ಹೋಟೆಲ್​ಗೆ ನುಗ್ಗಿದ ಟ್ರ್ಯಾಕ್ಟರ್​ಗೆ ಇಬ್ಬರು ಬಲಿ

ಹೋಟೆಲ್, ಟ್ರ್ಯಾಕ್ಟರ್, ಭದ್ರಾವತಿ, ಬೈಕ್, ಸಾವು,

Hotel, tractor, bastard, bike, death

ಹೊಳೆಹೊನ್ನೂರು: ಭದ್ರಾವತಿ ತಾಲೂಕು ಹೊಳೆಹೊನ್ನೂರಿ ಕಲ್ಲಿಹಾಳ್ ಸರ್ಕಲ್​ನಲ್ಲಿ ಸೋಮವಾರ ಬೆಳಗ್ಗೆ ಟ್ರ್ಯಾಕ್ಟರ್ ಒಂದು ಬೈಕ್​ನಲ್ಲಿದ ವ್ಯಕ್ತಿಯ ಮೇಲೆ ಹರಿದು ಹೋಟೆಲ್​ಗೆ ನುಗ್ಗಿದ ಪರಿಣಾಮ ಬೈಕಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಅಪಘಾತ ನೋಡಿದ ಮಹಿಳೆಯೂ ಹೃದಯಾಘಾದಿಂದ ಮೃತಪಟ್ಟಿದ್ದಾರೆ. ತಟ್ಟೆಹಳ್ಳಿಯ ಚಂದ್ರಪ್ಪ (55) ಟ್ರ್ಯಾಕ್ಟರ್ ಹರಿದು ಮೃತಪಟ್ಟ ದುರ್ದೈವಿ. ಟ್ರ್ಯಾಕ್ಟರ್ ಕೈಮರ ಕಡೆಯಿಂದ ಕಲ್ಲಿಹಾಳ್ ಸರ್ಕಲ್ ಮಾರ್ಗವಾಗಿ ಅರಬಿಳಚಿ ಕಡೆ ಚಲಿಸುತ್ತಿತ್ತು. ಟ್ರ್ಯಾಕ್ಟರ್ ಚಾಲಕ ಕುಡಿದು ಚಾಲನೆ ಮಾಡುತ್ತಿದ್ದ ಎನ್ನಲಾಗಿದ್ದು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ರಸ್ತೆ ಬದಿಯ ಹೋಟೆಲ್​ಗೆ ನುಗ್ಗಿದೆ. ಪರಿಣಾಮ ಸ್ಥಳದಲ್ಲಿ ಬೈಕ್​ನಲ್ಲಿ ಇದ್ದ ಚಂದ್ರಪ್ಪ ಅಸುನೀಗಿದ್ದಾರೆ. ಅಪಘಾತ ನೋಡಿದ ಹೋಟೆಲ್ ಮಾಲೀಕರ ತಾಯಿ ಸುಶೀಲಮ್ಮ (56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್ ಕಲ್ಲಿಹಾಳು ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಚಾಲಕ ಪರಾರಿಯಾಗಿದ್ದಾನೆ. ಹೊಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು.