ಹೆಜ್ಜೇನು ದಾಳಿಗೆ ಇಬ್ಬರು ಅಸ್ವಸ್ಥ

ಮುಂಡಗೋಡ: ತಾಲೂಕಿನ ಕಾತೂರ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಕಾರ್ಯಕರ್ತರ ಸಭೆಯ ನಂತರ ಹೆಜ್ಜೇನು ದಾಳಿ ನಡೆಸಿ ಚುನಾವಣೆ ಅಧಿಕಾರಿಯಾಗಿದ್ದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರಿನ ಚಾಲಕನಿಗೆ ಹೆಜ್ಜೇನು ನೊಣಗಳು ಕಚ್ಚಿ ತೀವ್ರ ಅಸ್ವಸ್ಥಗೊಂಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮುಗಿಯುತ್ತಿದ್ದಂತೆಯೇ ಜೇನು ಹುಳುಗಳು ದಾಳಿ ಮಾಡಿವೆ. ಈ ವೇಳೆಯಲ್ಲಿ ಆನಂದ ಅಸ್ನೋಟಿಕರ ತಮ್ಮ ಕಾರಿನತ್ತ ತೆರಳಿದರು. ಅಲ್ಲಿದ್ದ ಸಾರ್ವಜನಿಕರು ಜೇನುಹುಳು ನೋಡಿ ಓಡಲಾರಂಭಿಸಿದರು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಇಒ ಪ್ರವೀಣ ಕಟ್ಟಿ ಮತ್ತು ಅವರ ಕಾರಿನ ಚಾಲಕ ಆನಂದ ರಾಠೋಡ ಜೇನು ಹುಳುಗಳ ದಾಳಿಗೆ ತುತ್ತಾಗಿದ್ದಾರೆ. ಉದ್ದೇಶಪೂರ್ವಕವಾಗಿ ಯಾರೋ ಕಿಡಿಗೇಡಿಗಳು ಅಲ್ಲಿಯೇ ಇದ್ದ ಜೇನು ಗೂಡಿಗೆ ಕಲ್ಲು ಎಸೆದಿರಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.