ಸಿದ್ದಾಪುರ: ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದಂತೆ ಹೋಂ ಗಾರ್ಡ್ಗಳು ಸಹ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಕರ್ತವ್ಯಕ್ಕೆ ಎಲ್ಲಿಯೇ ನಿಯೋಜನೆ ಮಾಡಿದರೂ ಅಲ್ಲಿಗೆ ತೆರಳಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮ, ಸಚಿವರ ಆಗಮನ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡುವುದಕ್ಕಾಗಿ ಹೋಂ ಗಾರ್ಡ್ಗಳನ್ನು ನೇಮಕ ಮಾಡುವ ರೀತಿಯಲ್ಲಿಯೇ ಕರೊನಾ ಲಾಕ್ಡೌನ್ ಸಂದರ್ಭದಲ್ಲಿಯೂ ನೇಮಕ ಮಾಡಲಾಗಿದೆ.
ತಾಲೂಕಿನಲ್ಲಿ 1984-85ನೇ ಇಸವಿಯಿಂದಲೂ ಕಾರ್ಯನಿರ್ವಹಿಸುತ್ತಿರುವ ಹೋಂ ಗಾರ್ಡ್ಗಳಿದ್ದಾರೆ. ಅವರೆಲ್ಲ ಸಂಬಳಕ್ಕೆ ಹೆಚ್ಚು ಮಹತ್ವ ನೀಡದೇ ತಾವು ನಿರ್ವಹಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚುವರಿಯಾಗಿ 10 ಜನ ಹೋಂ ಗಾರ್ಡ್ಗಳನ್ನು ಜಿಲ್ಲಾಡಳಿತ ನೇಮಕ ಮಾಡಿದೆ.
ಲಾಕ್ಡೌನ್ ಸಂದರ್ಭ ದಲ್ಲಿ ಹೋಂ ಗಾರ್ಡ್ಗಳು ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಓಡಾಡಿ ಕರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿರುವುದು ಶ್ಲಾಘನೀಯ.
| ಗಣಪತಿ ನಾಯ್ಕ ವಾಹನ ಚಾಲಕ ಸಿದ್ದಾಪುರ
ಸಿದ್ದಾಪುರದಲ್ಲಿ ಹೋಂ ಗಾರ್ಡ್ಗಳು ಪೊಲೀಸ್ ಸಿಬ್ಬಂದಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಇಲ್ಲ. ಲಾಕ್ಡೌನ್ ಆದಾಗಿನಿಂದಲೂ ಮತ್ತಷ್ಟು ಜವಾಬ್ದಾರಿ ಅವರಿಗೆ ವಹಿಸಿದ್ದೇವೆ. ಜನರು ಮೆಚ್ಚುವಂತೆ ಅವರು ಕಾರ್ಯನಿರ್ವಹಿಸಿದ್ದಾರೆ.
| ಪ್ರಕಾಶ ಸಿಪಿಐ ಸಿದ್ದಾಪುರ