ಹುಕ್ಕೇರಿ: ವರದಕ್ಷಿಣೆ ಕಿರುಕುಳ, ದೂರು ದಾಖಲು


ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ವಿವಾಹಿತೆಗೆ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯ ತಂದೆ ದೂರು ದಾಖಲಿಸಿದ್ದಾರೆ. ಜ.31ರಂದು ಬೆಲ್ಲದ ಬಾಗೇವಾಡಿಯಲ್ಲಿ ಗೀತಾ ಶಿವಾನಂದ ಗುಡಸಿ (22) ಎಂಬ ಮಹಿಳೆಗೆ ಪತಿ ಶಿವಾನಂದ ಪರಪ್ಪ ಗುಡಸಿ, ಅತ್ತೆ ಸುಮಿತ್ರಾ ಪರಪ್ಪ ಗುಡಸಿ, ಮೈದುನ ಆನಂದ ಪರಪ್ಪ ಗುಡಸಿ ಸೇರಿಕೊಂಡು ತವರು ಮನೆಯಿಂದ ಬಂಗಾರ ಮತ್ತು ಹಣ ತರುವಂತೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆಂದು ಮಹಿಳೆಯ ತಂದೆ ಶಿರಢಾಣ ಗ್ರಾಮದ ಅಣ್ಣಪ್ಪ ಬಸವಣ್ಣಿ ದುರದುಂಡಿ ಶನಿವಾರ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.