ಹುಮನಾಬಾದ್​ಗೆ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ

ಹುಮನಾಬಾದ್: ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜತೆಗೆ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೆಲ ಕಾರ್ಯ ಆಗದಿದ್ದರೂ ಅವುಗಳ ಬಗ್ಗೆ ಆದ್ಯತೆ ನೀಡಿ, ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಭರವಸೆ ನೀಡಿದರು.
ಪಟ್ಟಣದ ವಿವಿಧ ವಾರ್ಡ್​ಗಳಲ್ಲಿ ಪುರಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯಥಿಗಳ ಪರ ಭಾನುವಾರ ಪಾದಯಾತ್ರೆ ಮೂಲಕ ಪ್ರಚಾರ ಕೈಗೊಂಡು, ಜನರ ಆಶೀರ್ವಾದದಿಂದ ಪಕ್ಷದ ಐದು ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆಯಾಗಿರುವುದು ಇತಿಹಾಸ ಸೃಷ್ಟಿಸಿದೆ. ಅದೇ ನಿಟ್ಟಿನಲ್ಲಿ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯ ಗಮನದಲ್ಲಿಟ್ಟು ಕಣದಲ್ಲಿರುವ ಕಾಂಗ್ರೆಸ್ನ 22 ಅಭ್ಯರ್ಥಿಗಳಿಗೆ ಗೆಲ್ಲಿಸುವಂತೆ ಕೋರಿದರು.
ವಾರ್ಡ್​ 18, 21, 22, 23, 24, 26, 27 ಸೇರಿ ವಿವಿಧ ವಾರ್ಡ್​ಗಳಲ್ಲಿ ಸಚಿವ ಪಾಟೀಲ್ ಪಕ್ಷದ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು. ಮುಖಂಡ ವೀರಣ್ಣ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ್, ಜಿಪಂ ಸದಸ್ಯ ಲಕ್ಷ್ಮಣರಾವ ಬುಳ್ಳಾ, ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಪಕ್ಷದ ಪ್ರಮುಖರಾದ ಅಫ್ಸರ್ಮಿಯ್ಯಾ, ಮಹಾಂತಯ್ಯ ತೀರ್ಥ, ಪ್ರಕಾಶ ಬತಲಿ, ಮಲ್ಲಿಕಾಜರ್ುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ, ನರೇಂದ್ರ ಮಿಶ್ರಾ, ಡಾ.ಸಿದ್ದು ಪಾಟೀಲ್, ಸುನೀಲ ಪಾಟೀಲ್, ಪ್ರಭು ತಾಳಮಡಗಿ, ಮಲ್ಲಿಕಾರ್ಜುನ ಶರ್ಮಾ, ಉಮೇಶ ಜಮಗಿ, ಗುಂಡುರೆಡ್ಡಿ ಪುಟ್ಕಲ್, ಪಕ್ಷದ ವಿವಿಧ ವಾರ್ಡ್​ಗಳ ಅಭ್ಯರ್ಥಿಗಳು ಇದ್ದರು.

Leave a Reply

Your email address will not be published. Required fields are marked *