ಚಿತ್ರದುರ್ಗ: ಸ್ವಾಮಿ ವಿವೇಕಾನಂದರ 162ನೇ ಜಯಂತಿಯನ್ನು ಹೊಳಲ್ಕೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಆಂಜನೇಯ ಸ್ವಾಮಿ ದೇಗುಲ ಆವರಣದಲ್ಲಿ ಭಾನುವಾರ ಆಚರಿಸಲಾಯಿತು.
ಇದೇ ವೇಳೆ ವಿವೇಕಾನಂದರ ವಿದ್ಯುತ್ ವಾಣಿ ಪುಸ್ತಕ ಮತ್ತು ಸಿಹಿ ವಿತರಿಸಿ, ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಿ, ಜಯಘೋಷ ಮೊಳಗಿಸಲಾಯಿತು.
ಸ್ವಯಂ ಸೇವಕರಾದ ಅನಿಲ್, ಕುಬೇಂದ್ರಪ್ಪ, ವಿಜಯ್‌ಕುಮಾರ್, ಅಶೋಕ್, ಅಜ್ಜಯ್ಯ, ಕೆಎಸ್‌ಆರ್‌ಟಿಸಿ ನಟರಾಜ್, ಮಾಜಿ ಸೈನಿಕರಾದ ಮಂಜುನಾಥ್, ಗಿರೀಶ್, ಧ್ರುವಕುಮಾರ್, ಬಸವರಾಜ್, ವಿದ್ಯಾರ್ಥಿಗಳಿದ್ದರು.