ಹುಬ್ಬಳ್ಳಿ : ತನ್ನ ನೆಟ್ವರ್ಕ್ ವಿಸ್ತರಿಸುತ್ತಿರುವ ಸ್ಕೋಡಾ ಆಟೋ ಇಂಡಿಯಾ ಕರ್ನಾಟಕದಲ್ಲಿ ಎರಡು ಹೊಸ ಡೀಲರ್ಶಿಪ್ಗಳಿಗೆ ಚಾಲನೆ ನೀಡಿದೆ. ಇದರ ಅಂಗವಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ರಾಜಾ ಮೋಟಾರ್ಸ್ ಜೊತೆಗೆ ಸ್ಕೋಡಾ ಆಟೋ ಡೀಲರ್ಶಿಪ್ ಹೊಂದಿದೆ. ಇದರ ನೂತನ ರಾಜಾ ಸ್ಕೋಡಾ ಮಳಿಗೆಯನ್ನು ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ನಗರದಲ್ಲಿ ಮಂಗಳವಾರ ರಾಜಾ ಸ್ಕೋಡಾ ಮಳಿಗೆ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸ್ಕೋಡಾ ಬ್ರಾ್ಯಂಡ್ ನಿರ್ದೇಶಕ ಪಿಟರ್ ಜನೆಬ್, 1,853 ಚದುರ ಮೀಟರ್ ವಿಸ್ತೀರ್ಣ ಹೊಂದಿರುವ ಹುಬ್ಬಳ್ಳಿಗೆ ಮಳಿಗೆಯಲ್ಲಿ ವಾಹನ ಮಾರಾಟ ಮತ್ತು ಮಾರಾಟದ ನಂತರದ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಿದೆ. ಮಳಿಗೆಯು ಹೊಸ ಕಾರ್ಪೆರೇಟ್ ಗುರುತಿಗೆ ಅನುಗುಣವಾಗಿದ್ದು, ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ ಎಂದು ತಿಳಿಸಿದರು.
ರಾಜಾ ಮೋಟಾರ್ಸ್ ಸಹಭಾಗಿತ್ವದಲ್ಲಿ ಹೊಸ ಸೌಲಭ್ಯವುಳ್ಳ ಸ್ಕೋಡಾ ಕಂಪನಿಯ 12ನೇ ಮಳಿಗೆ ಇದಾಗಿದೆ. ಅತ್ಯಾಧುನಿಕ ಮಾರಾಟ ಕೇಂದ್ರವು ನಾಲ್ಕು ಕಾರುಗಳ ಪ್ರದರ್ಶನ ಮಹಡಿಯನ್ನು ಹೊಂದಿದೆ. ಸ್ಕೋಡಾ ಸ್ಟ್ರಾಟಜಿ 2030 ರೊಂದಿಗೆ ಹೊಸ ದಶಕದ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಇ-ಮಾಡೆಲ್ಗಳಲ್ಲಿ ಆಕರ್ಷಕ ಶ್ರೇಣಿಯೊಂದಿಗೆ 2030ರ ವೇಳೆಗೆ ಯುರೋಪ್ನಲ್ಲಿ ಹೆಚ್ಚು ಮಾರಾಟವಾಗುವ ಐದು ಬ್ರ್ಯಾಂಡ್ಗಳಲ್ಲಿ ಒಂದಾಗುವ ಗುರಿ ಹೊಂದಿದೆ ಎಂದು ತಿಳಿಸಿದ ಪಿಟರ್ ಜನೆಬ್, ಪ್ರಸ್ತುತ ತನ್ನ ಗ್ರಾಹಕರಿಗೆ ಹನ್ನೊಂದು ಪ್ರಯಾಣಿಕ ಕಾರ್ ಸರಣಿಯನ್ನು ನೀಡುತ್ತಿದೆ. ಫ್ಯಾಬಿಯಾ, ಸ್ಕಾಲಾ, ಆಕ್ಟೇವಿಯಾ ಮತ್ತು ಸುಪರ್ಬ್ ಹಾಗೆಯೇ ಕಮಿಕ್, ಕರೋಕ್, ಕೊಡಿಯಾಕ್, ಎನ್ಯಾಕ್, ಎನ್ಯಾಕ್ ಕೂಪೆ, ಸ್ಲಾವಿಯಾ ಮತ್ತು ಕುಶಾಕ್ ಸರಣಿಯನ್ನು ಒಳಗೊಂಡಿದೆ ಎಂದು ವಿವರಿಸಿದರು.
2023 ರಲ್ಲಿ ಪ್ರಪಂಚದಾದ್ಯಂತದ ಗ್ರಾಹಕರಿಗೆ 8,66,000 ವಾಹನಗಳನ್ನು ವಿತರಿಸಲಾಗಿದೆ. ಸ್ಕೋಡಾ ತನ್ನ ಮಧ್ಯಮ ವರ್ಗದ ಗ್ರಾಕರಿಗೆ ಶೀಘ್ರದಲ್ಲಿಯೇ ಕೈಲಾಕ್ ಕಾರನ್ನು ಘೊಷಿಸಲಿದೆ ಎಂದು ಹೇಳಿದರು.
ಇದೇ ನ. 6ಕ್ಕೆ ಕಾರ್ ಮಾರುಕಟ್ಟೆಗೆ ಬರಲಿದ್ದು, 2025ರ ಜ. 27ಕ್ಕೆ ಕೈಲಾಕ್ ಕಾರ್ ಬುಕ್ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಸ್ಕೋಡಾ ಇವಿ ಮಾದರಿಯ ಕಾರ್ಗಳ ತಯಾರಿಕೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ರಾಜಾ ಮೋಟರ್ಸ್ನ ರಾಜಾ ಸುಚೇಂದ್ರಾ, ಗ್ರಾಹಕ ಫ್ರಾನ್ಸಿಸ್ ಫರ್ನಾಂಡಿಸ್ ಉಪಸ್ಥಿತರಿದ್ದರು.