ಹೆಸರು ಖರೀದಿ ಇಳಿಕೆ ಖಂಡಿಸಿ ಪ್ರತಿಭಟನೆ

 

 

 

ಧಾರವಾಡ: ಬೆಂಬಲ ಬೆಲೆ ಯೋಜನೆ ಅಡಿ ಪ್ರತಿಯೊಬ್ಬ ರೈತರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಭರವಸೆ ನೀಡಿ ಇದೀಗ 4 ಕ್ವಿಂಟಾಲ್​ಗೆ ಇಳಿಸಿರುವ ಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಉತ್ತರ ಕರ್ನಾಟಕ ನೇಗಿಲಯೋಗಿ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸಣ್ಣ ಹಾಗೂ ದೊಡ್ಡ ರೈತರೆಂದು ತಾರತಮ್ಯ ಮಾಡದೆ, ತಲಾ 10 ಕ್ವಿಂಟಾಲ್ ಹೆಸರು ಕಾಳು ಖರೀದಿಸಬೇಕು ಎಂದು ಆಗ್ರಹಿಸಿದರು. ಉದ್ದು, ಈರುಳ್ಳಿ ಫಸಲು ರೈತರ ಕೈಗೆ ಬರುತ್ತಿದ್ದು ಕೂಡಲೆ ಜಿಲ್ಲಾಡಳಿತ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪಿಸಿ, ಮಾರುಕಟ್ಟೆಯಲ್ಲಿ ರೈತರಿಗೆ ಆಗುವ ಮೋಸ ತಡೆಯಬೇಕು. ಮುಖ್ಯವಾಗಿ ದಲ್ಲಾಳಿಗಳ ಹಾವಳಿ ತಪ್ಪಿಸಬೇಕೆಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು. ರೈತ ಸಂಘದ ಪದಾಧಿಕಾರಿಗಳಾದ ಶಿವನಗೌಡ ಪಾಟೀಲ, ಈರಣ್ಣ ಬಳಿಗೇರ, ಶಿವು ಬಡಿಗೇರ, ನಿಂಗಪ್ಪ ದಿವಟಗಿ, ಮಲ್ಲಿಕಾರ್ಜುನಗೌಡ ಬಾಳನಗೌಡರ, ನಾಗಪ್ಪ ಉಂಡಿ, ಮಂಜು ಮಂಗಳಗಟ್ಟಿ, ಚನ್ನಪ್ಪ ಜಗದಪ್ಪನವರ, ಇತರರು ಇದ್ದರು.