ಹೊಸನಗರದಲ್ಲಿ ಬಿಜೆಪಿ ಸಂಭ್ರಮಾಚರಣೆ

ಹೊಸನಗರ: ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ತಮ್ಮ ಪಕ್ಷದ ಗೆಲುವು ಖಚಿತ ಆಗುತ್ತಿದ್ದಂತೆಯೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿ.ವೈ.ರಾಘವೇಂದ್ರ ಪರ ಘೊಷಣೆಗಳು ಮೊಳಗಿದವು. ತಾಲೂಕು ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿದರು. ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಎನ್.ಆರ್.ದೇವಾನಂದ್, ಎಂ.ಎನ್.ಸುಧಾಕರ, ಬೆಳಗೋಡು ಗಣಪತಿ, ಟೌನ್ ಘಟಕದ ಅಧ್ಯಕ್ಷ ಶ್ರೀಧರ್ ಹಳಗುಂದ, ಮಾವಿನಕಟ್ಟೆ ಶಿವಾನಂದ, ಬಸವರಾಜ್, ಸತೀಶ್, ಜಯನಗರ ಪ್ರಹ್ಲಾದ್, ಮಹಿಳಾ ಮೋರ್ಚಾದ ರಾಜಶ್ರೀ ರಾವ್, ಗುಲಾಬಿ ಮರಿಯಪ್ಪ, ಶಶಿಕಲಾ ಅನಂತ್, ಗಾಯತ್ರಿ ನಾಗರಾಜ್, ಗಂಗನಕೊಪ್ಪ ಉಮೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *