18.1 C
Bangalore
Saturday, December 7, 2019

ಹೆಸರಿಗೆ ಮಾತ್ರ ದಾಂಡೇಲಿ ತಾಲೂಕು!

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಸುಭಾಸ ಧೂಪದಹೊಂಡ ಕಾರವಾರ

ದಾಂಡೇಲಿಯು ಪ್ರತ್ಯೇಕ ತಾಲೂಕು ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ವಿಳಂಬವಾದ ಕಾರಣ ಕಚೇರಿಗಳ ಸಂಪೂರ್ಣ ಕಾರ್ಯನಿರ್ವಹಣೆ ಇದುವರೆಗೂ ಸಾಧ್ಯವಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ 12ನೇ ತಾಲೂಕಾಗಿ ದಾಂಡೇಲಿಯನ್ನು ರಚನೆ ಮಾಡಿ 2017-18 ರ ಬಜೆಟ್​ನಲ್ಲೇ ಘೊಷಿಸಲಾಗಿತ್ತು. 2017ರ ಅಕ್ಟೋಬರ್​ನಲ್ಲಿ ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಹಳಿಯಾಳ ಹಾಗೂ ಜೊಯಿಡಾ ತಾಲೂಕಿನ ಗ್ರಾಮಗಳನ್ನು ಸೇರಿಸಿ ಸಾಂಬ್ರಾಣಿ ಹಾಗೂ ದಾಂಡೇಲಿ ಎಂಬ ಎರಡು ಹೋಬಳಿಗಳನ್ನು ರಚಿಸಲಾಯಿತು. 2018ರ ಫೆಬ್ರವರಿಯಲ್ಲಿ ದಾಂಡೇಲಿ ಪ್ರತ್ಯೇಕ ತಾಲೂಕು ಕಾರ್ಯಾರಂಭ ಮಾಡಿದೆ.

ಪುರಸಭೆ ಕಚೇರಿಯಲ್ಲೇ ತಾತ್ಕಾಲಿಕವಾಗಿ ಪೂರ್ಣಾವಧಿ ತಹಸೀಲ್ದಾರ್ ಕಚೇರಿ ತೆರೆಯಲಾಗಿದೆ. ಕಡತಗಳನ್ನು ಹಳಿಯಾಳ ಹಾಗೂ ಜೊಯಿಡಾದಿಂದ ಹಸ್ತಾಂತರಿಸಲಾಗಿದೆ. ಭೂಮಿ ತಂತ್ರಾಂಶದಲ್ಲಿ ದಾಂಡೇಲಿ ತಾಲೂಕನ್ನು ಸೇರಿಸಲಾಗಿದೆ. ದಾಂಡೇಲಿ ತಾಲೂಕು ಕಚೇರಿಗೆ ಒಬ್ಬ ತಹಸೀಲ್ದಾರ್, 2 ಪ್ರಥಮ ದರ್ಜೆ ಸಹಾಯಕ, ಮೂವರು ದ್ವಿತೀಯ ದರ್ಜೆ ಸಹಾಯಕರು, ಆಹಾರ ನಿರೀಕ್ಷಕ ಸೇರಿ 12 ಹುದ್ದೆಗಳನ್ನು ಸೃಷ್ಟಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇಲಾಖೆಯಿಂದ ಪ್ರತ್ಯೇಕ ವಿಭಾಗ (ಹೆಡ್ ಆಫ್ ಅಕೌಂಟ್) ಸೃಷ್ಟಿ ಮಾಡಲಾಗಿಲ್ಲ. ಪ್ರಾರಂಭಿಕವಾಗಿ 5 ಲಕ್ಷ ರೂ. ಅನುದಾನ ನೀಡಿದ್ದು ಬಿಟ್ಟರೆ, ಹೆಚ್ಚುವರಿ ಅನುದಾನವೂ ಬಂದಿಲ್ಲ. ಇದರಿಂದ ಅಲ್ಲಿಗೆ ಸಿಬ್ಬಂದಿ ನೇಮಕ ಸಾಧ್ಯವಾಗುತ್ತಿಲ್ಲ. ಒಬ್ಬ ತಹಸೀಲ್ದಾರ್, ಅವರಿಗೆ ಒಬ್ಬ ಚಾಲಕ, ಒಬ್ಬ ಸಿಬ್ಬಂದಿ ಬಿಟ್ಟರೆ ಬೇರೆ ಕಾಯಂ ನೌಕರರು ಇಲ್ಲಿ ಇಲ್ಲವಾಗಿದ್ದಾರೆ. ಅಲ್ಲದೆ, ಸರ್ವೆ, ಮುಜರಾಯಿ ಮುಂತಾದ ಕಂದಾಯ ಇಲಾಖೆಯ ಇತರ ವಿಭಾಗಗಳ ಜವಾಬ್ದಾರಿ ವಹಿಸಿಕೊಳ್ಳಲು ಇನ್ನಷ್ಟು ಹುದ್ದೆಗಳನ್ನು ಸೃಷ್ಟಿ ಮಾಡುವುದೂ ಬಾಕಿ ಇದೆ. ಮುಖ್ಯವಾಗಿ ಖಜಾನೆಯ ಶಾಖೆ ರಚಿಸಬೇಕಿದೆ.

ಇತರ ಕಚೇರಿಗಳ ರಚನೆ ಬಾಕಿ: ಒಂದು ವ್ಯವಸ್ಥಿತ ಸಂಪೂರ್ಣ ತಾಲೂಕು ಕೇಂದ್ರ ಕಾರ್ಯನಿರ್ವಹಿಸಲು ಬೇಕಾದ ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ… ಹೀಗೆ ವಿವಿಧ ಇಲಾಖೆಗಳ ಕಚೇರಿ ಸ್ಥಾಪನೆ ಇನ್ನೂ ಬಾಕಿ ಇದೆ. ಅವುಗಳಿಗೆ ಹೆಚ್ಚಿನ ಹುದ್ದೆಗಳನ್ನು ಸೃಷ್ಟಿಸಿ ನೂತನ ಕಚೇರಿಗಳನ್ನು ಪ್ರಾರಂಭಿಸಲು ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಬೇಕಿದೆ.

ತಾಪಂಗಾಗಿ ಹುದ್ದೆಗಳ ಸೃಷ್ಟಿ: ಗ್ರಾಮೀಣಾಭಿವೃದ್ಧಿ ಇಲಾಖೆ ತಾಪಂ ರಚನೆಗಾಗಿ 14 ಹುದ್ದೆಗಳನ್ನು ಸೃಷ್ಟಿ ಮಾಡಿ ಜೂನ್ ತಿಂಗಳಲ್ಲಿ ಮಾಡಿ ಆದೇಶಿಸಿದೆ. ತಾಪಂ ಇಒ, ಯೋಜನಾಧಿಕಾರಿ, ನರೆಗಾ ಸಹಾಯಕ ನಿರ್ದೇಶಕರು, ಕಿರಿಯ ಇಂಜಿನಿಯರ್, ಸಹಾಯಕ ಲೆಕ್ಕಾಧಿಕಾರಿ, ಪ್ರಥಮ ದರ್ಜೆ ಸಹಾಯಕ, ಪ್ರಥಮ ದರ್ಜೆ ಲೆಕ್ಕ ಸಹಾಯಕ, ವಾಹನ ಚಾಲಕರ ತಲಾ 1 ಹುದ್ದೆಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಬೆರಳಚ್ಚುಗಾರ, ಗ್ರುಪ್ ಡಿ ನೌಕರರ ತಲಾ 2 ಹುದ್ದೆಗಳನ್ನು ಸೃಷ್ಟಿ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಹುದ್ದೆಗಳನ್ನು ಭರ್ತಿ ಮಾಡಿ, ಕಚೇರಿ ಕಾರ್ಯನಿರ್ವಹಣೆ ಇನ್ನೂ ಬಾಕಿ ಇದೆ. ಚುನಾವಣೆ ನಡೆಸಿ ತಾಪಂ ಸದಸ್ಯರು, ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಅಲ್ಲದೆ, ಪಂಚಾಯತ್ ರಾಜ್ ಇಲಾಖೆಯ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗವೂ ರಚನೆಯಾಗಬೇಕಿದೆ.

ದಾಂಡೇಲಿ ತಾಲೂಕಿಗೆ ಇದುವರೆಗೂ ಪ್ರತ್ಯೇಕ ಹೆಡ್ ಆಫ್ ಅಕೌಂಟ್ ಸರ್ಕಾರದ ಮಟ್ಟದಲ್ಲಿ ರಚನೆಯಾಗಿಲ್ಲ. ಇದರಿಂದ ಅಲ್ಲಿಗೆ ಸಿಬ್ಬಂದಿ ನೇಮಕ ಮಾಡಿದರೆ ಅವರಿಗೆ ವೇತನ ಪಾವತಿ ಸಾಧ್ಯವಾಗುವುದಿಲ್ಲ. ತಹಸೀಲ್ದಾರ್ ಕಚೇರಿ ಕಾರ್ಯನಿರ್ವಹಣೆಗೆ ಬೇಕಿರುವ ಇತರ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಕಚೇರಿ ಅಥವಾ ಬೇರೆ ತಹಸೀಲ್ದಾರ್ ಕಚೇರಿಗಳಿಂದ ನಿಯೋಜನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳ ಜೊತೆ ರ್ಚಚಿಸಿ ಶೀಘ್ರ ಕ್ರಮ ವಹಿಸಲಾಗುವುದು. ಇತರ ಇಲಾಖೆಗಳ ಕಚೇರಿ ಸ್ಥಾಪನೆಗೆ ಸರ್ಕಾರ ಇನ್ನು ಮುಂದೆ ಆದೇಶಿಸಬೇಕಿದೆ. —- ನಾಗರಾಜ ಸಿಂಗ್ರೇರ್ ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ

……..

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...