Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಹಿರೇಕೊಪ್ಪಕ್ಕಿಲ್ಲ ಅಭಿವೃದ್ಧಿ ಭಾಗ್ಯ

Wednesday, 08.08.2018, 10:49 PM       No Comments

ನರಗುಂದ: ಹಳ್ಳಿಗಳ ಅಭಿವೃದ್ಧಿಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಯಾ ಗ್ರಾ.ಪಂ.ಗೆ ನೇರವಾಗಿ ಅನುದಾನ ಬಿಡುಗಡೆಗೊಳಿಸುತ್ತವೆ. ಆದರೆ, ಗುತ್ತಿಗೆ ಪಡೆದವರು ಕಾಮಗಾರಿ ನಿರ್ಲಕ್ಷಿ್ಯದರೆ ಆ ಗ್ರಾಮಗಳ ಸ್ಥಿತಿ ಹೇಗಿರಬೇಡ ಎನ್ನುವುದಕ್ಕೆ ತಾಲೂಕಿನ ಹಿರೇಕೊಪ್ಪ ಸಾಕ್ಷಿಯಾಗಿದೆ.

ಗ್ರಾಮ ವಿಕಾಸ ಯೋಜನೆಯಡಿ ಗ್ರಾಮ ಸುಧಾರಣೆಗೆ 2016ರಲ್ಲಿ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಪ್ರಮುಖ ಭಾಗಗಳಲ್ಲಿ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳನ್ನು ಅಭಿವೃದ್ಧಿಗೊಳಿಸಲು ಮುಂಡರಗಿಯ ಆರ್.ಎಸ್. ಪಾಟೀಲ ಎಂಬುವರಿಗೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು.

ಸಿ.ಸಿ. ರಸ್ತೆ ನಿರ್ವಣಕ್ಕೆ ಮೀಸಲಿದ್ದ ಒಟ್ಟು 37 ಲಕ್ಷ ರೂ. ಅನುದಾನದಲ್ಲಿ ಕೇವಲ 10 ಲಕ್ಷ ರೂ. ಸಿ.ಸಿ. ರಸ್ತೆ ಕಾಮಗಾರಿ ಮತ್ತು 9 ಲಕ್ಷ ರೂ. ಶಾಲಾ ಕಾಂಪೌಂಡ್ ಮಾತ್ರ ಇದೂವರೆಗೆ ನಿರ್ವಣಗೊಂಡಿದೆ. 6.5 ಲಕ್ಷ ರೂ. ವೆಚ್ಚದಲ್ಲಿ ಹೊಸ ಗ್ರಂಥಾಲಯ ಕಟ್ಟಡ ನಿರ್ವಿುಸುವಲ್ಲಿಯೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ವಿಷ್ಣು ಪಂಥ ಅವರ ಅಠಾರಾ ಕಚೇರಿಯನ್ನು ಅವರ ಸ್ಮಾರಕದ ನೆನಪಿನಲ್ಲಿ ಸಭಾಭವನ ನಿರ್ವಿುಸಲು 2.5 ಲಕ್ಷ ರೂ. ತೆಗೆದಿರಿಸಿದ್ದರೂ ಅಲ್ಲೂ ಕಾಮಗಾರಿ ನಡೆಸಿಲ್ಲ. ಕಳೆದ ಎರಡು ವರ್ಷದಿಂದಲೂ ಕಾಮಗಾರಿ ಪೂರ್ಣಗೊಳ್ಳದೇ ಅಭಿವೃದ್ಧಿ ಮರೀಚಿಕೆಯಾಗಿದೆ.

2016 ನೇ ಸಾಲಿನಲ್ಲಿಯೇ ಗ್ರಾಮದ ಅಭಿವೃದ್ಧಿಗಾಗಿ ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ, ಚರಂಡಿ, ಮೂರು ಮಂದಿರಗಳ ನವೀಕರಣ ಕಾಮಗಾರಿಗಾಗಿ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರ ಕಾಮಗಾರಿಗಳನ್ನು ಅರ್ಧ ಭಾಗ ಮಾತ್ರ ಮಾಡಿದ್ದಾರೆ. ಬಾಕಿ ಉಳಿದ ಕಾಮಗಾರಿ ಇದುವರೆಗೆ ಕೈಗೊಂಡಿಲ್ಲ. ಹೀಗಾಗಿ ಕಳೆದ ತಿಂಗಳು ನಡೆದ ಗ್ರಾಪಂ ಸದಸ್ಯರ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಗುತ್ತಿಗೆ ಲೈಸನ್ಸ್ ರದ್ದು ಪಡಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಒಮ್ಮತದ ವರದಿ ಸಲ್ಲಿಸಲಾಗಿದೆ.  ಎಸ್.ಎನ್. ಅರಳಿಕಟ್ಟಿ ಹಿರೇಕೊಪ್ಪ ಗ್ರಾಪಂ ಪಿಡಿಒ  

Leave a Reply

Your email address will not be published. Required fields are marked *

Back To Top