23.2 C
Bangalore
Saturday, December 14, 2019

ಹಿರಿಯ ನಾಗರಿಕರ ರಕ್ಷಣೆಗೆ ಬಾರದ ಕಾಯ್ದೆ

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡಣೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡಣೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

ಕಾರವಾರ: ಉಪವಿಭಾಗಾಧಿಕಾರಿಗಳ ನಿರ್ಲಕ್ಷ್ಯಂದ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅವರ ಸಹಾಯಕ್ಕೆ ಬರದಂತಾಗಿದೆ.

ತಮ್ಮ ಮಕ್ಕಳಿಂದ ಅವಜ್ಞೆಗೆ ಒಳಗಾದ ಪಾಲಕರ ರಕ್ಷಣೆಗೆ ಪ್ರತ್ಯೇಕ ಕಾಯ್ದೆಯೇ ಇದೆ. ಆದರೆ, ಅದರ ಸೌಲಭ್ಯ ಪಡೆಯುವ ಸಲುವಾಗಿ ಹಿರಿಯ ನಾಗರಿಕರು ವರ್ಷಗಟ್ಟಲೆ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ವಣವಾಗಿದೆ.

ಜಿಲ್ಲೆಯ ಕಾರವಾರ ಹಾಗೂ ಕುಮಟಾ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿರುವ ಹಿರಿಯ ನಾಗರಿಕರ ನ್ಯಾಯ ಮಂಡಳಿಯಲ್ಲಿ ನಾಲ್ಕು ಪ್ರಕರಣಗಳು ವರ್ಷದಿಂದ ಕೊಳೆಯುತ್ತಿವೆ. ತೋಡೂರಿನ ಕುಮಾರ ಕಾಂತ ವೆರ್ಣೆಕರ್, ಅಂಕೋಲಾದ ದುರ್ಗಿ ಹೊನ್ನಪ್ಪ ನಾಯ್ಕ, ಕುಮಟಾದ ವಿಕ್ಟೋರಿಯಾ ಜೋಸೆಫ್ ಎಂಬುವವರು ತಮ್ಮ ಮಕ್ಕಳಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಸೂಕ್ತ ನಿರ್ಣಯವಾಗಿಲ್ಲ. ನಿವೃತ್ತ ಸೈನಿಕರ ಪತ್ನಿ ಕಾರವಾರದ ಸರಿತಾ ಬಾಡ್ಕರ್ ಎಂಬುವವರು ತಮ್ಮ ಮಗನಿಂದ ಆಸ್ತಿ ಮರಳಿ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ನಂತರ ಆದೇಶ ಮಾಡಿದ ಉಪವಿಭಾಗಾಧಿಕಾರಿ, ಅವರ ಪ್ರಮುಖ ಬೇಡಿಕೆಯನ್ನೇ ಪುರಸ್ಕರಿಸಿಲ್ಲ ಎಂಬುದು ಅವರ ಆರೋಪ. ಈಗ ಜಿಲ್ಲಾಧಿಕಾರಿ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಮೂರು ತಿಂಗಳ ಅವಕಾಶ: ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ -2007ರ ಅನ್ವಯ ಮಕ್ಕಳು ತಮ್ಮ ಪಾಲಕರನ್ನು ನೋಡಿಕೊಳ್ಳದಿದ್ದಲ್ಲಿ ಅವರಿಗೆ ಜೀವನಾಂಶ ನೀಡಬೇಕು. ಹಾಗೊಮ್ಮೆ ನೀಡದೇ ಇದ್ದಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಹಿರಿಯ ನಾಗರಿಕರ ನ್ಯಾಯಮಂಡಳಿಯಲ್ಲಿ ವೃದ್ಧರು ದಾವೆ ಹೂಡಬಹುದು. ಮೂರು ತಿಂಗಳೊಳಗೆ ಈ ಸಂಬಂಧ ನ್ಯಾಯಮಂಡಳಿ ಆದೇಶ ನೀಡಬೇಕು. ಅದು ಸಾಧ್ಯವಾಗದಿದ್ದಲ್ಲಿ ವೃದ್ಧರ ಜೀವನಕ್ಕೆ ಅನುಕೂಲವಾಗುವಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಕಾಯ್ದೆ ಹೇಳುತ್ತದೆ. ಜೀವನಾಂಶ ನೀಡುವ ಆದೇಶವನ್ನು ಮಕ್ಕಳು ಪಾಲಿಸದೇ ಇದ್ದಲ್ಲಿ ಸಮನ್ಸ್ ಜಾರಿ ಮಾಡಿ ಬಂಧನದ ಆದೇಶ ಹೊರಡಿಸುವ ಅಧಿಕಾರವೂ ನ್ಯಾಯ ಮಂಡಳಿಗೆ ಇದೆ. ಆದರೆ, ಜಿಲ್ಲೆಯಲ್ಲಿ ಕಾಯ್ದೆಗೆ ವ್ಯತಿರಿಕ್ತವಾಗಿ ನಡೆಯುತ್ತಿದೆ. ಮೂರು ತಿಂಗಳು ಕಳೆದರೂ ನ್ಯಾಯಮಂಡಳಿ ಆದೇಶ ನೀಡುತ್ತಿಲ್ಲ. ನ್ಯಾಯ ಮಂಡಳಿ ಆದೇಶಕ್ಕೆ ಹೆಚ್ಚಿನವರು ಬೆಲೆ ಕೊಡುತ್ತಿಲ್ಲ. ನ್ಯಾಯ ಮಂಡಳಿ ಆದೇಶಕ್ಕಾಗಿ ವಯೋವೃದ್ಧರು ಮತ್ತೆ, ಮತ್ತೆ ಕಚೇರಿಗೆ ಅಲೆಯುವಂತಾಗಿದೆ.

ಸಿಎಂ ನೇತೃತ್ವದ ಸಮಿತಿಗೆ ದೂರು: ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯಡಿ ರಾಜ್ಯ ಮಟ್ಟದಲ್ಲಿ ಸಿಎಂ ನೇತೃತ್ವದಲ್ಲಿ ಟಾಸ್ಕ್​ಫೋರ್ಸ್ ಸಮಿತಿ ಇದೆ. ಜಿಲ್ಲೆಯ ನಾಲ್ಕಕ್ಕೂ ಹೆಚ್ಚು ದೂರುಗಳು ಇದುವರೆಗೆ ಟಾಸ್ಕ್​ಫೋರ್ಸ್ ಸಮಿತಿಗೆ ಹೋಗಿವೆ. ಅಲ್ಲಿಂದ ಸೂಚನೆ ಬಂದ ನಂತರ ಕೆಲವು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎನ್ನುತ್ತಾರೆ ಹಿರಿಯ ನಾಗರಿಕರು.

ಮಕ್ಕಳು ಕೈಬಿಟ್ಟವರ ರಕ್ಷಣೆಗೆ ಕಾಯ್ದೆ ರಕ್ಷಣೆ ನೀಡುತ್ತದೆ ಎಂಬುದು ಕಾಗದದಲ್ಲಿ ಮಾತ್ರ. ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ಕಿಂಚಿತ್ತೂ ಜಾರಿಯಾಗುತ್ತಿಲ್ಲ. ಜೀವನಾಂಶ ಕೋರಿ ನಾವು ಅರ್ಜಿ ಸಲ್ಲಿಸಿ ವರ್ಷ ಕಳೆಯುತ್ತ ಬಂತು. ಎಸಿ ಕಚೇರಿಗೆ ಹೋದರೆ ನಾಳೆ, ಬನ್ನಿ, ಇಂದು ಸಾಹೇಬರು ಬ್ಯುಸಿ ಇದ್ದಾರೆ ಎಂಬ ಉತ್ತರ ಬರುತ್ತದೆ. ಈಗ ಸಾಹೇಬರು ವರ್ಗವಾಗಿದ್ದಾರೆ ಎನ್ನುತ್ತಾರೆ. ವೃದ್ಧರಾದವರು ಎಷ್ಟು ಬಾರಿ ಕಚೇರಿಗೆ ಅಲೆಯಲು ಸಾಧ್ಯ. | ಕುಮಾರ ಕಾಂತ ವೆರ್ಣೆಕರ್ ಹಿರಿಯ ನಾಗರಿಕ

ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನಮ್ಮ ಇಲಾಖೆಯ ಒಂದು ಭಾಗ. ಹಿರಿಯ ನಾಗರಿಕರ ಸಂರಕ್ಷಣೆ ಕುರಿತಂತೆ ಸಹಾಯವಾಣಿ, ಕಾರ್ಡ್​ಗಳು ಹಾಗೂ ಇತರ ಕಾರ್ಯಕ್ರಮಗಳು ನಮ್ಮ ಇಲಾಖೆ ಅಡಿ ಬರುತ್ತದೆ. ಆದರೆ, ಜೀವನಾಂಶ ಕೊಡಿಸುವ ವಿಚಾರ ಮಾತ್ರ ನಮ್ಮ ವ್ಯಾಪ್ತಿಯಿಂದ ಹೊರಗಿದೆ. ಆದರೂ ಒಮ್ಮೆ ಈ ಕುರಿತು ರ್ಚಚಿಸುತ್ತೇನೆ. | ರಾಜೇಂದ್ರ ಬೇಕಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...