್ಯಾಗಾರದಲ್ಲಿ ಅಸೋಸಿಯೇಷನ್​ನ ಉಪಾಧ್ಯಕ್ಷ ಡಾ. ಎಸ್. ಎಸ್. ಪಾಟೀಲ, ಡಾ. ಗಿರೀಶ ಜಿ.ಎಸ್., ಡಾ. ರಾಜಕುಮಾರ ದೇಸಾಯಿ, ಡಾ. ಸಂದೀಪ ಬಂಕಾಪೂರ, ಡಾ. ವೀರೇಂದ್ರ ಭಸ್ಮೆ ಹೋಮಿಯೋಪಥಿಕ್ ಬಗ್ಗೆ ಮಾತನಾಡಿದರು. ಡಾ. ಸಂದೀಪ ಕುಲಕರ್ಣಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಸಂದೀಪ ಬಂಕಾಪೂರ ನಿರೂಪಿಸಿದರು. ಕಾರ್ಯದರ್ಶಿ ಡಾ. ಕೆ. ಎಸ್. ಸಮೀರಕುಮಾರ ವಂದಿಸಿದರು.

Leave a Reply

Your email address will not be published. Required fields are marked *