Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ಹೀಗೊಂದು ಮೂಷಕ ಚೇಷ್ಟೆ!

Saturday, 15.09.2018, 3:02 AM       No Comments

ಕಿತಾಪತಿ, ಚೇಷ್ಟೆಗಳು ಮಿತಿಮೀರಿದಾಗ ‘ನಿಂದ್ಯಾಕೋ ಅತಿಯಾಯ್ತು ಕಪಿಚೇಷ್ಟೆ’ ಎಂದು ಅಕ್ಕಪಕ್ಕದವರು ಗದರುವುದುಂಟು. ‘ಚೇಷ್ಟೆ’ಯ ಮೂರ್ತರೂಪವೇ ‘ಕಪಿ’ ಎಂಬ ಕೆಲವರ ಗ್ರಹಿಕೆಯೇ ಇದಕ್ಕೆ ಕಾರಣ. ಆದರೆ, ಇಂಥ ‘ಕಪಿ’ಚೇಷ್ಟೆಯಲ್ಲಿ ಇಲಿಗಳೇನೂ ಹಿಂದೆಬಿದ್ದಿಲ್ಲ ಎಂಬ ಮಾತಿಗೆ ಪುಷ್ಟಿನೀಡುವಂಥ ಘಟನೆ ಅಮೆರಿಕದ ವಾಷಿಂಗ್ಟನ್​ನಿಂದ ವರದಿಯಾಗಿದೆ. ಅಲ್ಲಿನ ಅಪಾರ್ಟ್​ವೆುಂಟ್ ಒಂದರ ನಿವಾಸಿಗಳೆಲ್ಲ ಹರಟೆಯಲ್ಲಿ ತೊಡಗಿ ಭಾನುವಾರದ ರಜಾಕಾಲಯನ್ನು ಸವಿಯುತ್ತಿದ್ದರು. ಇದ್ದಕ್ಕಿದ್ದಂತೆ ಅಗ್ನಿ ಅವಘಡದ ಎಚ್ಚರಿಕೆ ಗಂಟೆ ಹೊಡ್ಕೊಳ್ಳೋಕ್ಕೆ ಶುರುವಾದೊಡನೆ ಧಾವಂತದಲ್ಲಿ ಹೊರಗೋಡಿ ಬಂದರು. ಆ ದೊಡ್ಡ ಅಪಾರ್ಟ್​ವೆುಂಟ್​ನ ಯಾವ ಮನೆಗೆ ಬೆಂಕಿ ಹೊತ್ತಿಕೊಂಡಿರಬಹುದು, ಏನೆಲ್ಲ ಅನಾಹುತವಾಗಿರಬಹುದು ಎಂದು ಸುತ್ತೆಲ್ಲ ಅವಲೋಕಿಸಿದಾಗ ಅಂಥ ಒಂದು ಸಣ್ಣ ಸುಳಿವೂ ಗೋಚರಿಸಲಿಲ್ಲ. ಕೊನೆಗೆ ಅಪಾರ್ಟ್ ಮೆಂಟ್​ನ ಭದ್ರತಾ ವಿಭಾಗದಲ್ಲಿ ಇರಿಸಲಾಗಿದ್ದ ಸಿಸಿಟಿವಿಯ ದೃಶ್ಯಾವಳಿಯನ್ನು ಅವಲೋಕಿಸಿದಾಗ ನಿಜಕಾರಣ ಗೊತ್ತಾಯಿತು…. ಆಗಿದ್ದಿಷ್ಟೇ- ಹೆಗ್ಗಣವೊಂದು ಲೋಹದ ಸ್ತಂಭವೊಂದನ್ನು ಲುಟುಲುಟನೆ ಮೇಲೇರಿಕೊಂಡು ಹೋಗಿ ಅಲ್ಲಿಂದ ಮತ್ತೊಂದು ಗೋಡೆಗೆ ಜಿಗಿಯುವಾಗ ಆಯತಪ್ಪಿ, ಆ ಗೋಡೆಯ ಮೇಲೆ ಅಳವಡಿಸಲಾಗಿದ್ದ ಅಗ್ನಿ ಅವಘಡದ ಎಚ್ಚರಿಕೆಯ ಗಂಟೆಯ ಮೇಲೆ ಲ್ಯಾಂಡ್ ಆಯಿತು. ಅದು ಅಲ್ಲೇ ಸುಮ್ಮನಿದ್ದಿದ್ರೆ ಚೆನ್ನಾಗಿತ್ತು; ಆದರೆ ಆ ಗಂಟೆಯ ಲಿವರ್ ಅನ್ನು ಜಗ್ಗಿ ಎಳೆದು ಜೋಕಾಲಿ ಆಡಿದ್ರಿಂದ ಗಂಟೆ ಮೊಳಗಲು ಶುರುವಾಯ್ತು, ಜನ ಜೀವ ಉಳಿಸಿಕೊಳ್ಳಲೆಂದು ಮನೆಗಳಿಂದ ಹೊರಗೋಡಿ ಬಂದರು!- ಇವಿಷ್ಟೂ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ನೆಟ್ಟಿಗರ ಗಮನ ಸೆಳೆಯುವಂತಿದೆ. ಬೆಂಕಿ ಹೊತ್ತಿದೆ ಎಂದು ಗಾಬರಿಗೊಂಡವರು ಆ ಇಲಿಗೆ ಹಿಡಿಶಾಪ ಹಾಕಿರಲಿಕ್ಕೂ ಸಾಕು!

Leave a Reply

Your email address will not be published. Required fields are marked *

Back To Top