ಹುಕ್ಕೇರಿ: ತಾಲೂಕಿನ ಹುಲ್ಲೋಳಿ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ರಮೇಶ ನೊಗನಿಹಾಳ ಅವಿರೋಧವಾಗಿ ಆಯ್ಕೆಯಾದರು.

ಕಲ್ಮೇಶ ಅಮ್ಮಣಗಿ ಅವರ ರಾಜೀನಾಮೆಯಿಂದ ತೆರವಾದ ಗ್ರಾಪಂ ಇನ್ನುಳಿದ ೯ ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿಜಯಲಕ್ಷ್ಮೀ ನೊಗನಿಹಾಳ ಆಯ್ಕೆಯಾದರು. ಮಾಜಿ ಸಂಸದ ರಮೇಶ ಕತ್ತಿ ಅವರ ನೇತೃತ್ವದಲ್ಲಿ ಗ್ರಾಮದ ಹಿರಿಯರ ಮಾರ್ಗದರ್ಶನ ಮತ್ತು ಸಲಹೆಯಂತೆ ಅವಿರೋಧ ಆಯ್ಕೆ ಜರುಗಿತು.
ಹಿರಿಯರಾದ ಕಾಡಪ್ಪ ಕುಗಟೋಳಿ, ರಾಜೇಂದ್ರ ಕುಗಟೋಳಿ ಬಾಬಾಗೌಡ ಪಾಟೀಲ, ರಾಮಪ್ಪ ಹುದ್ದಾರ, ಕಲ್ಮೇಶ ಅಮ್ಮಣಗಿ, ಅಣ್ಣಪ್ಪ ಮಾಳಗೆ, ಸತಿಗೌಡ ಪಾಟೀಲ, ಕಲಗೌಡ ಪಾಟೀಲ, ಎಚ್.ಎಲ್.ಪಾಟೀಲ, ಸಾತಪ್ಪ ಚೌಗಲಾ, ಸಿದ್ದಪ್ಪ ಪೂಜೇರಿ, ಪ್ರೀತಿ ಚೌಗಲಾ, ಗಂಗವ್ವ ಪೂಜೇರಿ, ಶಬಾನಾ ಮುಲ್ತಾನಿ, ಶಿವಲೀಲಾ ಮಾಯಪ್ಪಗೋಳ ಇದ್ದರು. ಚುನಾವಣಾ ಅಧಿಕಾರಿಯಾಗಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ ಕಾರ್ಯನಿರ್ವಹಿಸಿದರು.