ಹೊರ ಗುತ್ತಿಗೆ ಸಿಬ್ಬಂದಿ ಮುಂದುವರಿಸಿ

ಕಾರವಾರ: ಆರೋಗ್ಯ ಇಲಾಖೆಯಲ್ಲಿರುವ ಹೊರ ಗುತ್ತಿಗೆ ಸಿಬ್ಬಂದಿಯನ್ನು ಮುಂದುವರಿಸಬೇಕು ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ನೌಕರರು ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ಗುತ್ತಿಗೆ ನೌಕರರ ಹೋರಾಟ ಸಂಘಟನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು.

ವಿವಿಧ ತಾಲೂಕು ಆಸ್ಪತ್ರಗಳಲ್ಲಿ ನಾನ್-ಕ್ಲೀನಿಕಲ್, ಕಾಯಲ್ಪ ಸಿಬ್ಬಂದಿ ಹಾಗೂ ಡಾಟಾ ಎಂಟ್ರಿ ಆಪರೇಟರ್, ವಾಹನ ಚಾಲಕರು ಹೀಗೆ ವಿವಿಧ ವಿಭಾಗಗಳಲ್ಲಿ 500 ರಷ್ಟು ನೌಕರರು ಹೊರ ಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಅವಧಿ ಮಾರ್ಚ್ 31 ಕ್ಕೆ ಮುಕ್ತಾಯವಾಗುತ್ತಿದ್ದು. ನೌಕರರನ್ನು ಮುಂದುವರಿಸಬೇಕು. ಅಲ್ಲದೆ, ಗುತ್ತಿಗೆದಾರರು ಸರಿಯಾಗಿ ವೇತನ ನೀಡದೇ ನೌಕರರಿಗೆ ತೊಂದರೆ ನೀಡುತ್ತಿದ್ದಾರೆ. ಪರಿಷ್ಕೃತ ವೇತನ ನೀಡದೇ ಮೋಸ ಮಾಡಿದ್ದಾರೆ. ಡಿ ದರ್ಜೆ ನೌಕರರಿಗೆ ಸಮವಸ್ತ್ರ ಬಟ್ಟೆ ನೀಡುತ್ತಿಲ್ಲ. ಇದರಿಂದ ಗುತ್ತಿಗೆದಾರರಾದ ಗುರುರಾಜ ನಾಯ್ಕ (ಸ್ಕೈಲೇನ್ ಎಂಟರ್ ಪ್ರೈಸಸ್ ಅಂಕೋಲಾ, ದಿಲೀಪ ನಾಯ್ಕ(ಮಧುರ ಅಸೋಸಿಯೇಷನ್ಸ್, ಕುಮಟಾ ಇವರು ಈಗಿರುವ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಮಾರುತಿ ಸಂಕೊಳ್ಳಿ, ಉಮಾ ನಾಯ್ಕ, ಕಲ್ಪನಾ ನಾಯ್ಕ, ದೇವರಾಜ ನಾಯ್ಕ, ಬಾಬು ಅಂಬಿಗ, ಮಹಾಲಕ್ಷ್ಮೀ ಹರಿಜನ, ನಿತ್ಯಾನಂದ ನಾಯ್ಕ, ಜಯಶ್ರೀ ಸೋನಾ ಹರಿಜನ ಇತರರು ಇದ್ದರು.