ಶ್ರೀರಂಗಪಟ್ಟಣ : ತಾಲೂಕಿನ ಹೊಸೂರು ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮ ಹೊರವಲಯದಲ್ಲಿರುವ ದೇವಾಲಯದಲ್ಲಿ ದೇವರ ಶಿವಾರ್ಚಕ ಮಹೇಶ್ ಅವರು ಸ್ವಾಮಿಗೆ ಹಾಲರವಿ ಅರ್ಪಣೆ, ಪಂಜು ಸೇವೆ, ಹುಲಿವಾಹನೋತ್ಸವ ಬಳಿಕ ವಿವಿಧ ಸಂಪ್ರದಾಯ ಪೂಜೆಯೊಂದಿಗೆ ಸರ್ವಾಲಂಕಾರಗೊಂಡಿದ್ದ ಮಹದೇಶ್ವರರಿಗೆ ಮಹಾಮಂಗಳಾರತಿ ನೆರವೇರಿಸಿ ನಂತರ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿದರು.
ಶ್ರೀ ಮಹದೇಶ್ವರಸ್ವಾಮಿ ಉತ್ಸವ ಮೂರ್ತಿ ಹೊತ್ತ ಬ್ರಹ್ಮರಥಕ್ಕೆ ನಗುವನಹಳ್ಳಿ, ಚಂದಗಾಲು, ಹೊಸೂರು ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ಬಿಜೆಪಿ ಮುಖಂಡ ಸಚ್ಚಿದಾನಂದ ಚಾಲನೆ ನೀಡಿದರು. ದೇವಾಲಯ ಆವರಣದಲ್ಲಿ ಜಮಾವಣೆಗೊಂಡಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಉಘೇ ಮಾಯಕಾರ, ಉಘೇ ಮಾದಪ್ಪ ಎಂಬ ಜಯಘೋಷ ಮೊಳಗಿಸಿದರು. ಹರಕೆ ಹೊತ್ತ ಭಕ್ತರು ಹಾಗೂ ನೂತನ ವಧು, ವರರು ಹಣ್ಣು ದವನ ಎಸೆದು ಪ್ರಾರ್ಥಿಸಿದರು.
ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿಹುಂಡಿ, ಚಿಕ್ಕಅಂಕನಹಳ್ಳಿ, ಹುರುಳಿಕ್ಯಾತನಹಳ್ಳಿ ಸೇರಿದಂತೆ ಶ್ರೀರಂಗಪಟ್ಟಣ ಮಂಡ್ಯ, ಮೈಸೂರು ನಗರದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಹೊಸೂರು ಗ್ರಾಮದಲ್ಲಿ ಮಹದೇಶ್ವರ ರಥೋತ್ಸವ
ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips
ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…
ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips
ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…
Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!
Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…