More

  ಹಿರೇಮಠಕ್ಕೆ ಶ್ರೀ ಶಿವಪ್ರಸಾದ ನೂತನ ಉತ್ತರಾಧಿಕಾರಿ

  ಯಾದಗಿರಿ: ತಾಲೂಕಿನ ದೋರನಹಳ್ಳಿ ಗ್ರಾಮದ ರಂಭಾಪುರಿ ಸಂಸ್ಥಾನ ಶಾಖಾ ಮಠಕ್ಕೆ ನೂತನ ಉತ್ತರಾಧಿಕಾರಿಯನ್ನಾಗಿ ಉಟಗಿ ಹಿರೇಮಠದ ಶಿವಪ್ರಸಾದ್ ಎಂಬ ವಟುವನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ಪ್ರಸನ್ನ ರೇಣುಕಾ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

  ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರೀಶ ನಿವಾಸದಲ್ಲಿ ಜರುಗಿದ ಸಭೆಯಲ್ಲಿ ಉತ್ತರಾಕಾರಿಯನ್ನು ನಿಯುಕ್ತಿ ಮಾಡಿ ಆಶೀವರ್ಾದಿಸಿರುವುದಾಗಿ ತಿಳಿಸಿದ್ದಾರೆ. ದೋರನಹಳ್ಳಿ ಹಿರೇಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ಅಕಾಲಿಕವಾಗಿ ಲಿಂಗೈಕ್ಯರಾದ ಪ್ರಯುಕ್ತ ಭಕ್ತರ ಸಂಕಲ್ಪಾನುಸಾರ ತೆರವಾದ ಸ್ಥಾನಕ್ಕೆ ರಂಭಾಪುರಿ ಮಹಾಪೀಠದ ಗುರುಕುಲದಲ್ಲಿ ಸಂಸ್ಕೃತ, ಸಾಹಿತ್ಯ, ವೇದಧ್ಯಾಯನ ಪ್ರವೀಣ ಮತ್ತು ಮೈಸೂರು ಮುಕ್ತ ವಿವಿಯಿಂದ ಬಿ.ಕಾಂ. ಪದವಿ ಪಡೆದ ಸತ್ಕುಲ ಪ್ರಸೂತ ಶಿವಪ್ರಕಾಶ್ ಎಂಬ ವಟುವನ್ನು ನಿಯುಕ್ತಿಗೊಳಿಸಿ ಆದೇಶ ಪತ್ರ ನೀಡಿದರು.
  ಬರುವ ಮಾಘ ಮಾಸದಲ್ಲಿ ಶ್ರೀಮಠದ ಜಾತ್ರಾ ಪೂರ್ವ ಸಮಾರಂಭದಲ್ಲಿ ನೂತನ ಶ್ರೀಗಳಿಗೆ ರೇಣುಕ ವೀರ ಮಹಾಂತೇಶ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿದಾನದಿಂದ ಗುರು ಪಟ್ಟಾಕಾರ ನೆರವೇರಿಸಲಾಗುವುದು ಎಂದರು.

  ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಮತ್ತು ಗ್ರಾಮಸ್ಥರಾದ ನಿಂಗನಗೌಡ ಪೊಲೀಸ ಪಾಟೀಲ, ವೀರಭದ್ರಪ್ಪಗೌಡ ಪಸ್ಟೂಲ್, ದೇವೇಂದ್ರಪ್ಪಗೌಡ ಜೋಳದ,ಷಣ್ಮುಖಪ್ಪ ಕಕ್ಕೇರಿ, ಮಲ್ಲಿನಾಥಗೌಡ ಮಲಗೊಂಡ, ತಿಪ್ಪಣ್ಣಸಾಹು ಆಂದೇಲಿ, ತಮ್ಮನಗೌಡ ಜೋಳದ, ಸಂಗಣ್ಣ ಗುಡಿ, ನಿಂಗಣ್ಣ ಮಲಗೊಂಡ ಇದ್ದರು.

  See also  ಕೇಂದ್ರದ ನೂತನ ಸಚಿವರ ಪಟ್ಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts