More

  ಹೇಮರಡ್ಡಿ ಮಲ್ಲಮ್ಮ ಮನುಕುಲಕ್ಕೆ ಮಾದರಿ


  ಯಾದಗಿರಿ: ಶಿವಶರಣೆ ಶ್ರೀಹೇಮರೆಡ್ಡಿ ಮಲ್ಲಮ್ಮ ಭಕ್ತಿ ಹಾಗೂ ಬದುಕಿನ ಆಧ್ಯಾತ್ಮಿಕ ಚಿಂತನಾ ಚೆಲುಮೆಯಾಗಿದ್ದರು. ಭಗವಂತನ ಸಾಕ್ಷಾತ್ಕಾರ ಪಡೆಯಲು ಭಕ್ತಿಯ ಮಾರ್ಗ ತೋರಿಸಿದ್ದಾರೆ. ಅವರ ಆದರ್ಶಗಳು ಮನುಷ್ಯನ ಬದುಕಿಗೆ ದಾರಿದೀಪವಾಗಿವೆ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.
  ಬುಧವಾರ ನಗರದ ಜಿಲ್ಲಾಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಮಾತನಾಡಿ, ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಬದುಕು ಹಸನಾಗುತ್ತದೆ. ಮಲ್ಲಮ್ಮನವರ ಜೀವನ ಚರಿತ್ರೆ ಮನುಕುಲಕ್ಕೆ ಮಾದರಿಯಾಗಿದೆ. ಅವರ ಸರಳ ಜೀವನ ಸುಖಿ ಜೀವನಕ್ಕೆ ನಾಂದಿ ಹಾಡಿದ್ದು, ಭರತ ಭೂಮಿ ಕಂಡ ಶ್ರೇಷ್ಠ ಮಹಿಳೆ ಎಂದು ಗುಣಗಾನ ಮಾಡಿದರು.
  ಮಲ್ಲಮ್ಮನವರು ತಾಳ್ಮೆಯ ಪ್ರತಿರೂಪವಾಗಿದ್ದಾರೆ. ಶಾಂತ ರೀತಿಯಿಂದ ಜೀವನ ನಡೆಸುವ ಮೂಲಕ ಎಲ್ಲ ಮಹಿಳೆಯರಿಗೆ ಮಾರ್ಗದಶರ್ಿಯಾಗಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗುವುದು ಅಗತ್ಯವಿದೆ. ನಾಡಿಗೆ ಶರಣರು, ದಾಸರು, ಸಂತರು ಸೇರಿ ಮಹಾನ್ ವ್ಯಕ್ತಿಗಳು ತತ್ವಾದರ್ಶಗಳನ್ನು ನೀಡಿದ್ದಾರೆ. ಅಂಥವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡದೆ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಶರಣರು ಹಾಕಿಕೊಟ್ಟ ಪಥದಲ್ಲಿ ಸಾಗಿದರೆ ಶಾಂತಿ, ಸಮೃದ್ಧಿ ಸಮಾಜ ನಿಮರ್ಾಣ ಸಾಧ್ಯ. ಮಲ್ಲಮ್ಮ ಬದುಕಿನಲ್ಲಿ ಲೌಕಿಕ ಜೀವನದ ಜತೆಗೆ ಆಧ್ಯಾತ್ಮಿಕ ಸಾಧನೆಯಿಂದ ಶ್ರೀಶೈಲ ಮಲ್ಲಿಕಾಜರ್ುನನ ಕೃಪೆಗೆ ಪಾತ್ರರಾಗಿ ಎಲ್ಲರ ಮನಸ್ಸಿನಲ್ಲಿ ನೆಲೆಸಿದ್ದಾಳೆ. ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಸಾಕಷ್ಟು ಸಾಧನೆ ಮಾಡಬಹದು ಎನ್ನುವುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಾಕ್ಷಿ ಎಂದು ಹೇಳಿದರು.
  ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಪಂ ಲೆಕ್ಕಾಕಾರಿ ವೆಂಕಟೇಶ ಚಟ್ನಳ್ಳಿ, ಹಿಂದುಳಿದ ವರ್ಗಗಳ ಇಲಾಖೆ ಅಕಾರಿ ರಾಘವೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಉತ್ತರಾದೇವಿ ಮಠಪತಿ, ಅಕಾರಿಗಳಾದ ಸಾಬಯ್ಯ ಕಲಾಲ್, ರಂಗಪ್ಪ, ನಾಗರಾಜ ನಾಗೂರ, ಕೃಷ್ಣ್ಣಪ್ಪ ನಾಯಕ, ಬಸಲಿಂಗಪ್ಪ ಕಿಲ್ಲನಕೇರಾ, ಭಗತ್ ವಾಡೇಕರ್, ವೀಣಾಶ್ರೀ, ಸರಸ್ವತಿ ಇದ್ದರು.

  See also  ಹಳೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts