More

  ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯದಲ್ಲಿ ಮಾರಿಕಾಂಬಾ ಶಿರಸಿ ಪ್ರಥಮ

  ಸಿದ್ದಾಪುರ: ತಾಲೂಕಿನ ಹೊಸ್ಕೊಪ್ಪದಲ್ಲಿ ಚೌಡೇಶ್ವರಿ ಗೆಳೆಯರ ಬಳಗದವರು ಶನಿವಾರ ಆಯೋಜಿಸಿದ್ದ ಮೂರನೇ ವರ್ಷದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾರಿಕಾಂಬಾ ಶಿರಸಿ ಪ್ರಥಮ ಹಾಗೂ ಹಾರ್ಸಿಕಟ್ಟಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

  ಉಡುಪಿ ಮೂರನೇ ಹಾಗೂ ಕಾರ್ಕಳ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ 15 ತಂಡಗಳು ಭಾಗವಹಿಸಿದ್ದವು. ನಿರ್ಣಾಯಕರಾಗಿ ಸಂಜಯ ಗೌಡ, ಎಂ.ವಿ. ನಾಯ್ಕ ಹಾಗೂ ಸಂದೀಪ ಕೊಡಿಯಾ ಕಾರ್ಯನಿರ್ವಹಿಸಿದ್ದರು.

  ಜಿಪಂ ಸದಸ್ಯ ಎಂ.ಜಿ. ಹೆಗಡೆ ಗೆಜ್ಜೆ ಪಂದ್ಯಾವಳಿ ಉದ್ಘಾಟಿಸಿದರು. ಶಂಕರನಾರಾಯಣ ಹೆಗಡೆ ಹೊಸ್ಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯ ರಘುಪತಿ ಹೆಗಡೆ, ಹಾರ್ಸಿಕಟ್ಟಾ ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಹೆಗಡೆ, ಸದಸ್ಯರಾದ ಮಧುಕೇಶ್ವರ ಹೆಗಡೆ ಬಕ್ಕೇಮನೆ, ವಿಶಾಲಾಕ್ಷಿ ಹಸ್ಲರ್, ರಾಜು ನಾಯ್ಕ ಹುಬ್ಬಗೈ, ಅಶೋಕ ಹೆಗಡೆ ಹಿರೇಕೈ, ರಾಮಚಂದ್ರ ಗೌಡ ಹೊಸ್ಕೊಪ್ಪ, ರಮೇಶ ಹಾರ್ಸಿಮನೆ, ಎಂ.ಜಿ. ಹೆಗಡೆ ಸಿದ್ದವನ, ಪರಮೇಶ್ವರ ಹೆಗಡೆ ಹೊಸ್ಕೊಪ್ಪ, ಸಣ್ಣ ಗಣಪ ಹುಲಿಯಾ ಗೌಡ ಹೊಸ್ಕೊಪ್ಪ, ಬೀರಾ ಜಟ್ಟು ಗೌಡ ಹೊಸ್ಕೊಪ್ಪ, ನಾಗು ರಾಮ ಗೌಡ ಹೊಸ್ಕೊಪ್ಪ, ಹಸರಗೋಡ ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಗೌಡ ಇತರರಿದ್ದರು.

  ಆರತಿ ಹೆಗಡೆ, ಎಂ.ಎಸ್. ಹೆಗಡೆ, ಸುಬ್ರಾಯ ಗೌಡ, ಪ್ರದೀಪ ಗೌಡ ಕಾರ್ಯಕ್ರಮ ನಿರ್ವಹಿಸಿದರು.

  See also  ನಾಗರಿಕತೆ ಹಕ್ಕಿಗೆ ಚ್ಯುತಿ ಬಾರದಿರಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts