ಹೆಲ್ಮೆಟ್ ಧರಿಸದವರಿಗೆ ದಂಡ

ಶಿರಸಿ: ಹೆಲ್ಮೆಟ್ ಹೊಂದಿದ್ದರೂ ಧರಿಸದೇ ಕೈಗೆ ಸಿಲುಕಿಸಿಕೊಂಡು, ಟ್ಯಾಂಕ್ ಮೇಲೆ ಇಟ್ಟುಕೊಂಡು ಬೈಕ್ ಓಡಿಸುವವರಿಗೆ ಎರಡು ಪಟ್ಟು ದಂಡ ವಿಧಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಕುರಿತಂತೆ ಕಳೆದ ಮೂರು ದಿನಗಳಿಂದ ಬೈಕ್ ಸವಾರರನ್ನು ನಿಲ್ಲಿಸಿ ಎಚ್ಚರಿಸುವ ಕಾರ್ಯ ನಗರದಲ್ಲಿ ಪೊಲೀಸರು ನಡೆಸಿದ್ದಾರೆ.

‘ಮೊಟಾರು ವಾಹನ ಕಾಯ್ದೆ 190ರ ಪ್ರಕಾರ ಬೈಕ್ ಸವಾರರು ಹೆಲ್ಮೆಟ್ ಅನ್ನು ಕೈಗೆ ಸಿಲುಕಿಸಿಕೊಳ್ಳುವುದು ಅಪರಾಧವಾಗುತ್ತಿದೆ. ಬೈಕ್ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರಾಯೋಗಿಕವಾಗಿ ದಂಡ ವಿಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಲ್ಮೆಟ್ ಹಾಕದಿರುವವರಿಗೆ ಪರಿಷ್ಕೃತ ದರದ ದಂಡ ವಿಧಿಸುತ್ತೇವೆ’ ಎನ್ನುತ್ತಾರೆ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ. ಪೊಲೀಸರು ಕಳೆದ ನಾಲ್ಕು ದಿನಗಳಿಂದ ನಗರದ ವಿವಿಧೆಡೆ ಬೈಕ್ ಸವಾರರನ್ನು ತಡೆದು ಹೆಲ್ಮೆಟ್ ಧರಿಸಬೇಕಾದ ಅಗತ್ಯ, ಕಾನೂನು ಉಲ್ಲಂಘನೆಗೆ ಕೈಗೊಳ್ಳಲಾಗುವ ಕ್ರಮದ ಬಗ್ಗೆ ತಿಳಿಸಿದ್ದಾರೆ. ಕೆಲವೆಡೆ ಸವಾರರಿಗೆ ದಂಡ ಹಾಕಿದ್ದಾರೆ.

1.55 ಲಕ್ಷ ರೂ. ದಂಡ: ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ದ್ವಿಚಕ್ರ ವಾಹನಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿರುವ ಪೊಲೀಸರು, ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ 155 ಸವಾರರಿಗೆ ಒಟ್ಟು 1.55 ಲಕ್ಷ ರೂ. ದಂಡ ವಿಧಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ 1.20 ಲಕ್ಷ ರೂ., ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ 70 ಸಾವಿರ ರೂ. ದಂಡ ವಸೂಲಾಗಿದೆ.

Leave a Reply

Your email address will not be published. Required fields are marked *