ಹೊಸ ಊರ್ವಶಿ ಕಿಯಾರಾ

ಳೇ ಸೂಪರ್ ಹಿಟ್ ಹಾಡನ್ನು ಮರುಸೃಷ್ಟಿ ಮಾಡಿದರೆ ಗೆಲುವು ಗ್ಯಾರಂಟಿ ಎಂಬ ಸೂತ್ರ ಬಾಲಿವುಡ್ ಮಂದಿಗೆ ಗೊತ್ತಾಗಿಬಿಟ್ಟಿದೆ. 1999ರಲ್ಲಿ ತೆರೆಕಂಡ ‘ಸಿರ್ಫ್ ತುಮ್ ಚಿತ್ರದಲ್ಲಿ ನಟಿ ಸುಷ್ಮಿತಾ ಸೇನ್ ನರ್ತಿಸಿದ್ದ ‘ದಿಲ್ಬರ್ ದಿಲ್ಬರ್..’ ಗೀತೆಯನ್ನು ಈಗ ‘ಸತ್ಯಮೇವ ಜಯತೇ’ ಸಿನಿಮಾದಲ್ಲಿ ಮರುಬಳಕೆ ಮಾಡಿಕೊಳ್ಳಲಾಗಿದೆ. ನೋರಾ ಫತೇಹಿ ಕುಣಿದಿರುವ ಈ ಹಾಡು ಸದ್ಯಕ್ಕಂತೂ ಎಲ್ಲರ ಹಾಟ್ ಫೇವರಿಟ್. ಅದೇ ರೀತಿ ಈಗಾಗಲೇ ಹತ್ತಾರು ಹಳೇ ಗೀತೆಗಳು ಹೊಸ ಅವತಾರದಲ್ಲಿ ಆಗಮಿಸಿ ಪ್ರೇಕ್ಷಕರನ್ನು ರಂಜಿಸಿವೆ. ಸಂಗೀತ ಸಂಯೋಜಕ, ಗಾಯಕ ಹನಿ ಸಿಂಗ್ ಕಣ್ಣು ಕೂಡ ಒಂದು ಕ್ಲಾಸಿಕ್ ಗೀತೆಯ ಮೇಲೆ ಬಿದ್ದಿದೆ. 1994ರಲ್ಲಿ ಪ್ರಭುದೇವ ನಟಿಸಿದ್ದ ‘ಕಾದಲನ್’ ಚಿತ್ರದ ಮೂಲಕ ಖ್ಯಾತಿ ಗಳಿಸಿತ್ತು ‘ಊರ್ವಶಿ ಊರ್ವಶಿ..’ ಹಾಡು. ಎ.ಆರ್. ರೆಹಮಾನ್ ಬತ್ತಳಿಕೆಯಿಂದ ಬಂದ ಆ ಗೀತೆಯಲ್ಲಿ ಪ್ರಭುದೇವ ನರ್ತಿಸಿದ ಪರಿಗೆ ಇಡೀ ವಿಶ್ವವೇ ಬೆರಗಾಗಿತ್ತೆಂದರೂ ಅತಿಶಯೋಕ್ತಿ ಇಲ್ಲ. ಈಗ ಅದೇ ಹಾಡಿಗೆ ಹೊಸ ಸಾಹಿತ್ಯ ಬರೆದು, ಅಲ್ಪ ಸ್ವಲ್ಪ ರಾಗ ಬದಲಾಯಿಸಿ, ಹೊಸ ಮೆರುಗು ತುಂಬಿದ್ದಾರಂತೆ ಹನಿ ಸಿಂಗ್. ಅದರಲ್ಲಿ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಶಾಹಿದ್ ಕಪೂರ್ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದು ಕಿಯಾರಾ ಕೊಂಚ ನರ್ವಸ್ ಆಗಿದ್ದಾರಂತೆ. ಜನರು ಪ್ರಭುದೇವ ಡಾನ್ಸ್ ಜತೆ ಹೋಲಿಕೆ ಮಾಡುತ್ತಾರೆ ಎಂಬುದು ಅದಕ್ಕೆ ಕಾರಣವಂತೆ. ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ ಸಂಜಯ್ ಶೆಟ್ಟಿ. ‘ಮೂಲ ಹಾಡಿನ ಕೆಲವು ಮುಖ್ಯ ಸಾಲುಗಳನ್ನು ಹಾಗೆಯೇ ಉಳಿಸಿಕೊಂಡು ಹೊಸ ಸಾಹಿತ್ಯ ಬರೆದಿದ್ದೇವೆ. ವಿವಿಧ ಲೊಕೇಷನ್​ಗಳಲ್ಲಿ ಚಿತ್ರೀಕರಿಸಿ, ಇಂದಿನ ಟ್ರೆಂಡ್​ಗೆ ತಕ್ಕಂತೆ ಹಾಡನ್ನು ಮರುಸೃಷ್ಟಿಸುತ್ತಿದ್ದೇವೆ’ ಎಂದಿದ್ದಾರೆ ಹನಿ ಸಿಂಗ್. ಅಂದಹಾಗೆ, ‘ಊರ್ವಶಿ..’ ಗೀತೆಯನ್ನು ಮರುಬಳಕೆ ಮಾಡಿಕೊಂಡಿದ್ದು ಇದೇ ಮೊದಲೇನಲ್ಲ. ಅಮೆರಿಕದ ಪಾಪ್ ಗಾಯಕ ವಿಲ್.ಐ.ಆಮ್ (ವಿಲಿಯಂ ಜೇಮ್್ಸ ಆಡಮ್್ಸ ಜೂನಿಯರ್) 2014ರಲ್ಲಿ ‘ಇಟ್ಸ್ ಮೈ ಬರ್ತ್​ಡೇ..’ ಹಾಡಿನಲ್ಲಿ ‘ಊರ್ವಶಿ..’ ಟ್ಯೂನ್ ಬಳಸಿಕೊಂಡಿದ್ದರು. 2016ರಲ್ಲಿ ಬಂದ ಆಸ್ಟ್ರೇಲಿಯನ್ ಚಿತ್ರ ‘ಲಯನ್’ನಲ್ಲೂ ಈ ಹಾಡು ಜಾಗ ಪಡೆದಿತ್ತು. ಈಗ ಹನಿ ಸಿಂಗ್, ಕಿಯಾರಾ, ಶಾಹಿದ್, ಸಂಜಯ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಹೊಸ ‘ಊರ್ವಶಿ..’ ಹೇಗೆ ಮೂಡಿಬರಲಿದ್ದಾಳೆ ಎಂಬ ಕುತೂಹಲವಿದೆ.

Leave a Reply

Your email address will not be published. Required fields are marked *