ದೇವದುರ್ಗ: ತಾಲೂಕಿನಲ್ಲಿ ಸಂಚಾರ ಠಾಣೆ ಪೊಲೀಸರು ಹೆಲ್ಮೆಟ್ ಕಡ್ಡಾಯ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 15 ದಿನಗಳಲ್ಲಿ ಹೆಲ್ಮೆಟ್ ಧರಿಸದವರ ವಿರುದ್ಧ 400ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಶಹಾಪುರ ರಸ್ತೆ, ರಾಯಚೂರು ರಸ್ತೆಯ ಎಜುಕೇಷನ್ ಲೇಔಟ್, ಜಾಲಹಳ್ಳಿ ರಸ್ತೆಯ ತೋಟಗಾರಿಕೆ ವಲಯ, ಅಂಬೇಡ್ಕರ್ ವೃತ್ತ, ಜಹಿರುದ್ದೀನ್ ಪಾಷಾ ವೃತ್ತ ಸೇರಿದಂತೆ ವಿವಿಧೆಡೆ ಪೊಲೀಸರು ಹೆಲ್ಮೆಟ್ ಕಡ್ಡಾಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಲ್ಮೆಟ್ ಧರಿಸಿದವರೆಗೆ ಹೂ ಕೊಟ್ಟು ಅಭಿನಂದಿಸಿದರೆ, ನಿರ್ಲಕ್ಷ್ಯ ಮಾಡುವವರಿಗೆ ದಂಡ ಹಾಕುತ್ತಿದ್ದಾರೆ.
ಸಂಚಾರ ಪೊಲೀಸರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಹೆಲ್ಮೆಟ್ ಮಾರಾಟವೂ ಚುರುಕು ಪಡೆದಿದೆ. ಪಟ್ಟಣದ ಬೀದಿ ಬದಿಗಳಲ್ಲಿ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಟ್ರಿಪಲ್ ರೈಡಿಂಗ್, ಅತಿವೇಗ, ಚಾಲನಾ ಪರವಾನಗಿ, ವಾಹನ ದಾಖಲೆ ಇಲ್ಲದಿರುವುದು, ಕಾರು ಸೀಟ್‌ಬೆಲ್ಟ್ ಧರಿಸದಿರುವುದು, ಗೂಡ್ಸ್ ಹಾಗೂ ಟಂಟಂ ಆಟೋದಲ್ಲಿ ಕೂಲಿಕಾರರ ಸಾಗಣೆ, ಟಾಪ್‌ನಲ್ಲಿ ಕುಳಿತು ಪ್ರಯಾಣ, ಓವರ್‌ಲೋಡ್‌ಗೂ ದಂಡ ವಿಧಿಸಲಾಗಿದೆ.