24.5 C
Bangalore
Sunday, December 8, 2019

ಹುರಳೀಕುಪ್ಪಿ ಕೆರೆಯಲ್ಲಿ ಬರೀ ಹೂಳು!

Latest News

ಡಾಬಾದಲ್ಲಿ ಇಟ್ಟಿದ್ದ 40 ಕೆಜಿ ಈರುಳ್ಳಿ ಕದ್ದೊಯ್ದ ಇಬ್ಬರು ಮಹಿಳೆಯರು; ಪೊಲೀಸರಿಗೆ ದೂರು ನೀಡುವುದಿಲ್ಲವೆಂದ ಮಾಲೀಕ

ಮೊಹಾಲಿ: ಈರುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ನಡುವೆ ಈರುಳ್ಳಿ ಕಳ್ಳರೂ ಹೆಚ್ಚಾಗಿದ್ದಾರೆ. ಹಾಗೇ ಪಂಜಾಬ್​ನ ಮೊಹಾಲಿಯಲ್ಲಿ ಇಬ್ಬರು ಮಹಿಳೆಯರು ಸುಮಾರು 40 ಕೆಜಿ ಈರುಳ್ಳಿಯನ್ನು...

ಪಾವಗಡದ ಆಸ್ಪತ್ರೆ ಮುಂಭಾಗ ಮೃತನ ಸಂಬಂಧಿಕರ ಪ್ರತಿಭಟನೆ

ಪಾವಗಡ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಎಚ್.ಪಾಳ್ಯದ ನವೀನ್(23) ಮೃತಪಟ್ಟಿದ್ದು, ಸಾವಿಗೆ ವೈದ್ಯರ...

ಸಾಸಲು ಗ್ರಾಮದಲ್ಲಿ ತ್ಯಾಜ್ಯ ನೀರಿನ ಸಂಕಷ್ಟ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ವಿದ್ಯಾರ್ಥಿಗಳು ಕೊಳಚೆ ನೀರಲ್ಲೇ ಸಂಚರಿಸುವಂತಾಗಿದೆ. ಗ್ರಾಮದ ಅಣ್ಣಯ್ಯನ ಪಾಳ್ಯದ ತ್ಯಾಜ್ಯ ನೀರು ಶಾಲಾ...

ರಸ್ತೆಯಲ್ಲಿ ಬೇಡ ರಾಗಿ ಒಕ್ಕಣೆ

ಶಿವರಾಜ ಎಂ.ಬೆಂಗಳೂರು: ಸತತ ಬರದಿಂದ ಕಂಗೆಟ್ಟಿದ್ದ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರಾಗಿ ಸಲಿನಿಂದ ‘ಸುಗ್ಗಿ’ ಸಂಭ್ರಮ ಮನೆ ಮಾಡಿದೆ. ಈಗಾಗಲೇ ರಾಗಿ ಕಟಾವು...

ಮಹನೀಯರ ಚರಿತ್ರೆ ಅರಿವಿಗೆ ಛದ್ಮವೇಷ ಪೂರಕ

ವಿಜಯಪುರ: ಮಹಾತ್ಮ ಗಾಂಧಿ, ನೆಹರು, ಭಗತ್‌ಸಿಂಗ್, ಶ್ರೀರಾಮ, ಅಂಬೇಡ್ಕರ್ ಸೇರಿ ಇತರ ಮಹನೀಯರ ವೇಷ-ಭೂಷಣವನ್ನು ಮಕ್ಕಳು ಧರಿಸುವುದರಿಂದ ಅವರ ಜೀವನ ಚರಿತ್ರೆ, ವ್ಯಕ್ತಿತ್ವ, ಅರಿಯಲು ಹಾಗೂ...

ಸವಣೂರ: ತಾಲೂಕಿನ ಹುರಳೀಕುಪ್ಪಿ ಗ್ರಾಮದ ಕೆರೆಯಲ್ಲಿ ಬರೀ ಹೂಳು ತುಂಬಿಕೊಂಡಿದೆ. ಇದರಿಂದ ನೀರು ಸಂಗ್ರಹ ಸಾಮರ್ಥ್ಯ ಕುಂದಿ ಸುತ್ತಿಲಿನ ಗ್ರಾಮಗಳಲ್ಲೂ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ.

ಪ್ರಸಕ್ತ ಸಾಲಿನಲ್ಲಿ ಮಳೆ ವಿಳಂಬವಾಗಿ ಬರಗಾಲ ಘೊಷಣೆಯಾಗಿದೆ. ಆದರೆ, ಇತ್ತೀಚೆಗೆ ಸುರಿಯುತ್ತಿರುವ ಮಳೆಯ ನೀರು ಕೆರೆಗೆ ಹರಿಯುತ್ತಿಲ್ಲ. ಬಂದಿರುವ ಅಲ್ಪಸ್ವಲ್ಪ ನೀರೂ ಕೆರೆಯಲ್ಲಿ ನಿಲ್ಲುತ್ತಿಲ್ಲ.

ಗ್ರಾಮದ 122 ಎಕರೆ ಕೆರೆಯಲ್ಲಿ 59 ಎಕರೆ ಕೆರೆಯನ್ನು ಬಹುಗ್ರಾಮಗಳ (ತಾಲೂಕಿನ 14 ಗ್ರಾಮಗಳಿಗೆ) ಕುಡಿಯುವ ನೀರಿನ ಯೋಜನೆಗೆ ಹಾಗೂ 63 ಎಕರೆ ಕೆರೆ ಭಾಗವನ್ನು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

1969ರಲ್ಲಿ ನಿರ್ವಣಗೊಂಡ ಕೆರೆಯ ಹೂಳೆತ್ತಲು ಸರ್ಕಾರ, ನೀರಾವರಿ ಇಲಾಖೆ ಇದುವರೆಗೂ ಮುಂದಾಗಿಲ್ಲ. ತಾಲೂಕಿನ ಮೆಳ್ಳಾಗಟ್ಟಿ ವರದಾ ನದಿಯಿಂದ ಬಹುಗ್ರಾಮಗಳ (ತಾಲೂಕಿನ 14 ಗ್ರಾಮಗಳಿಗೆ) ಕುಡಿಯುವ ನೀರಿನ ಯೋಜನೆಗಾಗಿ ಹುರಳೀಕುಪ್ಪಿ ಕೆರೆಗೆ ನೀರು ಹರಿಸಲಾಗುತ್ತಿದೆ. ಆದರೆ, ಕೆರೆ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿಲ್ಲ. ನೀರಿನ ಸೌಲಭ್ಯ ದೊರೆಯದೇ ಯೋಜನೆಗೆ ಹಿನ್ನಡೆ ಉಂಟಾಗಿದೆ.

ತಾಲೂಕಿನಲ್ಲಿರುವ ಕೆರೆಗಳ ಹೂಳೆತ್ತಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕಳೆದ 32 ದಿನಗಳಿಂದ ಸವಣೂರ ಉಪವಿಭಾಗಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು, ರಾಜಕೀಯ ಮುಖಂಡರು ಭೇಟಿ ನೀಡಿದರೂ ಕೆರೆ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ದೊರೆಯುತ್ತಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ದೊಡ್ಡ ಕೆರೆಗಳಲ್ಲಿ ಹುರಳೀಕುಪ್ಪಿ ಕೆರೆಯೂ ಒಂದಾಗಿದೆ. ಆದ್ದರಿಂದ, ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ರೈತರಿಗೆ ಅನುಕೂಲವಾಗಲು ಕೆರೆ ಹೂಳು ತೆಗೆಯುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂಬುದು ಸ್ಥಳೀಯ ಹೋರಾಟಗಾರರ ಬೇಡಿಕೆಯಾಗಿದೆ.

ಗ್ರಾಮದ ಕೆರೆಯ ಹೂಳು ಎತ್ತುವ ಮೂಲಕ ಅಭಿವೃದ್ಧಿಪಡಿಸಲು ಒತ್ತಾಯಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಕಂಡುಬರುತ್ತಿಲ್ಲ. ಈ ಕುರಿತು ರೈತ ಸಂಘಟನೆಗಳು ನಿರಂತರ ಹೋರಾಟ ಕೈಗೊಳ್ಳುವಂತಾಗಿರುವುದು ವಿಷಾದನೀಯ ಸಂಗತಿಯಾಗಿದೆ.
ನಾಗಪ್ಪ ತಿಪ್ಪಕ್ಕನವರ ಹುರಳೀಕುಪ್ಪಿ ನಿವಾಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಕೆರೆಗಳು ಅಭಿವೃದ್ಧಿಯಾದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯವಾಗಲಿದೆ. ಸವಣೂರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕೆರೆಗಳ ಹೂಳು ಎತ್ತುವುದು ಸೇರಿದಂತೆ ಸಂಪೂರ್ಣ ಅಭಿವೃದ್ಧಿಗೆ ಒತ್ತಾಯಿಸಿ ನಿರಂತರ ಶಾಂತಿಯುತ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುತ್ತಿದೆ. ಸರ್ಕಾರ ಈ ಕುರಿತು ಕೂಡಲೇ ಗಮನ ನೀಡಬೇಕು.
ಪ್ರಕಾಶ ರ್ಬಾ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ

ರೈತ ಸಂಘಟನೆ ಹಾಗೂ ಸಾರ್ವಜನಿಕರ ಬೇಡಿಕೆಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸವಣೂರ ತಾಲೂಕಿನ ಹುರಳೀಕುಪ್ಪಿ ಗ್ರಾಮದ ಕೆರೆ ಹೂಳು ಎತ್ತಲು ಯೋಜನೆ ರೂಪಿಸಲಾಗುವುದು.
ಗಂಗಾಧರ ಪಟ್ಟಣಶೆಟ್ಟಿಎಇಇ, ಸಣ್ಣ ನೀರಾವರಿ ಇಲಾಖೆ ಉಪವಿಭಾಗ, ಹಾನಗಲ್ಲ

Stay connected

278,749FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...