ಹೈದರಾಬಾದ್, ಮುಂಬೈಗೆ ಶೀಘ್ರ ಏರ್ ಇಂಡಿಯಾ ವಿಮಾನ ಸೇವೆ

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಹೈದರಾಬಾದ್, ಮುಂಬೈಗೆ ಏರ್ ಇಂಡಿಯಾ ವಿಮಾನ ಸೇವೆ ಆರಂಭಿಸಲು ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಪ್ರಯತ್ನ ನಡೆಸಿದ್ದಾರೆ. ಏರ್ ಇಂಡಿಯಾ ಸಿಎಂಡಿ ಅಶ್ವಾನಿ ಲೋಹಾನಿ ಅವರನ್ನು ಇತ್ತೀಚೆಗೆ ನವದೆಹಲಿಯಲ್ಲಿ ಭೇಟಿ ಮಾಡಿದ ಜೋಶಿ ಈ ಕುರಿತಾಗಿ ರ್ಚಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಿಂದ ಹೈದರಾಬಾದ್ ಹಾಗೂ ಮುಂಬೈ ಮಧ್ಯೆ ನಿತ್ಯ ವಿಮಾನಗಳು ಹಾರಾಡಲಿವೆ. ಇನ್ನೂ ಹೆಚ್ಚಿನ ಸೇವೆ ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ. ಲೋಹಾನಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ. ಸದ್ಯ ಏರ್ ಇಂಡಿಯಾ ವಿಮಾನ ಹುಬ್ಬಳ್ಳಿ- ಬೆಂಗಳೂರು- ಮುಂಬೈ ನಡುವೆ ಸಂಚರಿಸುತ್ತಿದ್ದು, ಮುಂಬೈಗೆ ವಾರಪೂರ್ತಿ ಸೇವೆ ವಿಸ್ತರಿಸುವ ಕುರಿತು ಚಿಂತನೆ ನಡೆಸಿದೆ.

Leave a Reply

Your email address will not be published. Required fields are marked *